More

    ಸಿಡಿ ಲೇಡಿಗೆ ವೈದ್ಯಕೀಯ ತಪಾಸಣೆಗೆ ಸಿದ್ಧತೆ

    ಬೆಂಗಳೂರು: ಸಿಡಿ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ವಿಚಾರಣೆಗೆ ಹಾಜರಾದ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಎಲ್ಲ ಸಿದ್ಧತೆಗಳೂ ನಡೆದಿದೆ.

    ಮೊದಲು ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಗೆ ಒಳಪಡಿಸಬಹುದು. ನಂತರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲು ವಿಕ್ಟೋರಿಯಾ ಆಸ್ಪತ್ರೆ‌ಗೆ ಕರೆತರುವ ಸಾಧ್ಯತೆಗಳಿವೆ. ಜತೆಗೆ ಯುವತಿಯ ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಮುಂದಾಗಿದೆ. ಇದೀಗ ಯುವತಿ 11.30ಕ್ಕೆ ಆಡುಗೋಡಿ ಟೆಕ್ನಿಕಲ್ ‌ವಿಭಾಗಕ್ಕೆ ವಿಚಾರಣೆಗೆ ಹಾಜರಾದ ಬಳಿಕ ಎಸ್‌ಐಟಿ ಮುಂದಿನ ನಡೆ ಏನು ಎಂಬುದು ಗೊತ್ತಾಗಲಿದೆ.

    ಮಂಗಳವಾರ ಸಂತ್ರಸ್ತೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದು, ನಂತರ ಎಸ್​ಐಟಿ ಅಧಿಕಾರಿಗಳು ಯುವತಿಯನ್ನ ಆಡುಗೋಡಿಯ ಟೆಕ್ನಿಕಲ್ ಸೆಲ್​ಗೆ ಕರೆದೊಯ್ದು ಸಿಆರ್​ಪಿಸಿ 161 ಅಡಿ ಹೇಳಿಕೆಗಳನ್ನ ಪಡೆದಿದ್ದರು.

    ಇದನ್ನೂ ಓದಿರಿ: ಹೋಟೆಲ್​ಗೆ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ವಧು-ವರ ಎಸ್ಕೇಪ್​! ಕಾರಣ ಕೇಳಿದ್ರೆ ಹುಬ್ಬೇರುವುದು ಖಂಡಿತ!

    ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆಗೆ ನೋಟಿಸ್ ನೀಡಲಾಗಿದೆ. ಮಂಗಳವಾರ ಯುವತಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.

    28 ದಿನಗಳ ಬಳಿಕ ಅಜ್ಞಾತವಾಸದಿಂದ ಯುವತಿ ಹೊರ ಬಂದಿದ್ದಾಳೆ. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಸೌಮೇಂದು ಮುಖರ್ಜಿ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿ ಕುಮಾರ್ ಸಮ್ಮುಖದಲ್ಲಿ ಪ್ರಕರಣದ ತನಿಖಾಧಿಕಾರಿ ಕವಿತಾ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

    ಇನ್​ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ ಮದ್ವೆ ಬಳಿಕ ಆತ್ಮಹತ್ಯೆಯಲ್ಲಿ ಅಂತ್ಯ! ಇದು ಯುವತಿಯ ಕಣ್ಣೀರ ಕತೆ

    ಏರ್​ಪೋರ್ಟ್​ನಲ್ಲಿ ಕ್ಯಾಬ್​ ಚಾಲಕನಿಂದ ಆತ್ಮಹತ್ಯೆ ಯತ್ನ; ಕಾರಣದ ಸುಳಿವು ನೀಡಿತು ಚಾಲಕರ ಈ ಆಕ್ರೋಶ?

    ಉಪ ಚುನಾವಣೆ: 47 ಅಭ್ಯರ್ಥಿಗಳಿಂದ 70 ನಾಮಪತ್ರ ಸಲ್ಲಿಕೆ; ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts