More

    ಇಬ್ಬರು ಗಾಂಜಾ ಮಾರಾಟಗಾರರ ಬಂಧನ; 2.348 ಕೆ.ಜಿ. ಗಾಂಜಾ ವಶ

    ರಾಣೆಬೆನ್ನೂರ: ನಗರದ ಎಕೆಜಿ ಕಾಲನಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 2.348 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳುವಲ್ಲಿ ಇಲ್ಲಿಯ ಶಹರ ಠಾಣೆ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.
    ದಾವಣಗೆರೆ ಕೆಟಿಜೆ ನಗರದ ರಫೀಕ್ ಶಫೀ ಅಹ್ಮದ್ ಪಾಟಿಶಫೀ ಹಾಗೂ ಇಬ್ರಾಹಿಂ ಬಾಬಜಾನ್ ಸಾಬ್ ಬಂಧಿತ ಆರೋಪಿಗಳು. ಇವರಿಂದ 35 ಸಾವಿರ ರೂ. ಮೌಲ್ಯದ 2.348 ಕೆ.ಜಿ. ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಲು ತಂದಿದ್ದ ಸೂಟಕೇಸ್, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಆರೋಪಿಗಳು ಎಕೆಪಿ ಕಾಲನಿ ಬಳಿ ರಸ್ತೆ ಬದಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಹಾಗೂ ತಂಡದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts