More

    ಆಸೆ, ಕಾಮನೆಗಳಿಂದ ತೃಪ್ತಿ ಅಸಾಧ್ಯ; ವಿನಯಾನಂದ ಸರಸ್ವತಿ ಶ್ರೀ

    ಶಿವಮೊಗ್ಗ: ಆಸೆ, ಕಾಮನೆಗಳಿಂದ ತೃಪ್ತಿ ಪಡೆಯಲು ಸಾಧ್ಯವಿಲ್ಲ. ತ್ಯಾಗದಿಂದ ಮಾತ್ರ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿ ಹೇಳಿದರು.
    ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮಂಗಳವಾರ ಶ್ರೀ ರಾಮಕೃಷ್ಣ ಪರಮಹಂಸರ 187ನೇ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಕಾಮನೆಗಳು ಎಂದಿಗೂ ಮುಗಿಯುವುದಿಲ್ಲ. ನಮ್ಮಲ್ಲಿರುವ ಬಯಕೆ ಎಂಬ ಅಗ್ನಿಗೆ ಆಸೆ ಎಂಬ ತುಪ್ಪ ಸುರಿದರೆ, ಬಯಕೆ ಇನ್ನೂ ಹೆಚ್ಚಾಗುತ್ತದೆ ಎಂದರು.
    ಶ್ರೀ ರಾಮಕೃಷ್ಣ ಪರಮಹಂಸರು ಕೇವಲ ಮನುಷ್ಯನ ಉದ್ಧಾರಕ್ಕೆ ಅಷ್ಟೇ ಅಲ್ಲ, ಸಕಲ ಜೀವಿಗಳ ಹಿತಕ್ಕಾಗಿ ಅವತರಿಸಿದವರು. ಮನುಷ್ಯರನ್ನು ಬಿಟ್ಟು ಬೇರೆ ಯಾವ ಜೀವಿಯೂ ಧರ್ಮಬಿಟ್ಟು ನಡೆಯುವುದಿಲ್ಲ. ಆದರೆ ಮನುಷ್ಯ ಸ್ವಾರ್ಥ, ಭೋಗ, ಸಂಪತ್ತಿಗಾಗಿ ಅಧರ್ಮ ಮಾರ್ಗದಲ್ಲಿ ನಡೆಯುತ್ತಾನೆ. ಇಂತಹ ಮಾರ್ಗದಲ್ಲಿ ಗಳಿಸಿದ ಸಂಪತ್ತನ್ನು ದಾನ ಮಾಡುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಹೇಳಿದರು.
    ಧರ್ಮದಿಂದ ಗಳಿಸಿದ್ದು ಮಾತ್ರ ದಾನಕ್ಕೆ ಯೋಗ್ಯ. ಭಗವಂತನ ನಾಮಸ್ಮರಣೆಯಿಂದ ವಸ್ತು, ವ್ಯಕ್ತಿಯ ಮೋಹ ಕಡಿಮೆಯಾಗಿ ಭಕ್ತಿ ಬೆಳೆಯುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದೆ ಭಜನೆ, ಭಗವಂತನ ನಾಮಸ್ಮರಣೆಯಿಂದ ಕರ್ಮ ಕಳೆದುಕೊಳ್ಳಲು ಸಾಧ್ಯ. ಈ ಮೂಲಕ ಚಿತ್ತ ಶುದ್ಧಿ ಆಗಿ ಭಕ್ತಿ ಊರ್ಜಿತವಾಗುತ್ತದೆ. ಜೀವನ ಉದ್ಧಾರ ಆಗಬೇಕಾದರೆ ಸಾಧು, ಸಂತರ ಸಂಘ, ಸತ್ಸಂಗ, ಪ್ರಶಾಂತ ಸ್ಥಳದಲ್ಲಿ ನಿರ್ಜನವಾಸ, ಭಗವಂತನ ನಿರಂತರ ನಾಮಗುಣ ಸಂಕೀರ್ತನೆ ಅಗತ್ಯ ಎಂದು ಹೇಳಿದರು. ಸಾಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜ್ಞಾನಾನಂದ ಮಹಾರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts