More

    ರಶ್ಮಿಕಾ ಮಂದಣ್ಣ ‘ಗುಡ್ ಬಾಯ್’!

    ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಬಿಟೌನ್​ನಿಂದ ತೇಲಿಬಂದಿತ್ತು. ಆದರೆ, ಆ ಸಿನಿಮಾ ಬಗ್ಗೆ ಈವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಹೀಗಿರುವಾಗಲೇ ಮತ್ತೊಂದು ಸುದ್ದಿ ಅಲ್ಲಿಂದಲೇ ಬಂದಿದೆ. ಆ ಚಿತ್ರಕ್ಕೆ ‘ಗುಡ್ ಬಾಯ್’ ಎಂಬ ಶೀರ್ಷಿಕೆ ಇಡಲಾಗಿದೆಯಂತೆ. ಈ ಮೊದಲು ‘ಡೆಡ್ಲಿ’ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿತ್ತಾದರೂ, ಇದೀಗ ಅದನ್ನು ಬದಲಿಸಿಕೊಂಡು ‘ಗುಡ್ ಬಾಯ್’ ಎಂದು ಮರು ನಾಮಕರಣ ಮಾಡಿದ್ದಾರಂತೆ. ಅಷ್ಟೇ ಅಲ್ಲ ಇದೇ ತಿಂಗಳ 29ರಂದು ಶೂಟಿಂಗ್ ಸಹ ಶುರುವಾಗಲಿದೆ.

    ಅಪ್ಪ ಮತ್ತು ಮಗಳ ಹಿನ್ನೆಲೆಯ ಸಿನಿಮಾ ಇದಾಗಿರಲಿದ್ದು, ನಿವೃತ್ತ ಆರ್ವಿು ಅಧಿಕಾರಿಯ ಪಾತ್ರದಲ್ಲಿ ಅಮಿತಾಭ್ ಕಾಣಿಸಿಕೊಂಡರೆ, ಅವರಿಗೆ ರಶ್ಮಿಕಾ ಮಗಳಾಗಲಿದ್ದಾರೆ. ಈ ಚಿತ್ರಕ್ಕಾಗಿ 5 ಕೋಟಿ ರೂ. ಸಂಭಾವನೆಯನ್ನೂ ರಶ್ಮಿಕಾ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ಕ್ವೀನ್’, ‘ಸೂಪರ್ 30’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಕಾಸ್ ಬಹ್ಲ್ ಈ ಚಿತ್ರಕ್ಕೆ ಆಕ್ಟನ್ ಕಟ್ ಹೇಳಲಿದ್ದಾರೆ. ನೀನಾ ಗುಪ್ತಾ ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿರಲಿದ್ದಾರೆ. ರಿಲಯನ್ಸ್ ಎಂಟರ್​ಟೈನ್​ವೆುಂಟ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಇನ್ನು ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಖಾತೆ ತೆರೆದಿರುವ ರಶ್ಮಿಕಾ, ಆ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಅದರ ಜತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜತೆಗೆ ‘ಪುಷ್ಪ’ಸಿನಿಮಾ ಸೇರಿ ಇನ್ನೂ ಎರಡ್ಮೂರು ಸಿನಿಮಾಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.

    ಕಣ್ಣಿದ್ದೂ ಕುರುಡನಾದ ಗೋಲ್ಡನ್ ಸ್ಟಾರ್; ‘ಸಿಂಪಲ್’ ಸುನಿ ನಿರ್ದೇಶನದ ‘ಸಖತ್’ ಸವಾಲಿನ ಪಾತ್ರದಲ್ಲಿ ಗಣೇಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts