More

    ತಂದೆಯ ಸಮಸ್ಯೆಗಳು ರಣಬೀರ್​ ಕಪೂರ್​​ಗೆ ಮಾನಸಿಕ ಒತ್ತಡವಾಯ್ತಾ? ; ಆಕ್ಷನ್​​ ಥ್ರಿಲ್ಲರ್​​ ಅನಿಮಲ್​​ ಚಿತ್ರದಲ್ಲಿ ರಣಬೀರ್​​​​ ವಿಶೇಷ ಪಾತ್ರ..!

    ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅನಿಮಲ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ನಿರ್ದೇಶಕರೇ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.


    ಡಿಸೆಂಬರ್​​​ 1ರಂದು ಅನಿಮಲ್​​ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಸೇರಿದಂತೆ ಮಳಯಾಳಂನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮುಂತಾದವರು ನಟಿಸಿದ್ದಾರೆ.


    ಅನಿಮಲ್​​ ಚಿತ್ರದ ಟ್ರೇಲರ್​ನಲ್ಲಿ ರಣ್​ಬೀರ್​ ಮತ್ತು ಚಿತ್ರದಲ್ಲಿ ತಂದೆಯಾಗಿರುವ ಅನಿಲ್​​ ಕಪೂರ್​ ನಡುವೆ ನಡೆಯುವ ಘರ್ಷಣೆಯನ್ನ ತೋರಿಸಲಾಗಿದೆ. ತನ್ನ ಬಾಲ್ಯದ ಆಘಾತದ ಬಗ್ಗೆ ರಣ್​​ಬೀರ್​​ ತಂದೆಗೆ ಸುಳಿವು ಕೊಟ್ಟಿದ್ದಾರೆ. ತಂದೆಯ ಕೋಪದ ಸ್ವಭಾವವನ್ನ ಮತ್ತೊಮ್ಮೆ ಆಕ್ಟ್​​ ಮಾಡುವಂತೆ ರಣ್​​ಬೀರ್​​​ ತಂದೆಗೆ ಹೇಳೋದನ್ನ ಕೂಡಾ ಟ್ರೇಲರ್​​​​ನಲ್ಲಿ ನೋಡಬಹುದು.


    ಜೀವನದ ಪ್ರತಿಯೊಂದು ಹಂತದಲ್ಲಿಯೂ ಮಗ ತನ್ನ ತಂದೆಯ ಆದೇಶಗಳನ್ನೇ ಪಾಲಿಸೋದನ್ನ ಕಾಣಬಹುದು. ಬಲ್​​ಬೀರ್​​ಗೆ (ತಂದೆ ಪಾತ್ರದಾರಿ ಅನಿಲ್​ ಕಪೂರ್​) ಯಾರೋ ಗುಂಡಿ ಹಾರಿಸಿದ್ದು, ರಣ್​​ಬೀರ್​​ ಅದರ ರಿವೇಂಜ್​​ ಪಡೆಯೋಕೆ ಮುಂದಾಗುತ್ತಾರೆ.

    ನಂತರದಲ್ಲಿ ರಣ್​ಬೀರ್​ ತಂದೆಯ ಕೊಲೆ ಯತ್ನದ ಸೇಡು ತೀರಿಸಿಕೊಳ್ಳೋಕೆ ತುಂಬಾನೇ ಪ್ರಯತ್ನಿಸುತ್ತಾರೆ. ಇನ್ನು ರಶ್ಮಿಕಾ ಚಿತ್ರದಲ್ಲಿ ಗೀಂತಾಜಲಿಯಾಗಿ ರಣ್​​ಬೀರ್​ ಪತ್ನಿಯಾಗಿ ನಟಿಸುತ್ತಿದ್ದು, ಭಾವನಾತ್ಮಕ ಸಂಬಂಧಗಳ ಮೌಲ್ಯದ ಸುತ್ತ ಚಿತ್ರದ ಕಥೆ ಸಾಗಲಿದೆ.

    ಒಟ್ಟಾರೆಯಾಗಿ ತಂದೆಯ ಕೆಲವೊಂದು ನಡವಳಿಕೆ ಮತ್ತು ಸಮಸ್ಯೆಗಳು ಮಗ ರಣ್​ಬೀರ್​ ಕಪೂರ್​​​ನನ್ನ ಆನಸಿಕ ಒತ್ತಡ ಮತ್ತು ರಕ್ತಸಿಕ್ತ ಗಲಾಟೆಗೆ ಕಾರಣವಾಗೋದನ್ನ ಟ್ರೇಲರ್​​ನಲ್ಲಿ ಕಾಣಬಹುದು.

    ಸದ್ಯ ಚಿತ್ರದ ಟ್ರೇಲರ್​​ ವೈರಲ್​ ಆಗುತ್ತಿದ್ದು, ಅಭಿಮಾನಿಗಳ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts