More

    ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್​…!

    ನವದೆಹಲಿ: ಬಾಬಾ ರಾಮ್‌ದೇವ್‌ರ ಪತಂಜಲಿ ಸಂಸ್ಥೆಯು ಕರೊನಾಗೆ ರೋಗಕ್ಕೆ ಕರೊನಿಲ್ ಆ್ಯಂಡ್ ಸ್ವಾಸರಿ ಹೆಸರಿನ ಔಷಧವನ್ನು ಬಿಡುಗಡೆ ಮಾಡಿದೆ. ಈ ಔಷಧವು ಕೇವಲ ಏಳು ದಿನಗಳಲ್ಲಿ ಸೋಂಕಿತರನ್ನು ಗುಣಪಡಿಸುತ್ತದೆ ಎಂದೂ ಹೇಳಿದೆ. ಆದರೆ ಕೇಂದ್ರ ಸರ್ಕಾರ, ಈ ಔಷಧವನ್ನು ಪರೀಕ್ಷಿಸಿ ಖಚಿತ ಪಡಿಸುವವರೆಗೂ ಇದನ್ನು ಪ್ರಚಾರ ಮಾಡಬಾರದು ಎಂದು ಪತಂಜಲಿ ಸಂಸ್ಥೆಗೆ ಸೂಚಿಸಿದೆ.

    ಎರಡು ರೀತಿಯ ಪ್ರಯೋಗಳನ್ನು ಮಾಡಿದ ನಂತರ ಔಷಧವನ್ನು ಬಿಡುಗಡೆ ಮಾಡಲಾಗಿದೆ. ಕ್ಲಿನಿಕಲ್ ಕಂಟ್ರೋಲ್ಡ್ ಅಧ್ಯಯನದಲ್ಲಿ ದೇಶದಾದ್ಯಂತ 280 ಸೋಂಕಿತರಿಗೆ ಈ ಔಷಧವನ್ನು ನೀಡಲಾಗಿತ್ತು. ಅದರಲ್ಲಿ ಶೇ. 100 ಸೋಂಕಿತರು ಔಷಧ ಸೇವನೆಯ ನಂತರ ಗುಣಮುಖರಾಗಿದ್ದಾರೆ. ನಂತರ ಆಲ್ ಇಂಪಾರ್ಟಂಟ್ ಕ್ಲಿನಿಕಲ್ ಕಂಟ್ರೋಲ್ ಟ್ರಯಲ್ ನಡೆಸಲಾಯಿತು. ಇದರಲ್ಲಿ 95 ಸೋಂಕಿತರಿಗೆ ಔಷಧ ನೀಡಲಾಗಿತ್ತು. ಶೇ. 69 ಸೋಂಕಿತರು ಮೂರೇ ದಿನಗಳಲ್ಲಿ ಗುಣಮುಖರಾಗಿದ್ದು ಏಳು ದಿನಗಳೊಳಗೆ ಎಲ್ಲ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಬಾಬಾ ರಾಮ್‌ದೇವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!

    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಜತೆ ಸೇರಿ ಈ ಔಷಧ ತಯಾರಿಸಲಾಗಿದೆ. ಔಷಧದ ಕ್ಲಿನಿಕಲ್ ಪ್ರಯೋಗಕ್ಕೆ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಈ ಔಷಧವನ್ನು ಅಧೀಕೃತವಾಗಿ ಬಳಸುವುದಕ್ಕೆ ಅನುಮತಿ ಸಿಕ್ಕಿದೆಯೇ ಎನ್ನುವುದರ ಕುರಿತಾಗಿ ಅವರು ಮಾಹಿತಿ ನೀಡಿಲ್ಲ.

    ಸರ್ಕಾರದಿಂದ ತಡೆ:
    ಕರೊನಾ ಸೋಂಕು ಗುಣಪಡಿಸುವ ಸಾಮರ್ಥ್ಯವು ದೃಢವಾಗುವವರೆಗೂ ಈ ಔಷಧವನ್ನು ಪ್ರಚುರ ಪಡಿಸುವಂತಿಲ್ಲ ಎಂದು ಆಯುಷ್ ಸಚಿವಾಲಯ ಸೂಚಿಸಿದ್ದು, ಔಷಧಕ್ಕೆ ಬಳಸಿರುವ ಸಂಯುಕ್ತ, ಗಿಡಮೂಲಕೆ ವಿವರವನ್ನು ಶೀಘ್ರದಲ್ಲಿ ಸಲ್ಲಿಸುವಂತೆ ಪತಂಜಲಿ ಸಂಸ್ಥೆಗೆ ಆದೇಶಿಸಿದೆ. ಕ್ಲಿನಿಕಲ್ ಟ್ರಯಲ್‌ನ ಸ್ಯಾಂಪಲ್‌ಗಳು, ಪರೀಕ್ಷೆ ನಡೆಸಿದ ಸ್ಥಳ ಅಥವಾ ಆಸ್ಪತ್ರೆಗಳ ಮಾಹಿತಿ ಮತ್ತು ವರದಿ ನೀಡುವಂತೆಯೂ ನಿರ್ದೇಶನ ನೀಡಿದೆ. (ಏಜೆನ್ಸೀಸ್​) ಇದನ್ನೂ ಓದಿ: ನಾ ಮಾಡಿದ್ದು ಸರಿಯೋ? ತಪ್ಪೋ? ಗೊತ್ತಿಲ್ಲ, ಕ್ಷಮಿಸಿ ಎಂದು ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ: ಡೆತ್​ನೋಟ್​ ಪತ್ತೆ

    VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ ತೆರೆಯಲು ಮುಂದಾದ ಯುವತಿಯರಿಗೆ ಕಾದಿತ್ತು ಭಾರಿ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts