ನಾನು ನೀವು ಮತ್ತು..| ಮೌಲ್ಯಗಳ ಬಲದ ಮೇಲೆ ಉದ್ಯಮಸಾಮ್ರಾಜ್ಯ ಕಟ್ಟಿದ ಟಾಟಾ

ಜೆಮ್​ಷೆಡ್​ಜಿ ಅವರ ನಿಧನದ ನಂತರವೂ (1904ರಲ್ಲಿ) ಟಾಟಾ ಬಲಿಷ್ಠ ಶಕ್ತಿಯಾಗಿ ಮುಂದುವರಿಯಲು ಕಾರಣ ಜೆಮ್​ಷೆಡ್​ಜಿ ಉತ್ತರಾಧಿಕಾರಿಗಳೆಲ್ಲ ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆದದ್ದು. ಅದು ದೇಶಾಭಿಮಾನದ, ಮಾನವಪ್ರೇಮದ ಮಾರ್ಗ. ಬಹುಸಂಖ್ಯೆಯ ಮಂದಿ ಆಯ್ಕೆ ಮಾಡಿಕೊಳ್ಳದ ಸುಲಭವಲ್ಲದ ಹಾದಿ. ಈ ಉತ್ತರಾಧಿಕಾರಿಗಳಲ್ಲಿ ಜಗತ್ತಿನ ಗಮನ ಸೆಳೆದವರು ಜೆಆರ್​ಡಿ ಟಾಟಾ ಮತ್ತು ರತನ್ ಟಾಟಾ. 1938ರಲ್ಲಿ ಕಂಪನಿಯ ಆಡಳಿತದ ಚುಕ್ಕಾಣಿ ಹಿಡಿದವರು ಜೆಮ್​ಷೆಡ್​ಜಿಯವರ ವಿಶಿಷ್ಟ ಹಿನ್ನೆಲೆಯ ದೂರದ ಸಂಬಂಧಿ, ನಮಗೆಲ್ಲ ಜೆಆರ್​ಡಿ ಟಾಟಾ ಎಂದೇ ಪರಿಚಿತರಾಗಿರುವ ಜಹಾಂಗಿರ್ ರತನ್​ಜಿ ದಾದಾಭಾಯಿ ಟಾಟಾ! … Continue reading ನಾನು ನೀವು ಮತ್ತು..| ಮೌಲ್ಯಗಳ ಬಲದ ಮೇಲೆ ಉದ್ಯಮಸಾಮ್ರಾಜ್ಯ ಕಟ್ಟಿದ ಟಾಟಾ