More

    ಮನೆ ಬಾಗಿಲಿಗೆ ಪಿಜ್ಜಾವನ್ನೇ ಡೆಲಿವರಿ ಮಾಡುವಾಗ ಪಡಿತರ ಯಾಕಾಗಬಾರದು? ಕೇಂದ್ರಕ್ಕೆ ಕೇಜ್ರಿವಾಲ್​ ಪ್ರಶ್ನೆ

    ನವದೆಹಲಿ: ಮನೆ ಬಾಗಿಲಿಗೆ ಪಡಿತರ ತಲುಪಿಸುವುದನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಮನೆ ಬಾಗಿಲಿಗೆ ಪಿಜ್ಜಾವನ್ನೇ ಡೆಲಿವರಿ ಮಾಡುತ್ತಿರುವಾಗ ಪಡಿತರ ಯಾಕಾಗಬಾರದು ಎಂದು ಪ್ರಶ್ನಿಸಿದ್ದಾರೆ.

    ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಎರಡು ದಿನಗಳ ಮುಂಚಿತವಾಗಿಯೇ ಕೇಂದ್ರ ಸರ್ಕಾರ ಯೋಜನೆಯನ್ನು ತಡೆಹಿಡಿದಿದೆ. ರೇಷನ್​ ಮಾಫಿಯಾದ ಪ್ರಭಾವಕ್ಕೆ ಒಳಗಾಗಿ ಬಡವರ ಪರವಾದ ಕ್ರಾಂತಿಕಾರಿ ಯೋಜನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಕೇಜ್ರಿವಾಲ್​ ಆರೋಪಿಸಿದ್ದಾರೆ.

    ಪಿಜ್ಜಾವನ್ನೇ ಮನೆಗೆ ತಲುಪಿಸುತ್ತಿರುವಾಗ ಪಡಿತರ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿರುವ ಕೇಜ್ರಿವಾಲ್​, ಇದೇ ಮೊದಲ ಬಾರಿಗೆ ರೇಷನ್​ ಮಾಫಿಯಾದ ಕೈಗೊಂಬೆಯಾಗಿ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ನೋಡಿ ರೇಷನ್​ ಮಾಫಿಯಾ ಎಷ್ಟು ಪ್ರಭಾವಶಾಲಿಯಾಗಿದೆ. ಯೋಜನೆ ಅನುಷ್ಠಾನಗೊಳ್ಳುವ ಒಂದು ವಾರಕ್ಕೂ ಮುಂಚೆಯೇ ಅದನ್ನು ನಿಲ್ಲಿಸಿದೆ ಎಂದರು.

    ಡಿಜಿಟಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್​, ಯೋಜನೆ ಅನುಷ್ಠಾನಗೊಳಿಸಲು ಅನುಮತಿ ತೆಗೆದುಕೊಂಡಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿ ಹಾಕಿದ್ದಾರೆ. ಒಂದು ಬಾರಿಯಲ್ಲ, ಐದು ಬಾರಿ ಅನುಮತಿಯನ್ನು ಪಡೆದುಕೊಂಡಿದ್ದೇವೆ. ಕಾನೂನಾತ್ಮಕವಾಗಿ ನಮಗೆ ಕೇಂದ್ರ ಅನುಮೋದನೆ ಬೇಕಿಲ್ಲ. ಆದರೂ ಸೌಜನ್ಯದಿಂದ ಅದನ್ನು ಮಾಡಿದ್ದೇವೆಂದು ತಿಳಿಸಿದರು.

    ಮನೆ ಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆಯಿಂದ ರಾಷ್ಟ್ರ ರಾಜಧಾನಿಯ 72 ಲಕ್ಷ ಕಾರ್ಡುದಾರರಿಗೆ ಅನುಕೂಲವಾಗಲಿದೆ ಎಂದರು. ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲದೇ ಕೇಂದ್ರ ಸರ್ಕಾರ ರಾಜಕಾರಣ ಮಾಡಿಕೊಂಡು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

    ನನಗೆ ಯೋಜನೆ ಅನುಷ್ಠಾನ ಬಿಡುಗಡೆ ಮಾಡಲು ಅನುಮತಿ ನೀಡಿ, ನಾನು ಅದರ ಕ್ರೆಡಿಟ್​ ಅನ್ನು ನಿಮಗೆ (ಪ್ರಧಾನಿ ಮೋದಿ) ನೀಡುತ್ತೇನೆ. ಪಡಿತರ ಆಪ್​ಗಾಗಲಿ ಅಥವಾ ಬಿಜೆಪಿಗಾಗಲಿ ಸಂಬಂಧಿಸಿಲ್ಲ. ಮೋದಿಜಿ ಮತ್ತು ಕೇಜ್ರಿವಾಲ್​ ಬಡವರಿಗೆ ಪಡಿತರ ನೀಡಿದ್ದಾರೆಂದು ಓದಲಿ. ಬಡವರ ಪರವಾಗಿ ಕೈಮುಗಿದು ಕೇಳಿಕೊಳ್ಳುತ್ತೇನೆ ಯೋಜನೆ ಅನುಷ್ಠಾನ ಮಾಡಲು ಅನುಮತಿ ನೀಡಿ ಎಂದು ಕೇಜ್ರಿವಾಲ್ ಮತ್ತೊಮ್ಮೆ ಮನವಿ ಮಾಡಿಕೊಂಡರು. (ಏಜೆನ್ಸೀಸ್​)

    ಸಹೋದ್ಯೋಗಿ ಮಹಿಳೆಯೊಂದಿಗೆ ರೆಸಾರ್ಟ್​ನಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಎಸ್​ಐ!

    ಚಿರು ಮರೆಯಾಗಿ ನಾಳೆಗೆ ಒಂದು ವರ್ಷ: ಹೃದಯದ ಚಿರಂಜೀವಿಗೆ ಸರ್ಜಾ ಕುಟುಂಬದ ಭಾವುಕ ನುಡಿ

    ಫೇಸ್‌ಬುಕ್‌ ಲೈವ್‌ನಲ್ಲಿ ಇನ್ನೇನು ಪ್ರಾಣ ಹೋಗ್ತಿರುವಾಗಲೇ ರಕ್ಷಿಸಿದ್ದು 14 ಸಾವಿರ ಕಿಮೀ ದೂರದಲ್ಲಿ ಕುಳಿತವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts