More

    ಪಿಜ್ಜಾ ಅಂಗಡಿ ಫ್ರಿಜ್‌ನಲ್ಲಿ 36 ಕೆ.ಜಿ ಸತ್ತ ಉಡ, ಜಿರಳೆ!

    ಫ್ಲೊರಿಡಾ: ಚೀನಾದಲ್ಲಿ ಹರಿದಾಡುವ ಎಲ್ಲಾ ಪ್ರಾಣಿ, ಕ್ರಿಮಿ-ಕೀಟಗಳನ್ನು ತಿನ್ನುವುದು ಹೊಸದೇನಲ್ಲ. ಆದರೆ ಅಮೆರಿಕದ ಪಿಜ್ಜಾ ಅಂಗಡಿಯೊಂದರಲ್ಲಿ 36 ಕೆ.ಜಿ ಬೃಹದಾಕಾರವಾಗಿರುವ ಉಡವೊಂದು ‍ಪತ್ತೆಯಾಗಿದ್ದು, ಇದರ ಬಗ್ಗೆ ತನಿಖೆ ನಡೆದಿದೆ.

    ಫ್ಲೊರಿಡಾದ ಅಂಗಡಿಯಲ್ಲಿ ಕಂಡು ಬಂದಿರುವ ಉಡ ಸತ್ತುಹೋಗಿದ್ದು, ಅದನ್ನು ಫ್ರಿಜ್‌ನಲ್ಲಿ ಏಕೆ ಇಟ್ಟರು, ಅದರಲ್ಲಿಯೂ ಪಿಜ್ಜಾ ಅಂಗಡಿಗೂ ಉಡಕ್ಕೂ ಏನು ಸಂಬಂಧ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಫ್ಲೋರಿಡಾದ ಮಾಂಬೊದ ವೆಸ್ಟ್ ಪಾಮ್ ಫಿಜಾರಿಯಾದ ಆರೋಗ್ಯ ಇಲಾಖೆ ಇನ್ಸ್ ಪೆಕ್ಟರ್ ಮಾಮೂಲಿ ತಪಾಸಣೆ ಮಾಡುತ್ತಿರುವ ವೇಳೆ ಈ ಉಡ ಪತ್ತೆಯಾಗಿದೆ.

    ಇದನ್ನೂ ಓದಿ:  ಯುರೋಪ್​ನ ಈ ನಗರದಲ್ಲಿ ವಿದ್ಯುತ್​ಚಾಲಿತ ಬೈಕ್​ ಸೇರಿ ಎಲ್ಲ ಬಗೆಯ ಬೈಕ್​ಗಳ ನಿಷೇಧ

    ಅಮೆರಿಕದಲ್ಲಿ ಉಡ ಸಾಕಲು ಕಾನೂನು ಅವಕಾಶ ಕಲ್ಪಿಸಿದೆ. ನಾವು ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವಂತೆ ಅಲ್ಲಿ ಉಡವನ್ನೂ ಸಾಕಲು ಅವಕಾಶವಿದೆ. ಹಾಗೊಂದು ವೇಳೆ ಈ ಅಂಗಡಿ ಮಾಲೀಕ ಉಡ ಸಾಕಿಕೊಂಡಿರಲು ಸಾಧ್ಯವಿದೆ ಎಂದು ಮೊದಲು ಪೊಲೀಸರು ಅಂದುಕೊಂಡರು. ಅದಕ್ಕೆ ತಕ್ಕಂತೆ ಮಾಲೀಕ ಕೂಡ ಇದೇ ರೀತಿ ಹಾರಿಕೆ ಉತ್ತರ ಕೊಟ್ಟಿದ್ದಾನೆ. ಈ ಉಡವನ್ನು ತನಗೆ ಯಾರೋ ಉಡುಗೊರೆ ಕೊಟ್ಟಿರುವುದಾಗಿ ಆತ ಹೇಳಿದ್ದಾನೆ.

    ಈ ವರ್ಷ ಪ್ರಾರಂಭದಲ್ಲಿ ಫ್ಲೋರಿಡಾದಲ್ಲಿ ತಾಪಮಾನ 1 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಗೆ ಇಳಿದ ಕಾರಣ ಸಾಕಷ್ಟು ಉಡಗಳು ಮರದಿಂದ ಬೀಳಲಾರಂಭಿಸಿ ಸುದ್ದಿಯಾಗಿದ್ದವು. ಹಾಗೊಂದು ವೇಳೆ ಉಡಗಳು ಸತ್ತಿದ್ದು ಈತನಿಗೆ ಸಿಕ್ಕಿದ್ದರೆ ಫ್ರಿಜ್‌ನಲ್ಲಿ ಏಕೆ ಇಟ್ಟುಕೊಂಡ ಎಂಬುದಕ್ಕೆ ಸರಿಯಾದ ಮಾಹಿತಿ ಇಲ್ಲದ ಕಾರಣ ತನಿಖೆ ನಡೆಸಲಾಗುತ್ತಿದೆ. ಈ ರೀತಿ ಯಾವುದೇ ಪ್ರಾಣಿಗಳನ್ನು ಹೋಟೆಲ್‌ನಲ್ಲಿ ಇರಿಸಿಕೊಳ್ಳುವುದು ಅಮೆರಿಕ ಆಹಾರ ಸುರಕ್ಷತಾ ಕಾಯ್ದೆಗೆ ವಿರುದ್ಧವಾಗಿದೆ.

    ಅಷ್ಟೇ ಅಲ್ಲದೇ ಈ ಅಂಗಡಿಯಲ್ಲಿ ಉಡ ಮಾತ್ರವಲ್ಲದೇ ಸತ್ತ ಜಿರಳೆಗಳು ಕಂಡುಬಂದವು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ 27 ವಿವಿಧ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್‌)


    https://www.vijayavani.net/5-lashkar-aides-arrested-in-sopore-104057/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts