More

    ರಶ್ಮಿಕಾ ಮಂದಣ್ಣ ಹೈದರಾಬಾದ್ ಮನೆಗೆ ಹೊಸ ಅತಿಥಿ: ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ

    ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಕನ್ನಡದ ಜತೆಗೆ ತೆಲುಗಿನಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಬಿಜಿ ನಟಿ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​ನಲ್ಲೂ ಅವರು ಖಾತೆ ತೆರೆದಿದ್ದು ಗೊತ್ತೇ ಇದೆ. ಹೀಗಿರುವಾಗಲೇ ಇಷ್ಟೆಲ್ಲ ಕೆಲಸಗಳ ನಡುವೆ ರಶ್ಮಿಕಾ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಕನ್ನಡದ ನಿರ್ಮಾಪಕರು ಮೀಟಿಂಗ್​ ಮಾಡಿದ್ದು ಯಾಕೆ?

    ಹೌದು, ನಟಿ ರಶ್ಮಿಕಾ ಮನೆಗೆ ಬಂದ ಅತಿಥಿ ಹೊಸದಾದ ರೇಂಜ್​ ರೋವರ್ ಕಾರು. ಆ ಕಾರಿನ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಆ ಖುಷಿಯನ್ನು ಒಂದಷ್ಟು ಪದಗಳಲ್ಲಿ ಹಂಚಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಹೈದರಾಬಾದ್ ಮನೆಗೆ ಹೊಸ ಅತಿಥಿ: ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ

    ‘ನಾನೀಗ ನಿಮ್ಮ ಬಳಿ ಖುಷಿಯ ವಿಚಾರವೊಂದನ್ನು ಹಂಚಿಕೊಳ್ಳಲಿದ್ದೇನೆ. ಏಕೆಂದರೆ ನೀವೂ ಆ ಪಯಣದ ಭಾಗವಾಗಿದ್ದೀರಿ. ನೀವು ಅದನ್ನು ತಿಳಿದುಕೊಳ್ಳಲೇಬೇಕು. ಈ ಮೊದಲು ನಾನು ಇಷ್ಟೊಂದು ಸಾಮರ್ಥ್ಯವುಳ್ಳ ವ್ಯಕ್ತಿ ಆಗುತ್ತೇನೆ ಎಂದು ಭಾವಿಸಿರಲಿಲ್ಲ. ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ಮತ್ತು ನಿಮ್ಮಂತೆಯೇ ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಕಠಿಣ ದಿನಗಳನ್ನು ಯೋಗ್ಯವಾಗಿಸಿದ್ದಕ್ಕೆ’ ಎಂದಿದ್ದಾರೆ.

    ಇದನ್ನೂ ಓದಿ: ಶೇ. 100ರಷ್ಟು ಹಾಜರಾತಿ ರದ್ದು … ‘ಮಾಸ್ಟರ್​’ ಬಿಡುಗಡೆಗೆ ಹಿನ್ನೆಡೆ

    ಅಂದಹಾಗೆ, ರಶ್ಮಿಕಾ ಅವರ ಕನ್ನಡದಲ್ಲಿ ಸದ್ಯ ತೆರೆಕಾಣಲಿರುವ ಸಿನಿಮಾ ಒಂದೇ ಒಂದು. ಅದು ಪೊಗರು. ಆದರೆ, ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಇದೀಗ ತೆಲಂಗಾಣ ಸ್ಟೇಟ್ ಪಾಸಿಂಗ್​ ಇರುವ ಕಾರನ್ನೇ ಅವರು ಖರೀದಿ ಮಾಡಿದ್ದಾರೆ.

    ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts