ಮುಂಬೈ: ಸೆಲೆಬ್ರಿಟಿಗಳು ತೊಡುವ ಬಟ್ಟೆಯ ಬೆಲೆಯಲ್ಲಿ ಸಾಮಾನ್ಯ ಕುಟುಂಬವೊಂದು ಪೂರ್ತಿ ತಿಂಗಳು ಹೊಟ್ಟೆ ತುಂಬ ಊಟ ಮಾಡಬಹುದು. ದುಬಾರಿ ಬಟ್ಟೆಯಲ್ಲೇ ಮಿಂಚುವ ಸೆಲೆಬ್ರಿಟಿಗಳು ಇದೀಗ ಮಾಸ್ಕ್ನಲ್ಲೂ ಈ ದುಬಾರಿ ಗೀಳನ್ನು ಶುರುಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ನ ರಣಬೀರ್ ಮತ್ತು ದೀಪಿಕಾ ಪಡುಕೋಣೆ ಮ್ಯಾಚಿಂಗ್ ಮಾಸ್ಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಮಾಸ್ಕ್ನ ಬೆಲೆ ಕೇಳಿದರೆ ಒಮ್ಮೆಲೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ.
ರಣ್ಬೀರ್ ಮತ್ತು ದೀಪಿಕಾ ಪಡುಕೋಣೆ ಕಪ್ಪು ಬಣ್ಣದ ಮಾಸ್ಕ್ ತೊಟ್ಟು ಓಡಾಡಿರುವ ಹೆಚ್ಚಾಗಿ ಕಂಡುಬಂದಿದೆ. ಆ ಮಾಸ್ಕ್ ಮೇಲೆ ಎಲ್ವಿ ಇನ್ಶಿಯಲ್ ಇರುವ ಲೋಗೋ ಕಾಣಬಹುದಾಗಿದೆ. ಅಂದ ಹಾಗೆ ಈ ಮಾಸ್ಕ್ ಲೂಯಿಸ್ ವಿಟಾನ್ ಬ್ರ್ಯಾಂಡ್ನ ಮಾಸ್ಕ್ ಆಗಿದೆ. ಈ ಒಂದು ಮಾಸ್ಕ್ನ ಬೆಲೆ ಬರೋಬ್ಬರಿ 355 ಡಾಲರ್ ಅಂದರೆ ಸರಿ ಸುಮಾರು 25,777 ರೂಪಾಯಿ.
25 ಸಾವಿರ ರೂಪಾಯಿಯಷ್ಟು ಹಣ ಕೊಡುವಂತದ್ದು ಈ ಮಾಸ್ಕ್ನಲ್ಲಿ ಏನಿದೆ ಎಂದರೆ ಅದಕ್ಕೆ ಅಂತಹ ವಿಶೇಷ ಉತ್ತರವೇನು ಇಲ್ಲ. ಮಾಸ್ಕ್ನ ಜತೆಯಲ್ಲಿ ಒಂದು ಪೌಚ್ ಕೊಡಲಾಗುತ್ತಿದ್ದು, ಮಾಸ್ಕ್ ಬಳಸದ ಸಮಯದಲ್ಲಿ ಅದರಲ್ಲಿ ಮಾಸ್ಕ್ ಇಟ್ಟುಕೊಳ್ಳಬಹುದು ಎನ್ನಲಾಗಿದೆ. ವಿಶೇಷ ಬ್ರ್ಯಾಂಡ್ನ ಈ ವಿಶೇಷ ಮಾಸ್ಕ್ನ ಬೆಲೆಯಲ್ಲಿ ಮಧ್ಯಮ ವರ್ಗದ ಒಂದು ಕುಟುಂಬದ ಒಂದು ತಿಂಗಳ ಜೀವನ ಅರಾಮವಾಗಿ ನಡೆದುಹೋಗುತ್ತದೆ ಎನ್ನುತ್ತಾರೆ ಅನೇಕರು. (ಏಜೆನ್ಸೀಸ್)
ಫಾಸ್ಟ್ಯಾಗ್ ಇದ್ದರೆ ಓಕೆ, ಇಲ್ಲ ಅಂದ್ರೆ ನಾಳೆಯಿಂದ ಡಬಲ್ ಟೋಲ್! ಸರ್ಕಾರದ ಹೊಸ ಆದೇಶ
1,500 ರೂ. ಬದಲು 1.5 ಲಕ್ಷ ರೂ. ಮೊತ್ತದ ಕರೆಂಟ್ ಬಿಲ್ ಕೊಟ್ಟ ಅಧಿಕಾರಿಗಳು! ಭಯದಿಂದ ರೈತ ಆತ್ಮಹತ್ಯೆ