More

    ಹುಟ್ಟುಹಬ್ಬಕ್ಕೆ ಶುಭ ಹಾರೈಸಿದವರಿಗೆ ಜಪಾನ್​ನಿಂದಲೇ ಥ್ಯಾಂಕ್ಸ್​ ಹೇಳಿದ ರಮ್ಯಾ

    ಟೋಕಿಯೋ: ಸ್ಯಾಂಡಲ್​ವುಡ್​ ನಟಿ ರಮ್ಯಾಗೆ ಇಂದು 40ರ ಸಂಭ್ರಮ. 1982ರ ನವೆಂಬರ್​ 29ರಂದು ಜನಿಸಿದ ರಮ್ಯಾ, ಇಂದು 40 ಮುಗಿಸಿ 41 ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹುಟ್ಟುಹಬ್ಬವನ್ನು ಅವರು ಜಪಾನ್​ನಲ್ಲಿ ಆಚರಿಸಿಕೊಳ್ಳುತ್ತಿರುವುದು ವಿಶೇಷ.

    ಇದನ್ನೂ ಓದಿ: ಸಿದ್ದರಾಮಯ್ಯ ಕುರಿತು ಬಯೋಪಿಕ್ … ಮಾಜಿ ಮುಖ್ಯಮಂತ್ರಿಗಳ ಪಾತ್ರದಲ್ಲಿ ವಿಜಯ್​ ಸೇತುಪತಿ?

    ಜಪಾನ್​ನ ಫ್ಲೋಟಿಂಗ್​ ಫ್ಲವರ್​ ಗಾರ್ಡ್​ನ್​ನಲ್ಲಿ ಕುಳಿತಿರುವ ತಮ್ಮ ಒಂದಿಷ್ಟು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿರುವ ರಮ್ಯಾ, ತಾವು 40ರ ಕ್ಲಬ್​ ಸೇರಿದ್ದು, ಈ ಸಂದರ್ಭದಲ್ಲಿ ತಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.

    ಅಂದ ಹಾಗೆ, ರಮ್ಯಾ ಅವರ ಹುಟ್ಟುಹಬ್ಬಕ್ಕೆ ಬರೀ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ಹೇಳಿದ್ದಾರೆ. ಧನಂಜಯ್​, ಕಾರ್ತಿಕ್​ ಗೌಡ, ಅಮೃತಾ ಅಯ್ಯಂಗಾರ್​ ಸೇರಿದಂತೆ ಹಲವು ರಮ್ಯಾ ಅವರ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾ ಮೂಲಕ ವಿಶ್​ ಮಾಡಿದ್ದಾರೆ.

    ಇದನ್ನೂ ಓದಿ: ಮತ್ತೆ ಬಿಡುಗಡೆಯಾಗುತ್ತಿದೆ ರಜನಿಕಾಂತ್​ ಅಭಿನಯದ ‘ಬಾಬಾ’; ಯಾಕೆ ಗೊತ್ತಾ?

    ಇನ್ನು, ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದ ರಮ್ಯಾ, ಇದೀಗ ನಟಿಯಾಗಿ, ನಿರ್ಮಾಪಕಿಯಾಗಿ ವಾಪಸ್ಸಾಗಿದ್ದಾರೆ. ಧನಂಜಯ್​ ಅಭಿನಯದ ‘ಹೊಯ್ಸಳ’ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಕಂಬ್ಯಾಕ್​ ಮಾಡುತ್ತಿರುವ ರಮ್ಯಾ, ರಾಜ್​ ಬಿ ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿದ್ದಾರೆ.

    ಮದುವೆ ವದಂತಿ ಹಬ್ಬಿದ ಬೆನ್ನಲ್ಲೇ ಕೈಕೈ ಹಿಡಿದು ದುಬೈಗೆ ಹಾರಿದ ಹರಿಪ್ರಿಯಾ-ವಸಿಷ್ಠ ಜೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts