More

    ರಣಜಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಕಣಕ್ಕೆ: ಹೇಗೆ ನಡೆಯಲಿದೆ ಟೂರ್ನಿ ?

    ಬೆಂಗಳೂರು: ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಹಬ್ಬ ರಣಜಿ ಟ್ರೋಫಿಯ 89ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸಿ ಗುಂಪಿನಲ್ಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಚಾಂಪಿಯನ್ ಪಂಜಾಬ್ ಸವಾಲು ಎದುರಿಸಲಿದೆ.

    ಹೈದರಾಬಾದ್‌ಗೆ ಹಿಂಬಡ್ತಿ: 2022-23ರ ಆವೃತ್ತಿಯ ಏಳು ಲೀಗ್ ಪಂದ್ಯಗಳಲ್ಲಿ ಆರು ಪಂದ್ಯ ಸೋತಿರುವ ಹೈದರಾಬಾದ್ ಹಾಗೂ ನಾಗಾಲ್ಯಾಂಡ್ ತಂಡಗಳಿ ಎಲೈಟ್‌ನಿಂದ ಪ್ಲೇಟ್ ಗುಂಪಿಗೆ ಹಿಂಬಡ್ತಿ ಪಡೆದಿವೆ. ಪ್ಲೇಟ್ ಗುಂಪಿನಲ್ಲಿ ಕಳೆದ ಬಾರಿ ೈನಲ್‌ಗೇರಿದ್ದ ಬಿಹಾರ ಮತ್ತು ಮಣಿಪುರ ಎಲೈಟ್‌ಗೆ ಅರ್ಹತೆ ಪಡೆದಿವೆ.

    ಟೂರ್ನಿ ಸ್ವರೂಪ: ಟೂರ್ನಿಯಲ್ಲಿ ಆಡುವ ಒಟ್ಟು 38 ತಂಡಗಳನ್ನು 5 ಗುಂಪುಗಳಲ್ಲಿ ವಿಭಾಗಿಸಲಾಗಿದೆ. 4 ಎಲೈಟ್ ಗುಂಪಿನಲ್ಲಿ ತಲಾ 8 ತಂಡಗಳಿದ್ದರೆ, 1 ಪ್ಲೇಟ್ ಗುಂಪಿನಲ್ಲಿ 6 ತಂಡಗಳಿವೆ. ಪ್ರತಿ ಎಲೈಟ್ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್‌ೈನಲ್‌ಗೇರಲಿವೆ. ಪ್ಲೇಟ್ ಗುಂಪಿನಲ್ಲಿ ಅಗ್ರ 4 ತಂಡಗಳು ಪ್ಲೇಟ್ ಸೆಮಿೈನಲ್‌ಗೇರಲಿದ್ದು, ಇದರಲ್ಲಿ ೈನಲ್‌ಗೇರಿದ 2 ತಂಡಗಳು 2025ರಲ್ಲಿ ಎಲೈಟ್ ಗುಂಪಿಗೆ ಬಡ್ತಿ ಪಡೆಯಲಿವೆ. ಎಲೈಟ್ ಗುಂಪುಗಳ ಕೊನೇ 2 ತಂಡಗಳು ಪ್ಲೇಟ್‌ಗೆ ಹಿಂಬಡ್ತಿ ಪಡೆಯುತ್ತವೆ.

    ಸ್ಟಾರ್ ಆಟಗಾರರು ಕಣಕ್ಕೆ: ಜನವರಿ-ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಈ ಟೂರ್ನಿ ಯುವ ಆಟಗಾರರ ಜತೆಗೆ ತಂಡದಿಂದ ಹೊರಬಿದ್ದಿರುವ ಹಿರಿಯ ಆಟಗಾರರಿಗೆ ಆಯ್ಕೆಗಾರರ ಗಮನಸೆಳೆಯಲು ಈ ಟೂರ್ನಿ ವೇದಿಕೆಯಾಗಿದೆ. 2023ರ ವಿಶ್ವ ಟೆಸ್ಟ್‌ಚಾಂಪಿಯನ್‌ಷಿಪ್ ೈನಲ್ ಬಳಿಕ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಅನುಭವಿ ಅಜಿಂಕ್ಯ ರಹಾನೆ ಮುಂಬೈ ನಾಯಕರಾಗಿದ್ದಾರೆ. ಚೇತೇಶ್ವರ ಪೂಜಾರ ಸೌರಾಷ್ಟ್ರ ಪರ ಕಣಕ್ಕಿಳಿಯಲಿದ್ದಾರೆ. 2022-23ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಯಾಂಕ್ ಅಗರ್ವಾಲ್, ಹನುಮ ವಿಹಾರಿ ಕ್ರಮವಾಗಿ ಕರ್ನಾಟಕ ಮತ್ತು ಆಂಧ್ರ ತಂಡವನ್ನು ಮುನ್ನಡೆಸಲಿದ್ದಾರೆ. ಇಶಾಂತ್ ಶಮರ್ರ್ ಮತ್ತು ಉಮೇಶ್ ಯಾದವ್ ಕ್ರಮವಾಗಿ ದೆಹಲಿ ಮತ್ತು ವಿದರ್ಭ ತಂಡದಲ್ಲಿದ್ದಾರೆ. ರಾಷ್ಟ್ರೀಯ ತಂಡದ ಸೇವೆ ಮೇರೆಗೆ ಕುಲದೀಪ್ ಯಾದವ್ ಮತ್ತು ರಿಂಕು ಸಿಂಗ್ ಲಭ್ಯವಾಗಲಿದ್ದಾರೆ. ಪ್ಲೇಟ್ ಗುಂಪಿಗೆ ಹಿಂಬಡ್ತಿ ಪಡೆದಿರುವ ಹೈದರಾಬಾದ್ ತಂಡವನ್ನು ತಿಲಕ್ ವರ್ಮ ಮುನ್ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts