More

    ಐಟಿಎಫ್ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೇರಿದ ರಾಮ್‌ಕುಮಾರ್: ತಗುಚಿ-ಮತ್ಸುಡಾಗೆ ಡಬಲ್ಸ್ ಪ್ರಶಸ್ತಿ

    ಕೃಷ್ಣ ಕುಲಕರ್ಣಿ ಕಲಬುರಗಿ
    ಜಪಾನ್‌ನ ರ‌್ಯುಕಿ ಮತ್ಸುಡಾ- ರ‌್ಯುಟೋರೋ ತಗುಚಿ ಜೋಡಿ ಕಲಬುರಗಿ ಓಪನ್ ಐಟಿಎಫ್ ಪುರುಷರ ವರ್ಲ್ಡ್ ಟೂರ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತ ಆತಿಥೇಯ ಭಾರತದ ರಾಮ್‌ಕುಮಾರ್ ರಾಮನಾಥನ್ ೈನಲ್‌ಗೇರಿದ್ದು, 8ನೇ ಶ್ರೇಯಾಂಕಿತ ಆಸ್ಟ್ರೀಯಾದ ಡೇವಿಡ್ ಪಿಚ್‌ಲೇರ್ ವಿರುದ್ಧ ಭಾನುವಾರ ಪ್ರಶಸ್ತಿ ಸುತ್ತಿನ ಹೋರಾಟ ನಡೆಸಲಿದ್ದಾರೆ.

    ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಲಾನ್ ಟೆನಿಸ್ ಅಂಕಣದಲ್ಲಿ ಶನಿವಾರ ನಡೆದ ಡಬಲ್ಸ್ ವಿಭಾಗದ ೈನಲ್‌ನಲ್ಲಿ ತಗುಚಿ- ಮತ್ಸುಡಾ ಜೋಡಿ 6-4, 2-6 (10-7) ಸೆಟ್‌ಗಳಿಂದ ಭಾರತದ ನಿತೀನ್ ಕುಮಾರ್ ಸಿನ್ಹಾ ಮತ್ತು ಆಸ್ಟ್ರೀಯಾದ ಡೇವಿಡ್ ಪಿಚ್‌ಲೇರ್ ಜೋಡಿಯನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಜತೆಗೆ 1.29 ಲಕ್ಷ ರೂ. ನಗದು ಬಹುಮಾನ ಮತ್ತು 25 ಎಟಿಪಿ ಪಾಯಿಂಟ್ ಗಳಿಸಿತು. ರನ್ನರ್‌ಅಪ್ ಜೋಡಿ 75 ಸಾವಿರ ರೂ. ನಗದು ಬಹುಮಾನ ಮತ್ತು 16 ಎಟಿಪಿ ಪಾಯಿಂಟ್ ಗಳಿಸಿತು.

    ಮುಂಬೈ ಮತ್ತು ಧಾರವಾಡದ ಐಟಿಎಫ್ ಪ್ರಶಸ್ತಿ ಗೆದ್ದಿರುವ ರಾಮ್‌ಕುಮಾರ್ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 6-2, 6-1 ನೇರ ಸೆಟ್‌ಗಳಿಂದ ಜಪಾನ್‌ನ ರ‌್ಯುಟೋರೋ ತಗುಚಿ ಎದುರು ಸುಲಭ ಗೆಲುವು ಸಾಧಿಸಿದರು. ಮತ್ತೊಂದೆಡೆ ಡೇವಿಡ್ ಪಿಚ್‌ಲೇರ್ 6-2, 6-4ರಿಂದ ಜಪಾನ್‌ನ ರ‌್ಯುಕಿ ಮತ್ಸುಡಾ ಎದುರು ಜಯಿಸಿದರು.

    ಇಂದು ಸಿಂಗಲ್ಸ್ ಫೈನಲ್: ನ.25ರಿಂದ ನಡೆದಿರುವ ಐಟಿಎಫ್ ಕಲಬುರಗಿ ಓಪನ್ ಪುರುಷರ ವರ್ಲ್ಡ್ ಟೆನಿಸ್ ಟೂರ್ ಅಂತಿಮ ಹಂತಕ್ಕೆ ತಲುಪಿದೆ. ಡಬಲ್ಸ್ ಶನಿವಾರ ಮುಗಿದಿದ್ದು, ಸಿಂಗಲ್ಸ್ ಫೈನಲ್ ಭಾನುವಾರ ನಡೆಯಲಿದೆ. ಐದನೇ ಶ್ರೇಯಾಂಕಿತ ಆಟಗಾರ ರಾಮ್‌ಕುಮಾರ್ ರಮಾನಾಥನ್ ಹಾಗೂ ಆಸ್ಟ್ರೀಯಾದ 8ನೇ ಶ್ರೇಯಾಂಕಿತ ಡೇವಿಡ್ ಪಿಚ್‌ಲೇರ್ ಟ್ರೋಫಿಗಾಗಿ ಸೆಣಸಾಡಲಿದ್ದಾರೆ. ಆತಿಥೇಯ ರಮಾನಾಥನ್ ಭಾರತೀಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಪಿಚ್‌ಲೇರ್ ಸಹ ಅದ್ಭುತ ಟ್ರಾೃಕ್ ರೆಕಾರ್ಡ್ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts