More

    ತುತ್ತತುದಿಗೇರಿತು ನೆಟ್ಟಿಗರ ಸಂಭ್ರಮ : ಅಷ್ಟಕ್ಕೂ ಉದ್ಯಮಿ ರತನ್ ಟಾಟಾ ಮಾಡಿದ್ದೇನು?

    ನವದೆಹಲಿ: ಕೈಗಾರಿಕಾ ಕ್ಷೇತ್ರದ ದೈತ್ಯ ರತನ್ ಟಾಟಾ, ಜನರನ್ನು ಗೆಲ್ಲುವಂತಹ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅಂಥವುಗಳ ಪೈಕಿ ಇತ್ತೀಚಿನ ಮತ್ತೊಂದು ಪ್ರಮುಖ ಹೃದಯಸ್ಪರ್ಶಿ ಪೋಸ್ಟ್ ಎಂದರೆ ಜಾರ್ಖಂಡ್​​ನ ಜೆಮ್​​ಶೆಡ್​​ಪುರ ಟೆಲ್ಕೊ ಸ್ಥಾವರಕ್ಕೆ ಅವರು ಮೊದಲ ಬಾರಿಗೆ ಭೇಟಿ ನೀಡಿದ ಬಗ್ಗೆ ಅವರು ಹಂಚಿಕೊಂಡ ಫೋಟೋಗಳ ಇತ್ತೀಚಿನ ಪೋಸ್ಟ್.
    “ನಾನು ಕಾಲೇಜಿನ ರಜೆಯಲ್ಲಿದ್ದಾಗ ಜಮ್‌ಶೆಡ್‌ಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು ನನಗೆ ನೆನಪಿದೆ. ಆರ್. ಜಿ. ಡಾ ಕೋಸ್ಟಾ ಮತ್ತು ಜೆ.ಡಿ. ಚೋಕ್ಷಿ ಟೆಲ್ಕೊ ಸ್ಥಾವರಕ್ಕೆ ಭೇಟಿ ನೀಡಲು ನನ್ನನ್ನು ಆಹ್ವಾನಿಸಿದ್ದರು. ನಾನು ಟಾಟಾ ಸ್ಟೀಲ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವುದಕ್ಕಿಂತ ಸಾಕಷ್ಟು ಮುಂಚೆಯೇ ಈ ಪ್ರವಾಸ ಮಾಡಿದ್ದೆ. ಇದು ಪರಂಪರೆಯ ನಗರವಾದ ಜೆಮ್​​ಶೆಡ್​​ಪುರ ನನ್ನ ಮೊದಲ ಭೇಟಿ ಇದಾಗಿತ್ತು ”ಎಂದು ಟಾಟಾ ಬರೆದಿದ್ದಾರೆ.

    ಇದನ್ನೂ ಓದಿ:  ಕಿಲ್ಲರ್​ ಕರೊನಾ ವಿರುದ್ಧದ ಹೋರಾಟಕ್ಕೆ ಉದ್ಯಮಿ ರತನ್​ ಟಾಟಾರಿಂದ 500 ಕೋಟಿ ರೂ. ನೆರವು ಘೋಷಣೆ

    ಟಾಟಾ ಪೋಸ್ಟ್ ಜೊತೆಗೆ ಅದಕ್ಕೆ ಸಂಬಂಧಿಸಿದ ಎರಡು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
    ಈ ಪೋಸ್ಟ್ ಹಂಚಿಕೊಂಡ ಕೇವಲ ಎರಡೇ ಗಂಟೆಗಳಲ್ಲಿ, ನಾಲ್ಕು ಲಕ್ಷ ಲೈಕ್‌ಗಳು, ಟನ್​​​ಗಟ್ಟಲೆ ಪ್ರತಿಕ್ರಿಯೆಗಳು ಬಂದಿವೆ. ಸಂತೋಷ ವ್ಯಕ್ತಪಡಿಸಲು ಹಾರ್ಟ್ ಎಮೋಜಿಗಳನ್ನು ಸಹ ಅನೇಕರು ಬಳಸಿದ್ದಾರೆ.
    “ಈ ಚಿತ್ರಗಳು ನಿಮ್ಮ ಇತಿಹಾಸದ ಭಾಗವಾಗಿದೆ ಮತ್ತು ನಮ್ಮೊಂದಿಗೆ ನೀವಿರುವಂತೆಯೇ ಅವು ಕೂಡಾ ನಮ್ಮವುಗಳೇ” ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ. “ನೀವು ನಿಜವಾದ ಸ್ಫೂರ್ತಿ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ‘ ಆ ನಂತರ ನೀವು ಇಟ್ಟಿದ್ದೇ ಅಳಿಸಲಾಗದ ಹೆಜ್ಜೆ, ‘”ನೀವು ಜೆಮ್​​ಶೆಡ್ಪುರದ ಪ್ರೀತಿ,” ಎಂದೇ ನೆಟ್ಟಿಗರು ರತನ್ ಟಾಟಾ ಅವರನ್ನು ಹೊಗಳಿದ್ದಾರೆ.

    ನಾನು ನೀವು ಮತ್ತು..| ಮೌಲ್ಯಗಳ ಬಲದ ಮೇಲೆ ಉದ್ಯಮಸಾಮ್ರಾಜ್ಯ ಕಟ್ಟಿದ ಟಾಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts