More

    ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದೇಶದ ಹೆಮ್ಮೆ ಸಂಕೇತ

    ಕೆ.ಆರ್.ಪೇಟೆ: ಕೋಟ್ಯಂತರ ಹಿಂದುಗಳ ಪ್ರತೀಕ ಶ್ರೀರಾಮಮಂದಿರ ಹಾಗೂ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದೇಶದ ಹೆಮ್ಮೆಯ ಸಂಕೇತವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

    ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ತಾಲೂಕು ಎಚ್.ಡಿ.ದೇವೇಗೌಡ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಶ್ರೀರಾಮಮಂದಿರ ಪ್ರಾರಂಭೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಅಯೋಧ್ಯೆಯ ಇತಿಹಾಸದ ಭೂಗರ್ಭದೊಳಗೆ ಸೇರಿ ಹೋಗಿದ್ದ ಶ್ರೀರಾಮನನ್ನು ಐನೂರು ವರ್ಷಗಳ ಬಳಿಕ ಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವುದು ಸಂತಸವಾಗಿದೆ. ಐದು ದಶಕಗಳ ಕನಸು ನನಸಾಗುತ್ತಿರುವ ಈ ಸನ್ನಿವೇಶದಲ್ಲಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಶ್ರೀರಾಮನ ಆರಾಧಕರಾದ ನಮಗೆಲ್ಲರಿಗೂ ಹೆಮ್ಮೆಯಾಗಿದೆ ಎಂದರು.

    ಮನ್ಮುಲ್ ನಿರ್ದೇಶಕ ಡಾಲು ರವಿ ಪೂಜಾ ಮಾತನಾಡಿ, ಹಿಂದುಗಳ ಆರಾಧ್ಯದೈವ ಶ್ರೀರಾಮ ಕೇವಲ ವ್ಯಕ್ತಿಯಲ್ಲ ಶಕ್ತಿ. ಅವರ ಆದರ್ಶ ಗುಣಗಳನ್ನು ರಾಜಮಹಾರಾಜರು ಅಳವಡಿಸಿಕೊಂಡು ಉತ್ತಮ ರಾಜ್ಯಭಾರ ಮಾಡಿದ್ದಾರೆ. ಏಕಪತ್ನಿ ವ್ರತಸ್ತನಾದ ಶ್ರೀರಾಮ ಎಲ್ಲ ಕಾಲಕ್ಕೂ ಆದರ್ಶಪುರುಷ. ಇಂದು ನೂರಾರು ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.

    ಇದೇ ವೇಳೆ ವಿಶೇಷ ಪೂಜೆ, ಹೋಮ-ಹವನಗಳು ಜರುಗಿದವು. ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ, ಸಿಹಿ ವಿತರಣೆ, ಕೋಸಂಬರಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ವಿತರಿಸಲಾಯಿತು.

    ತಾಲೂಕು ಎಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್, ಉಪಾದ್ಯಕ್ಷ ಚಿಕ್ಕೋನಹಳ್ಳಿ ನಾಗರಾಜು, ಟಿಎಪಿಸಿಎಂಎಸ್ ನಿರ್ದೇಶಕ ದಿನೇಶ್, ಜಿಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಸುಬ್ಬಣ್ಣ, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಳ್ಳಿ ನಾಗೇಶ್, ಸದಸ್ಯರಾದ ಎಚ್.ಎನ್.ಬಸವರಾಜು, ಬೇಲದಕೆರೆನಂಜಪ್ಪ, ಮಂಜೇಗೌಡ, ಕುಂದನಹಳ್ಳಿ ಶಿವಕುಮಾರ್, ಕ್ಷೇತ್ರಪಾಲ, ನಂಜುಂಡಪ್ಪ, ರೇಣುಕಪ್ಪ, ಜಿಪಂ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ಅಂಕನಹಳ್ಳಿಜಗದೀಶ್, ಹಿರಿಕಳಲೆಗಣೇಶ್, ವಡಕಹಳ್ಳಿಮಂಜಣ್ಣ, ಕೃಷ್ಣೇಗೌಡ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts