More

    ರಣಜಿ ಕ್ವಾರ್ಟರ್​ಫೈನಲ್​ಗೆ ಮನೀಷ್ ಪಾಂಡೆ ವಾಪಸ್, ಜಮ್ಮು-ಕಾಶ್ಮೀರ ವಿರುದ್ಧ ಹಣಾಹಣಿ | ನಾಯಕರಾಗಿ ಮುಂದುವರಿದ ಕರುಣ್ ನಾಯರ್

    ಬೆಂಗಳೂರು: ಜಮ್ಮು ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್​ಫೈನಲ್ ಪಂದ್ಯಕ್ಕೆ 15 ಸದಸ್ಯರ ಕರ್ನಾಟಕ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಕಾಯಂ ನಾಯಕ ಮನೀಷ್ ಪಾಂಡೆ ತಂಡಕ್ಕೆ ಮರಳಿದ್ದರೂ, ಲೀಗ್ ಹಂತದ ಬಹುತೇಕ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕರುಣ್ ನಾಯರ್​ಗೆ ನಾಯಕತ್ವ ಜವಾಬ್ದಾರಿಯನ್ನು ಮುಂದುವರಿಸಲಾಗಿದೆ.

    ಫೆ. 20ರಿಂದ 24ರವರೆಗೆ ಜಮ್ಮುವಿನ ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನದಲ್ಲಿ ಪಂದ್ಯ ನಡೆಯಲಿದೆ. ಬರೋಡ ವಿರುದ್ಧ ನಡೆದ ಕೊನೇ ಲೀಗ್ ಪಂದ್ಯಕ್ಕೆ ಪ್ರಕಟಿಸಲಾಗಿದ್ದ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ವೇಗಿ ವಿ.ಕೌಶಿಕ್ ಬದಲು ಪ್ರತೀಕ್ ಜೈನ್ ತಂಡಕ್ಕೆ ಮರಳಿದ್ದರೆ, ಸ್ಪಿನ್ ಬೌಲಿಂಗ್ ಆಲ್ರೌಂಡರ್ ಪ್ರವೀಣ್ ದುಬೆ ಬದಲು ಜೆ.ಸುಚಿತ್ ವಾಪಸಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ಸೀಮಿತ ಓವರ್​ಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಅನುಭವಿ ಮನೀಷ್ ಪಾಂಡೆ, ಬ್ಯಾಟ್ಸ್​ಮನ್ ಡೆಗಾ ನಿಶ್ಚಲ್ ಬದಲು ತಂಡ ಸೇರಿದ್ದಾರೆ. ಕರ್ನಾಟಕ ತಂಡ ಎಲೈಟ್ ಎ-ಬಿ ಗುಂಪಿನಲ್ಲಿ ಮೂರನೇ ಸ್ಥಾನಿಯಾಗಿ ನಾಕೌಟ್​ಗೇರಿದ್ದರೆ, ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಜಮ್ಮು ಕಾಶ್ಮೀರ ತಂಡ 8ರ ಘಟ್ಟಕ್ಕೇರಿದೆ.

    ರಾಜ್ಯ ತಂಡ: ಕರುಣ್ ನಾಯರ್ (ನಾಯಕ), ಸಮರ್ಥ್ ಆರ್, ದೇವದತ್ ಪಡಿಕಲ್, ಮನೀಷ್ ಪಾಂಡೆ, ಪವನ್ ದೇಶಪಾಂಡೆ, ಶರತ್ ಶ್ರೀನಿವಾಸ್ (ವಿ.ಕೀ), ಶ್ರೇಯಸ್ ಗೋಪಾಲ್, ಕೆ.ಗೌತಮ್ ಅಭಿಮನ್ಯು ಮಿಥುನ್, ಸಿದ್ಧಾರ್ಥ್ ಕೆವಿ, ಪ್ರಸಿದ್ಧಕೃಷ್ಣ, ಜೆ.ಸುಚಿತ್, ಪ್ರತೀಕ್ ಜೈನ್, ರೋನಿತ್ ಮೋರೆ, ಶರತ್ ಬಿಆರ್ (ವಿ.ಕೀ).

    ಕೆಎಲ್ ರಾಹುಲ್ ಲಭ್ಯರಿಲ್ಲ: ನ್ಯೂಜಿಲೆಂಡ್ ಪ್ರವಾಸದಲ್ಲಿ ಭರ್ಜರಿ ಲಯದಲ್ಲಿದ್ದ ಕೆಎಲ್ ರಾಹುಲ್ ರಾಜ್ಯ ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರು ತರಬೇತಿಯಲ್ಲಿ ಭಾಗಿಯಾಗಲಿರುವ ಕಾರಣ ತಂಡದ ಭಾಗವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts