More

    ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ’ರಂಜಾನ್’ ಏಪ್ರಿಲ್​ನಲ್ಲಿ ತೆರೆಗೆ …

    ಬೆಂಗಳೂರು: ಹಿರಿಯ ಲೇಖಕ ಫಕೀರ್‌ ಮೊಹಮ್ಮದ್​ ಕಟ್ಪಾಡಿ ಬರೆದಿರುವ ‘ನೊಂಬು’ ಕಥೆ ಇದೀಗ ಸದ್ದಿಲ್ಲದೆ ಚಿತ್ರವಾಗಿದೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಪಂಚಾಕ್ಷರಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಇತ್ತೀಚೆಗೆ ಹಾಡುಗಳು ಮತ್ತು ಟ್ರೇಲರ್​ ಬಿಡುಗಡೆಯಾಗಿವೆ. ಈ ಸಮಾರಂಭವು ಸರ್ವಧರ್ಮದ ಸಮ್ಮಿಲನವಾಗಿತ್ತು.

    ಇದನ್ನೂ ಓದಿ: ಮೊಬೈಲ್​ನಿಂದಾಗುವ ದುಷ್ಪರಿಣಾಮಗಳ ಕುರಿತು ಹೇಮಂತ್​ ಹೆಗ್ಡೆ ಹೊಸ ಸಿನಿಮಾ …

    ’ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಕಾಂಪೌಂಡರ್​ ಗೋವಿಂದನಾಗಿ ಜನಪ್ರಿಯರಾಗಿರುವ ಸಂಗಮೇಶ ಉಪಾಸೆ ಈ ಚಿತ್ರದ ಮೂಲಕ ಹೀರೋ ಆಗಿರುವುದಷ್ಟೇ ಅಲ್ಲ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸಿದ್ದಾರೆ.

    ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್, ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆಯ ಬಗ್ಗೆ ಚಿತ್ರದಲ್ಲಿ ಹೇಳಲಾಗಿದ್ದು, ಉಳ್ಳವರು ಮತ್ತು ಇಲ್ಲದವರ ಮಧ್ಯೆ ಹೋಲಿಕೆ ಮಾಡುವ ಸನ್ನಿವೇಶಗಳನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆಯಂತೆ. ಸೆನ್ಸಾರ್‌ನಿಂದ ’ಯು’ ಪ್ರಮಾಣಪತ್ರ ಪಡೆದಿರುವ ಈ ಚಿತ್ರವನ್ನು ಏಪ್ರಿಲ್‌ದಲ್ಲಿ ತೆರೆಗೆ ತರಲು ತಂಡವು ತಯಾರಿ ನಡೆಸಿದೆ.

    ಇದನ್ನೂ ಓದಿ: ರಾಜಕೀಯದ ‘ದರ್ಬಾರ್’​ನಲ್ಲಿ ವಿ. ಮನೋಹರ್​; 23 ವರ್ಷಗಳ ನಂತರ ನಿರ್ದೇಶನಕ್ಕೆ …

    ‘ರಂಜಾನ್​’ ಚಿತ್ರದಲ್ಲಿ ಸಂಗಮೇಶ ಉಪಾಸೆ ಜತೆಗೆ ಪ್ರೇಮಾವತಿ ಉಪಾಸೆ, ಬೇಬಿ ಈಶಾನಿ ಉಪಾಸೆ, ಮಾಸ್ಟರ್ ವೇದಿಕ್, ಭಾಸ್ಕರ್‌ ಮಣಿಪಾಲ್, ಮಾಸ್ಟರ್ ನೀಲ್, ಜಯಲಕ್ಷಿ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾ ಭಟ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಇಂದ್ರ ಅವರ ಸಂಗೀತ ಮತ್ತು ರಂಗಸ್ವಾಮಿ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಯೂನಿವರ್ಸಲ್ ಸ್ಟುಡಿಯೋ ಮೂಲಕ ಮಡಿವಾಳಪ್ಪ.ಎಂ.ಗೂಗಿ ನಿರ್ಮಿಸಿದ್ದಾರೆ.

    ಅಕಟಕಟಾ ನಟಿಯಿಂದ ಇಂಥಾ ಮಾತಾ! ರಾತ್ರಿ ಪ್ರಯಾಣ ಮಾಡುವಾಗ ಈ ರೀತಿ ಮಾಡ್ತಾರಂತೆ ನಿಮಿಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts