More

    ಲೋಕಕಲ್ಯಾಣಾರ್ಥವಾಗಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಏ. 18ರಿಂದ

    ರಾಣೆಬೆನ್ನೂರ: ನಗರದ ಹೊರವಲಯದ ಶ್ರೀ ಶನೈಶ್ಚರ ಮಂದಿರದ ದ್ವಾದಶ ಪ್ರತಿಷ್ಠಾ ಮಹೋತ್ಸವ ನಿಮಿತ್ತ ಲೋಕಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ 593 ದಿನಗಳ ಕಾಲ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಸಂಕಲ್ಪಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂದಿರದ ಶಿವಯೋಗಿ ಸ್ವಾಮೀಜಿ ತಿಳಿಸಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 18ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, 2024 ನವೆಂಬರ್ 30ಕ್ಕೆ ಪೂರ್ಣಗೊಳ್ಳಲಿವೆ. ನಿತ್ಯವೂ ಮಧ್ಯಾಹ್ನ 2.30ರಿಂದ 3.25ರವರೆಗೆ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಜರುಗಲಿದೆ.
    ಅದರಂತೆ ನಿತ್ಯ ಪ್ರಾಥಃಕಾಲ 3.30ರಿಂದ 4ರವರೆಗೆ ಮಹಾ ಸಂಕಲ್ಪ, 4 ಗಂಟೆಯಿಂದ 6.30ರವರೆಗೆ ಶ್ರೀ ದುರ್ಗಾ ಸಪ್ತಶತೀ ಪಾರಾಯಣ, ಬೆಳಗ್ಗೆ 6.45ರಿಂದ 8.20ರವರೆಗೆ ಶ್ರೀ ದುರ್ಗಾ ಮೂರ್ತಿಗೆ ಮಹಾರುದ್ರಾಭಿಷೇಕ, 8.30ರಿಂದ 9.30ರವರೆಗೆ ಶ್ರೀ ನವಾಕ್ಷರಿ ಮಂತ್ರ ಹೋಮ, 9.45ರಿಂದ 11.30ರವರೆಗೆ ಶ್ರೀ ರುದ್ರ ಹೋಮ, 11.35ರಿಂದ ಮಧ್ಯಾಹ್ನ 12ರವರೆಗೆ ದೇವಿಗೆ ಮಹಾ ಆರತಿ, 3.30ರಿಂದ ಸಂಜೆ 4.30ರವರೆಗೆ ಚಕ್ರಕ್ಕೆ ಲಲಿತ ಸಹಸ್ರ ನಾಮಾವಳಿ ಸಹಿತ 12 ಕುಂಕುಮಾರ್ಚನೆ, 4.45ರಿಂದ 5ರವರೆಗೆ ವಿಶ್ವ ಗೋಮಾತಾ ಪೂಜೆ, 5ರಿಂದ 6.10ರವರೆಗೆ ಲಕ್ಷ ಶ್ರೀ ರುದ್ರ ಪಠಣ, ಶನೈಶ್ಚರ ಸ್ವಾಮಿಗೆ ಮಹಾಭಿಷೇಕ, ಕೋಟಿ ಶಮಿ ಪತ್ರಿ ಅರ್ಚನೆ, 6.15ರಿಂದ ರಾತ್ರಿ 7ರವರೆಗೆ ಸಂಗೀತಯುಕ್ತ ಮಹಾಮಂಗಳಾರತಿ, ನಂತರ ಕೋಟಿ ದೀಪೋತ್ಸವ, ಪಂಚದೀಪ ದುರ್ಗಾ ನಮಸ್ಕಾರ ಪೂಜಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ 593 ದಿನಗಳ ಕಾಲ ಜರುಗಲಿವೆ.
    ಇದರ ಜತೆಗೆ ಏ. 15ರಿಂದ ನಿತ್ಯ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಶ್ರೀ ಆಯುತ ಮಹಾಚಂಡಿಯಾಗ ಹಾಗೂ ರಾತ್ರಿ 7ರಿಂದ 8.30ರವರೆಗೆ ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮತ್ತು ತುಲಾಭಾರ ಕಾರ್ಯಕ್ರಮ ಜರುಗಲಿವೆ. 2024 ನವೆಂಬರ್ 25ಕ್ಕೆ ಕಾರ್ಯಕ್ರಮ ಪೂರ್ಣಗೊಂಡ ಬಳಿಕ 5 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಪ್ರಮುಖರಾದ ಎಸ್.ಎಸ್. ರಾಮಲಿಂಗಣ್ಣನವರ, ಶಿವಾನಂದ ಸಾಲಗೇರಿ, ಹಾಲೇಶ ಗೌಳಿ, ಪರಮೇಶ್ವರಯ್ಯ ಮಠದ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts