More

    ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

    ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ತಯಾರಿಸಿದ್ದೇ ಕಾಂಗ್ರೆಸ್​ನವರು! ಇಂಥ ಮನೆಹಾಳು, ತೇಜೋವಧೆ ಕೆಲಸ ಮಾಡೋದು ಅವ್ರೇ. ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ. ಅವ್ರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್​, 100% ಸಿಡಿ ಮಾಡಿದ್ದೇ ಕಾಂಗ್ರೆಸ್ ನವ್ರು, ಇನ್ಯಾರು ಮಾಡಿರ್ತಾರೆ? ಸಿಡಿ ಪ್ರಕರಣ ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ. ಸಿಬಿಐ‌ ತನಿಖೆಯಿಂದ ಎಲ್ಲವೂ ಆಚೆ ಬರುತ್ತೆ. ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ. ತಾಕತ್ತಿದ್ರೆ ನನ್ ವಿರುದ್ಧ ಇಲ್ಲವೇ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ. ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿರಿ ಗೋಕಾಕ್​ ಸಾಹುಕಾರನಿಗಾಗಿ ವಿಭಿನ್ನ ಅಭಿಯಾನ ಶುರು

    ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆನಾವು ಕೋರ್ಟ್​ಗೆ ಹೋಗಿದ್ದು, ಅವರು ನನ್ನ ವಿರುದ್ಧ ತೇಜೋವಧೆ ಮಾಡ್ತಾರೆ ಅಂತ. ಕಾಂಗ್ರೆಸ್​ನವರಿಗೆ ನೈತಿಕತೆ ಇಲ್ಲ. ನಮಗೆ ಏನ್ ಕೇಳೋದು ಅವ್ರು? ಕಾಂಗ್ರೆಸ್​ನವರ ತಟ್ಟೆಯಲ್ಲಿ ಹೆಗ್ಗಣ ಇದೆ. ನಮ್ಮ ತಟ್ಟೆಯಲ್ಲೇನು ನೋಡೋದು ಅವ್ರು? ನಾವು ಕೋರ್ಟ್​ಗೆ ಹೋದ್ರೆ ಅಪರಾಧಿಗಳಾಗಿ ಬಿಟ್ವಾ? ಕೋರ್ಟ್​ಗೆ ಹೋಗೋದು ಅಪರಾಧಾನಾ? ಅವತ್ತು ನಾವು ಆರು ಜನ ಇದ್ವಿ, ಕೋರ್ಟ್​ಗೆ ಅರ್ಜಿ ಹಾಕಿದ್ವಿ. ಉಳಿದವ್ರು ಬೇರೆ ದಿನ ಅರ್ಜಿ ಹಾಕ್ತಾರೆ ಅಂತ ಇತ್ತು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ಬಂತಲ್ಲ ಅದ್ಕೆ ಸುಮ್ಮನೆ ಆಗಿರಬಹುದು. ನಮ್ಮನ್ನು ಡ್ಯಾಮೇಜ್ ಮಾಡ್ಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸ್ಬೇಕು ಅಂತ ಸಂಚು ನಡೆದಿದೆ. ಅದಕ್ಕಾಗಿ ‌ಕೋರ್ಟ್​ಗೆ ಹೋದ್ವಿ. ನಮ್ಮ ವಿರುದ್ಧವೂ ಸಿಡಿ ಬರುತ್ತೆ ಅಂತ ನಾವು ಕೋರ್ಟಿಗೆ ಹೋಗಲಿಲ್ಲ ಎಂದು ಎಸ್.ಟಿ. ಸೋಮಶೇಖರ್ ಸ್ಪಷ್ಟನೆ ನೀಡಿದರು.

    ಕಾಂಗ್ರೆಸ್​ನವರು ಪ್ರಶ್ನೆ ಕೇಳಿದ್ದಾರೆ. ಸದನದಲ್ಲಿ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಲಿಖಿತವಾಗಿಯೂ ಉತ್ತರ ಕೊಡ್ತೇವೆ. ನಮ್ಮ ನೈತಿಕತೆ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡ್ತಿದಾರೆ. ಮೈತ್ರಿ ಸರ್ಕಾರ ಪತನ ಆಗಿದ್ದೇ ಈ ನೈತಿಕತೆಯಿಂದ. ನೈತಿಕತೆ ಬಗ್ಗೆ ಈಗ ಕೇಳ್ತಿದಾರೆ. ಸದನದಲ್ಲಿ ಇದರ ಬಗ್ಗೆ ಸೂಕ್ತ ಉತ್ತರ ಕೊಡ್ತೇವೆ ಎಂದರು.

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ಸಿಐಡಿಗೆ ಸಿಡಿ ಕೇಸ್​! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ

    ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

    ಗೋಕಾಕ್​ ಸಾಹುಕಾರನಿಗಾಗಿ ವಿಭಿನ್ನ ಅಭಿಯಾನ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts