More

    ರಶ್ಮಿಕಾ ಟಕ್ಕರ್!; ಕಲರ್​ಫುಲ್ ಹಾಡಿಗೆ ಹೆಜ್ಜೆ ಹಾಕಿದ ಕನ್ನಡತಿ

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಸಂಚಲನ ಉಂಟುಮಾಡಿರುವ ನ್ಯಾಷನಲ್ ಕ್ರಷ್ ಎಂದೇ ಕರೆಸಿಕೊಳ್ಳುವ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ನತ್ತ ಮುಖ ಮಾಡಿರುವುದು ಗೊತ್ತಿರುವ ವಿಚಾರವೇ. ಇತ್ತೀಚೆಗಷ್ಟೇ ಬಾಲಿವುಡ್​ನ ಟಾಪ್ ರ್ಯಾಪರ್ ಬಾದ್​ಷಾ ಅವರ ಹಾಡಿನಲ್ಲಿ ರಶ್ಮಿಕಾ ಹೆಜ್ಜೆ ಹಾಕಿ ಬಂದಿರುವುದೂ ದೊಡ್ಡ ಸುದ್ದಿಯಾಗಿತ್ತು. ಇದೀಗ ಅದೇ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ. ಹೌದು, ಇಲ್ಲಿಯವರೆಗೂ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ, ಮೊದಲ ಬಾರಿಗೆ ಮ್ಯೂಸಿಕ್ ಜಗತ್ತಿಗೆ ಪದಾರ್ಪಣೆ ಮಾಡಿದ್ದಾರೆ. ‘ಟಾಪ್ ಟಕ್ಕರ್’ ಶೀರ್ಷಿಕೆಯ ಹಾಡಿಗೆ ಬಾದ್​ಷಾ ಧ್ವನಿ ನೀಡಿದ್ದು, ರಶ್ಮಿಕಾ ಮೈ ಚಳಿ ಬಿಟ್ಟು ಕುಣಿದಿದ್ದಾರೆ.

    ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಹಾಡಿಗೆ ಬಾಲಿವುಡ್​ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಯಶ್​ರಾಜ್ ಫಿಲಂಸ್ ಬಂಡವಾಳ ಹಾಕಿದೆ. ಈ ಹಾಡಿನ ಸಲುವಾಗಿ ಚಂಡಿಗಢದಲ್ಲಿ ಕಲರ್​ಫುಲ್ ಸೆಟ್ ಹಾಕಿ ಅದ್ಧೂರಿ ವೆಚ್ಚದಲ್ಲಿಯೇ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಅಂದಹಾಗೆ, ಇಳಯರಾಜಾ ಪುತ್ರ ಯುವನ್ ಶಂಕರ್ ರಾಜಾ ಸಂಗೀತ ನೀಡಿರುವ ಈ ಹಾಡಿಗೆ ರ್ಯಾಪರ್ ಬಾದ್​ಷಾ, ಉಚಾನ್ ಅಮೀತ್, ಜೋನಿತಾ ಗಾಂಧಿ ಧ್ವನಿ ನೀಡಿದ್ದಾರೆ. ‘ಟಾಪ್ ಟಕ್ಕರ್’ ಹಾಡಿಗೆ ಬಾದ್​ಷಾ ಸಾಹಿತ್ಯ ಬರೆದಿದ್ದಾರೆ. ಅಮರ್​ಪ್ರೀತ್ ಛಾಬ್ರಾ ನಿರ್ದೇಶನದ ಈ ಹಾಡಿಗೆ ರಿಚ್ಚಿ ಬರ್ಟನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts