More

    ಕರುನಾಡ ಕ್ರಶ್​ ರಶ್ಮಿಕಾರ ಮೊದಲ ಚಿತ್ರದ ಹಾಗೂ ಈಗ ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರಾ!

    ಬೆಂಗಳೂರು: ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಪ್ರವೇಶ ನೀಡಿ ಅತ್ಯಲ್ಪ ಅವಧಿಯಲ್ಲೇ ಸ್ಟಾರ್​ ನಟಿಯಾಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ ಪರಭಾಷ ಚಿತ್ರಗಳಲ್ಲಿಯೂ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಯಶಸ್ವಿ ಸಿನಿಮಾಗಳೊಟ್ಟಿಗೆ ಬೇಡವಾದ ವಿವಾದವನ್ನು ಸೃಷ್ಟಿ ಮಾಡಿಕೊಂಡು ಸದಾ ಸುದ್ದಿಯಾಗುತ್ತಿದ್ದ ನಟಿ ರಶ್ಮಿಕಾಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್​ ನೀಡಿದ್ದರು.

    ಕೊಡಗಿನ ವಿರಾಜಪೇಟೆಯಲ್ಲಿರುವ ನಿವಾಸ ಮೇಲೆ ಐಟಿ ದಾಳಿಯಾಗಿತ್ತು. ಈ ಸಂಬಂಧ ಮೈಸೂರಿನಲ್ಲಿ ನಡೆದ ವಿಚಾರಣೆಗೂ ರಶ್ಮಿಕಾ ಹಾಜರಾಗಿದ್ದರು. ಐಟಿ ದಾಳಿ ಬೆನ್ನಲ್ಲೇ ರಶ್ಮಿಕಾ ಸಂಭಾವನೆ ಹಾಗೂ ಆಸ್ತಿ ವಿಚಾರವಾಗಿ ಸಾಕಷ್ಟು ಚರ್ಚೆಗಳಾದವು. ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ರಶ್ಮಿಕಾ ತಂದೆ ಮದನ್​ ಮಂದಣ್ಣ ಅವರು ರಶ್ಮಿಕಾ ಸಿನಿಮಾ ಸಂಭಾವನೆ ಕುರಿತಾದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಕಿರಿಕ್ ಪಾರ್ಟಿ ಕನ್ನಡ ಚಿತ್ರದ ನಾಯಕಿ ನಟಿಯಾಗಿ ನಟಿಸುವುದರ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ರಶ್ಮಿಕಾ, ಮೊದಲ ಚಿತ್ರದಲ್ಲಿ 2.50 ಲಕ್ಷ ರೂ. ಸಂಭಾವನೆ ಪಡೆದರು. ತದನಂತರ ನಟಿಸಿದ ಅಂಜನಿಪುತ್ರ ಮತ್ತು ಚಮಕ್​ ಎರಡು ಕನ್ನಡ ಚಿತ್ರದಲ್ಲಿ ತಲಾ 8 ಲಕ್ಷ ಮತ್ತು 12 ಲಕ್ಷ ರೂ. ಸಂಭಾವನೆ ಪಡೆದಿದ್ದರು. ತೆಲುಗಿನ ಮೊದಲ ಚಲೋ ಚಿತ್ರದಲ್ಲಿ 25 ಲಕ್ಷ ರೂ. ಸಂಭಾವನೆ ಪಡೆದಿದ್ದರು. ತೆಲುಗಿನಲ್ಲಿ 60 ಲಕ್ಷ ರೂ. ಸಂಭಾವನೆ ಪಡೆಯುವುದರೊಂದಿಗೆ ಇದೀಗ 1 ಕೋಟಿ ರೂ. ಸಂಭಾವನೆ ಪಡೆಯುವ ಮಟ್ಟಕ್ಕೆ ತಲುಪಿದ್ದಾರಂತೆ.

    ಐಟಿ ದಾಳಿ ಬಗ್ಗೆ ಮಾತನಾಡಿರುವ ರಶ್ಮಿಕಾ ತಂದೆ ಮುಂಡಚಾಡೀರ ಮದನ್ ಮಂದಣ್ಣ, 23ರ ಪ್ರಾಯದಲ್ಲಿ ನನ್ನ ಮಗಳು ಕೋಟ್ಯಂತರ ರೂ. ಸಂಪಾದನೆ ಮಾಡಿದ್ದು, ಆಕೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ನಮ್ಮೂರಿನ ಜನ ನವದೆಹಲಿಯ ಐಟಿ ಕಚೇರಿಗೆ ದೂರು ನೀಡುವ ಮೂಲಕ ದಾಳಿ ನಡೆಯುವಂತೆ ಮಾಡಿದ್ದಾರೆ. ಇದರಿಂದ ರಶ್ಮಿಕಾ ತುಂಬಾ ನೊಂದು ಕೊಂಡಿದ್ದಾರೆ. ಅದಕ್ಕಾಗಿ ಉದ್ದೇಶಿತ ಯೋಜನೆಗೆ ಬ್ರೇಕ್ ಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts