More

  ಆಂಜನೇಯ ಸನ್ನಿಧಿಯಲ್ಲಿ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ

  ಶಿವಮೊಗ್ಗ: ನಗರದ ಕೋಟೇ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ ಅನಂತರಾಮ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಮೇ. 15ರಿಂದ 21ರವರೆಗೆ ಹನುಮ ಜಯಂತಿ ಅಂಗವಾಗಿ ಪ್ರತಿ ದಿನ ಸಂಜೆ 7ಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

  ಮೇ 15ರಂದು ಬೆಂಗಳೂರಿನ ಚಲನ ಚಿತ್ರ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ತಂಡದವರಿಂದ ಭಕ್ತಿಭಾವ ಸಂಗಮ, 16ರಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಂದ ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಕುರಿತು ಉಪನ್ಯಾಸವಿರುತ್ತದೆ.
  17ರಂದು ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರಿಂದ ಭಾರತೀಯ ಸಂಸ್ಕೃತಿ ಕುರಿತು ಉಪನ್ಯಾಸ, 18ಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಚಿರಂಜೀವಿ ಸಾವಿರದ ಹನುಮ ಕುರಿತು ಉಪನ್ಯಾಸ, 19ರಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ವಿಶ್ವಗುರು ಭಾರತ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
  20ಕ್ಕೆ ವೀಣಾ ಬನ್ನಂಜೆ ಅವರು ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಎಂಬ ಬಗ್ಗೆ ಉಪನ್ಯಾಸ ಮಾಡಲಿದ್ದಾರೆ. 21ರಂದು ಭಾರತೀಯ ಸಂಸ್ಕೃತಿಗೆ ಮಂದಿರಗಳ ಕೊಡುಗೆ ಎಂಬ ವಿಷಯದ ಕುರಿತು ಕುರಿತು ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ಹಾಗೂ ಭಾರತೀಯ ಸಂಸ್ಕೃತಿಗೆ ಸೋದರಿ ನಿವೇದಿತಾ ಕೊಡುಗೆ ಕುರಿತು ಪ್ರಿಯಾ ಅನಂತರಾಮನ್ ಉಪನ್ಯಾಸವಿದೆ.
  ಧಾರ್ಮಿಕ ಕಾರ್ಯಕ್ರಮಗಳು: ಹನುಮ ಜಯಂತಿ ಅಂಗವಾಗಿ ಮೇ 22ರ ಬೆಳಗ್ಗೆ 8ಕ್ಕೆ ಆಂಜನೇಯ ಹಾಗೂ ನಾರಸಿಂಹ ದೇವರಿಗೆ ಅಭಿಷೇಕ, 10ಕ್ಕೆ ನಾರಸಿಂಹ ಸುದರ್ಶನ ಹೋಮ ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ ರಾತ್ರಿ 8ಕ್ಕೆ ಲಕ್ಷ್ಮೀನರಸಿಂಹರ ಪಲ್ಲಕ್ಕಿ ಉತ್ಸವ ಸಹಸ್ರ ನಾಮ, ತೀರ್ಥ ಪ್ರಸಾದ ವಿನಿಯೋಗವಿದೆ.
  23ರ ಬೆಳಗ್ಗೆ 8ಕ್ಕೆ ಆಂಜನೇಯ ಸ್ವಾಮಿಗೆ ಅಭಿಷೇಕ, 10ಕ್ಕೆ ರಾಮತಾರಕ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ, ರಾತ್ರಿ 9ಕ್ಕೆ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. 24ರ ಬೆಳಗ್ಗೆ 9ರಿಂದ ಆಂಜನೇಯ ಸ್ವಾಮಿಗೆ ರಿಗೆ ಮಹಾಭಿಷೇಕ, 10ಕ್ಕೆ ಮಾರುತಿ ಮೂಲ ಮಂತ್ರ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 7ಕ್ಕೆ ರಾಮಹನುಮರ ಎದುರು ಉತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts