More

    ಅಯೋಧ್ಯೆ ಅಕ್ಷತೆಗೆ ಅದ್ದೂರಿ ಸ್ವಾಗತ

    ಕಲಬುರಗಿ: ಅಯೋಧ್ಯೆಯಲ್ಲಿ ೧೫೨೮ರ ಕರಾಳ ವರ್ಷದಂದು ಬಾಬರನು ಮಂದಿರವನ್ನು ನಾಶ ಮಾಡಿದ. ಅದು ಬರೀ ಮಂದಿರ ನಾಶದ ಉz್ದೆÃಶವಾಗಿರಲಿಲ್ಲ. ಹಿಂದು ಧರ್ಮವನ್ನು ನಾಶ ಮಾಡುವ ಹುನ್ನಾರವಾಗಿತ್ತು. ಕಳೆದ ಐದು ಶತಮಾನದ ಕಳಂಕಕ್ಕೆ ಮುಕ್ತಿ ದೊರಕ್ಕಿದ್ದು, ಇದೀಗ ಭವ್ಯ ರಾಮ ಮಂದಿರ ತಲೆ ಎತ್ತಿ ನಿಲ್ಲುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ ಮಾರ್ಥಾಂಡ ಶಾಸ್ತಿç ಹೇಳಿದರು.
    ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಅಕ್ಷತಾ ವಿತರಣೆ ಅಭಿಯಾನದ ನಿಮಿತ್ತ ನಗರದ ಕರುಣೇಶ್ವರ ಕಾಲನಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಕ್ಷತೆಯ ಕಲಶಗಳ ಮೆರವಣಿಗೆ, ಅಭಿಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೋಟ್ಯಂತರ ಹಿಂದುಗಳ, ಕರಸೇವಕರ ಬಲಿದಾನದಿಂದ ಇದೀಗ ಜನ್ಮಸ್ಥಳದಲ್ಲೇ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ ಎಂದು ಹೇಳಿದರು.
    ತೊನಸನಳ್ಳಿಯ ಶ್ರೀ ಮಲ್ಲಣ್ಣಪ್ಪ ಮಹಾರಾಜ, ಶ್ರೀ ದೊಡ್ಡೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತಕ್ಕೆ ಅಖಂಡತೆಯ ಸ್ಪರ್ಷ ನೀಡಿದ ಶಕ್ತಿ, ಸ್ಫೂರ್ತಿ ರಾಮನಾಗಿದ್ದಾನೆ. ವಿದೇಶಿಗರೂ ಎಷ್ಟೇ ಆಕ್ರಮಣ ಮಾಡಿದರೂ, ದೌರ್ಜನ್ಯ ನಡೆಸಿದರೂ ಹಿಂದು ಧರ್ಮ ಪುನರುಜ್ಜೀವನಗೊಂಡು ತಲೆ ಎತ್ತಿ ನಿಲ್ಲುತ್ತದೆ ಎಂಬುದಕ್ಕೆ ರಾಮ ಮಂದಿರ ಸಾಕ್ಷಿಯಾಗಿದೆ ಎಂದು ಹೇಳಿದರು.
    ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿ, ಐದು ಶತಮಾನದ ಕಳಂಕಕ್ಕೆ ಮುಕ್ತಿ ದೊರಕ್ಕಿದ್ದು, ಕೋಟ್ಯಂತರ ಭಕ್ತರ ಹೋರಾಟ ಫಲದಿಂದ ನಮಗೆ ಭವ್ಯ ಮಂದಿರ ದೊರೆಯುತ್ತಿದೆ. ಇದು ನಮ್ಮ ಭಾಗ್ಯವಾಗಿದ್ದು, ೨೦೨೪ ಜಗತ್ತಿನ ಇತಿಹಾಸದಲ್ಲಿ ಸುವರ್ಣ ವರ್ಷ. ಪ್ರತಿ ಹಿಂದುವಿನ ಶಕ್ತಿಗೆ ಜಾಗೃತಿ, ಆಶೀರ್ವಾದ ರೂಪವಾಗಿ ಅಕ್ಷತೆ ಬಂದಿದೆ. ಭಕ್ತರಿಗಾಗಿ ಅಕ್ಷತೆ ಬಂದಿದೆ ಎಂದು ಹೇಳಿದರು.
    ಬಾಲಯೋಗಿನಿ ಜಯಶ್ರೀ ಮಾತಾ ಆಶೀರ್ವಚನ ನೀಡಿದರು. ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷ ಲಿಂಗರಾಜ ಅಪ್ಪ, ಪ್ರಮುಖರಾದ ಶ್ರೀಮಂತ ನವಲದಿ, ಖಗೇಶನ ಪಟ್ಟಣಶೆಟ್ಟಿ, ಸುರೇಶ ಹೇರೂರ, ಶಿವರಾಜ ಸಂಗೋಳಗಿ, ಬಸವರಾಜ ಸೂಗೂರ, ಅಶ್ವಿನ ಕುಮಾರ, ಸತೀಶ ಮಾಹೂರ, ಪ್ರದೀಪ ಪಾಟೀಲ್, ಸುಭಾಷ ಕಾಂಬಳೆ, ಅಶೋಕ ಬಗಲಿ, ಉಮೇಶ ಪಾಟೀಲ್, ಅರವಿಂದ ನವಲಿ, ಶರಣರಾಜ ಶೇಳಗಾಂವಕರ್, ಅಂಬರೀಶ ಸುಳೇಗಾಂವ ಇತರರಿದ್ದರು. ಸುಮಂಗಲಾ ಚಕ್ರವರ್ತಿ ನಿರೂಪಣೆ ಮಾಡಿದರು.

    ಭಕ್ತಿ ಶ್ರದ್ಧೆಯ ಮೆರವಣಿಗೆ…: ಅಯೋಧ್ಯೆಯಿಂದ ಆಗಮಿಸಿದ ಶ್ರೀರಾಮಮಂದಿರದ ಅಕ್ಷತೆ ಇರುವ ಕಲಶಗಳನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಮೆರವಣಿಗೆ ಮೂಲಕ ತರಲಾಯಿತು. ನಗರದ ಶ್ರೀರಾಮಂದಿರದಿAದ ಕರುಣೇಶ್ವರ ನಗರದ ಹನುಮಾನ ಮಂದಿರದವರೆಗೆ ನೂರಾರು ರಾಮ ಭಕ್ತರು, ಮಾಲಾಧಾರಿಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತ, ಕಾವಿ ಧ್ವಜವನ್ನು ಹೊತ್ತು ಬಂದರು. ಅಲಂಕೃತ ಪಲ್ಲಕ್ಕಿ ಮತ್ತು ತಲೆ ಮೇಲೆ ಕಲಶಗಳನ್ನು ಹೊತ್ತು ಹೆಜ್ಜೆ ಹಾಕುವ ಜತೆಗೆ ಭಜನೆ, ಗಾಯನದೊಂದಿಗೆ ಮೆರವಣಿಗೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts