More

    ರಾಮನವಮಿಯಂದು ಮುಸ್ಲಿಂ ಯುವತಿಯಾಗಿ ಮಿಂಚಿದ ರಶ್ಮಿಕಾ; ಕಿಕ್ ಕೊಡುತ್ತೆ ಹೊಸ ಚಿತ್ರದ ಲುಕ್

    ಈಗಾಗಲೇ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಶೂಟಿಂಗ್ ಮುಗಿಸಿರುವ ಎರಡು ಹಿಂದಿ ಸಿನಿಮಾಗಳ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗುತ್ತಿದ್ದಾರೆ. ಇದರ ಜತೆಗೆ, ಮೂರು ಸಿನಿಮಾಗಳಿಗೆ ಈಗ ತಾನೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ನಡುವೆ ನಟಿ ರಶ್ಮಿಕಾ ಅವರ ಮತ್ತೊಂದು ಹೊಸ ತೆಲುಗು ಸಿನಿಮಾ ಸೆಟ್ಟೇರಿದೆ. ಹೌದು, ‘ಪುಷ್ಪ 2′ ಎಂಬ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ನಟಿ ರಶ್ಮಿಕಾಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟಿಯನ್ನು ಮಾಡಿದೆ ಎಂದರೇ ತಪ್ಪಾಗುವುದಿಲ್ಲ. ಕಳೆದ 6 ತಿಂಗಳಿಂದ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ಸಿನಿಮಾದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಿಜ ಹೇಳಬೇಕು ಅಂದರೆ ದಕ್ಷಿಣದಿಂದ ಉತ್ತರದವರೆಗೂ ಬರೀ ನ್ಯಾಷನಲ್ ಕ್ರಶ್ ರಶ್ಮಿಕಾ ಅವರು ಒಬ್ಬರೇ ಸಖತ್ ಸೌಂಡ್ ಮಾಡುತ್ತಿರುವ ನಟಿಯಾಗಿದ್ದಾರೆ. ಅದರಲ್ಲಿಯೂ, ಡೇಟ್​ಗಳು ಇಲ್ಲದ ಕಾರಣ ಹಲವು ಸಿನಿಮಾಗಳ ಆಫರ್​ಗಳನ್ನು ರಶ್ಮಿಕಾ ಅವರು ತಿರಸ್ಕರಿಸುವ ಸುದ್ದಿಗಳು ಕೇಳಿಬಂದಿವೆ. ಹಾಗಾದರೆ, ಈಗ ನಟಿ ಯಾವ ಸಿನಿಮಾದಿಂದ ಸುದ್ದಿಯಲ್ಲಿದ್ದಾರೆ ಅಂತೀರಾ…?
    ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಎಂದು ಬಹುತೇಕ ಎಲ್ಲಾ ವುಡ್‌ಗಳಲ್ಲಿಯೂ ರಶ್ಮಿಕಾ ಸದ್ದು ಮಾಡುತ್ತಲೇ ಇದ್ದು, ಸದ್ಯ ತೆಲುಗಿನ ಸೀತಾ ರಾಮಂಎಂಬ ಸಿನಿಮಾದಲ್ಲಿನ ತಮ್ಮ ಲುಕ್​ಗೆಂದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ, ನಟ ದುಲ್ಖರ್ ಸಲ್ಮಾನ್, ನಟಿ ಮೃಣಾಲ್ ಠಾಕೂರ್ ಅವರು ನಟಿಸುತ್ತಿರುವ ಈ ಹೊಸ ಸಿನಿಮಾದ ಟೈಟಲ್‌ ರಿವೀಲ್ ಆಗಿದೆ. ಹೌದು, ರಾಮನವಮಿಯಂದೇ ಈ ಚಿತ್ರದ ಟೈಟಲ್ ಸೀತಾ ರಾಮಂಎಂದು ಅನೌನ್ಸ್ ಮಾಡಲಾಗಿದೆ. ಈ ತೆಲುಗು ಸಿನಿಮಾ ಕೇವಲ ತೆಲುಗು ಭಾಷೆಯಲ್ಲದೇ, ತಮಿಳು, ಮಳಯಾಲಂ, ಹಿಂದಿ ಭಾಷೆಗಳಲ್ಲಿ ಸಹ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಆದರೆ, ರಾಮನವಮಿಯಂದು ಕೇವಲ ಈ ಸಿನಿಮಾ ಟೈಟಲ್ ಮಾತ್ರವಲ್ಲದೇ ಸಿನಿಪ್ರಿಯರಿಗೆ ಈ ಚಿತ್ರದ ಒಂದು ವಿಡಿಯೋ ರಿಲೀಸ್ ಸಹ ಉಡುಗೊರೆಯಾಗಿ ಸಿಕ್ಕಿದೆ. ಹಾಗಾಗಿ, ಸಣ್ಣ ಟೀಸರ್ ಅಥವಾ ವಿಡಿಯೋ ನೋಡಿದ್ಮೇಲೆ ಸಿನಿಪ್ರಿಯರಲ್ಲಿ ರಶ್ಮಿಕಾ ಅವರ ಪಾತ್ರ ಥ್ರಿಲ್, ಶಾಕ್ ಮಾಡಿದೆ. ಕಾರಣ, ಇದೇ ಮೊದಲ ಬಾರಿಗೆ ನಟಿ ರಶ್ಮಿಕಾ ಮಂದಣ್ಣ ಒಂದು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅವರು ಮುಸ್ಲಿಂ ಯುವತಿಯ ಪಾತ್ರದಲ್ಲಿ (ಅಫ್ರಿನ್) ಬೆಳ್ಳಿ ತೆರೆಯ ಮೇಲೆ ಮಿಂಚಲಿದ್ದಾರೆ ಎಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
    ಅಂದಹಾಗೆ, ‘ಸೀತಾ ರಾಮಂಟಾಲಿವುಡ್‌ನ ಖ್ಯಾತ ನಿರ್ದೇಶಕ ಹನು ರಾಘವಪುಡಿ ಅವರು ನಿರ್ದೇಶಿಸುತ್ತಿರುವ ಸಿನಿಮಾ ಆಗಿದ್ದು, ನಟ ದುಲ್ಖರ್ ಸಲ್ಮಾನ್ ಹಾಗೂ ನಟಿ ಮೃಣಾಲ್ ಠಾಕೂರ್ ಈ ಚಿತ್ರದಲ್ಲಿ ಪ್ರೇಮಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈ ಇಬ್ಬರ ಜತೆಗೆ ಒಂದು ವಿಶೇಷ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಸಹ ತೆರೆ ಹಂಚಿಕೊಳ್ಳಲಿದ್ದಾರೆ. ಸಹಜವಾಗಿಯೇ, ರಶ್ಮಿಕಾ ಅವರು ಇದೂವರೆಗೆ ಕೇವಲ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಕಾರಣ, ಇನ್ನು ಇದೇ ಮೊದಲ ಬಾರಿಗೆ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಈ ಪಾತ್ರ ತುಂಬಾ ವಿಭಿನ್ನವಾಗಿರಬಹುದು. ಹಾಗಾಗಿಯೇ, ನಟಿ ರಶ್ಮಿಕಾ ಅವರು ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗುತ್ತಿದೆ. ರಾಮನವಮಿಯಂದು ರಿಲೀಸ್ ಆದ ಸಣ್ಣ ವಿಡಿಯೋ ಕಂಡ ಹಲವು ನೆಟ್ಟಿಗರು, ಸಿನಿಪ್ರಿಯರ ಪ್ರಕಾರ ಈ ಸಿನಿಮಾ ಒಂದು ಯುದ್ಧದ ಹಿನ್ನೆಲೆಯನ್ನು ಕಥೆಯನ್ನಾಗಿ ಹೊಂದಿರುವ ಕಾರಣ, ಈ ಹಿಂದಿನ ದಿಲ್ ಸೇಹಾಗೂ ರೋಜಾಸಿನಿಮಾಗಳನ್ನು ಇದು ನೆನಪಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈಗ, ಈ ಚಿತ್ರದ ಸಣ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

    ವಾರ ಪೂರ್ತಿ ‘ಕೆಜಿಎಫ್ 2’ದೇ ಬಾಕ್ಸ್ ಆಫೀಸ್​ನಲ್ಲಿ ಹವಾ; ಕನ್ನಡ ನಟನ ಚಿತ್ರಕ್ಕೆ ಹೆದರಿ ಸೈಡ್ ಕೊಟ್ಟ ಬಾಲಿವುಡ್ ನಟ!

    ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts