More

    ರಾಮ ಮಂದಿರ ಹೆಸ್ರಲ್ಲಿ ಯಾರ‍್ಯಾರೋ ಹಣ ಲೂಟಿ ಮಾಡ್ತಾರೆ, ನನ್ನ ಮನೆಗೂ ಬಂದು ಬೆದರಿಕೆ ಹಾಕಿದ್ರು: ಎಚ್​ಡಿಕೆ

    ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ ಯಾವುದೇ ವಿರೋಧವಿಲ್ಲ. ಆದ್ರೆ ಧಾರ್ಮಿಕ ಭ್ರಷ್ಟಾಚಾರ ಸಹಿಸಲ್ಲ ಎಂದು ಮಾಜಿ ಸಿಎಂ ಎಚ್.​ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ‘ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ ಮತ್ತು ಕೊಡದವರ ಮನೆ ಗುರುತು ಮಾಡಲಾಗುತ್ತಿದೆ…’ ಎಂದು ಎಚ್​ಡಿಕೆ ಮಾಡಿದ್ದ ಟ್ವೀಟ್​ ವಿರುದ್ಧ ವಿಎಚ್​ಪಿ(ವಿಶ್ವ ಹಿಂದು ಪರಿಷತ್​) ಸೇರಿದಂತೆ ಹಲವರು ಕಿಡಿಕಾರಿದ್ದರು. ಈ ಕುರಿತು ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ನನ್ನ ಮನೆಗೆ ಮೂರ್ನಾಲ್ಕು ಬಾರಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಡಿ ಎಂದು ಬೆದರಿಕೆ ಹಾಕಿದ್ದರು. ನೀವ್ಯಾರು? ನಿಮಗ್ಯಾಕೆ ಹಣ ಕೊಡಬೇಕು ಎಂದು ಕೇಳಿದ್ದಕ್ಕೆ ‘ಇದು ದೇಶದ ಪ್ರತೀಕ. ಹಣ ಕೊಡ್ತೀರೋ ಇಲ್ವೋ’ ಎಂದು ರೂಢಾಗಿ ವರ್ತಿಸಿದ್ರು. ನನ್ನ ಬಳಿಯೇ ಹಣಕ್ಕಾಗಿ ಬಲವಂತ ಮಾಡೋರು ಇನ್ನು ಜನ ಸಮಾನ್ಯರ ಬಳಿ ಹೇಗೆ ಕೇಳಬಹುದು? ಎಂದು ಪ್ರಶ್ನಿಸಿದರು. ಇದನ್ನೂ ಓದಿರಿ ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ರಾಮನ ಹೆಸರಲ್ಲಿ ಹಣ ಹೊಡೆಯುವ ಕೆಲಸ ಮಾಡಬಾರದು ಅಂತ ನಾನು ಹೇಳಿದೆ. ರಾಮ ಮಂದಿರಕ್ಕೆ ನನ್ನ ವಿರೋಧ ಇಲ್ಲ. ಕೆಲ ವರ್ಷದ ಹಿಂದೆ ಹಣ ಸಂಗ್ರಹ ಮಾಡೋ ಕೆಲಸ ಆಯ್ತು. ಅದ್ಹೇನಾಯ್ತು? ಮೊದಲು ಇದುವರೆಗೂ ಅದೆಷ್ಟು ಸಂಗ್ರಹ ಆಗಿದೆ ಎಂದು ಲೆಕ್ಕಕೊಡಿ. ರಾಮ ಮಂದಿರ ಕಟ್ಟೋ ಹೆಸರಲ್ಲಿ ಗಲ್ಲಿ-ಗಲ್ಲಿಗಳಲ್ಲಿರೋರೂ ಹಣ ವಸೂಲಿ ಮಾಡ್ತಿದ್ದಾರೆ. ಯಾರ್ಯಾರೋ ಬರ್ತಾರೋ ಹಣ ಕೇಳೋಕೆ. ನಮ್ಮ ಮನೆಗೂ ಮೂರು ಜನ ಬಂದಿದ್ದರು. ಅದರಲ್ಲಿ ಒಂದು ಹೆಣ್ಣು ಮಗಳೂ ಇದ್ದಳು. ಯಾವುದೇ ಸಂಸ್ಥೆ ಹೆಸರೇಳದೆ ನನ್ನ ಬಳಿ ದೇಣಿಗೆ ಕೇಳಿದ್ರು. ಆ ತಂಡದಲ್ಲಿದ್ದ ಒಬ್ಬ ಮಹಿಳೆ ಬೆದರಿಸುವ ರೀತಿಯಲ್ಲಿ ಹಣ ಕೇಳಿದ್ರು. ಹಣ ಸಂಗ್ರಹಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ಯಾ? ಹಣ ಕೇಳೋಕೆ ಬರೋರು ವಿಹಿಂಪ ದವರೇ ಎಂದು ನಮಗೆ ಹೇಗೆ ಗೊತ್ತಾಗುತ್ತೆ. ಅವರ ಬಳಿ ಏನಾದ್ರೂ ದಾಖಲೆ ಇದ್ಯಾ? ಧರ್ಮದ ಹೆಸರಲ್ಲಿ ಭ್ರಷ್ಟಾಚಾರ ಆಗ್ಬಾರ್ದು? ರಾಮನ ಹೆಸ್ರಲ್ಲಿ ಯಾರ್ಯಾರೋ ಹಣ ವಸೂಲಿ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಹೇಳಿದೆ. ಅದು ತಪ್ಪೇ? ಎಂದು ಎಚ್​ಡಿಕೆ ಪ್ರಶ್ನಿಸಿದರು.

    ರಾಮ ಮಂದಿರ ನಿರ್ಮಾಣಕ್ಕೆ ಐದು ಸಾವಿರ ಕೋಟಿ ಹಣ ಸಂಗ್ರಹ ಮಾಡಿಕೊಳ್ಳಿ. ಇದಕ್ಕೆ ನನ್ನ ಬೆಂಬಲ ಇದೆ. ಆದ್ರೆ ರಾಮನ ಹೆಸ್ರಲ್ಲಿ ಯಾರ್ಯಾರೋ ಹಣ ಲೂಟಿ ಮಾಡೋದು ಬೇಡ ಅನ್ನೋದಷ್ಟೇ ನನ್ನ ಆಗ್ರಹ. ಇಂದು ಡಿಜಿಟಲ್​ ಮಯ ಆಗಿದೆ. ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಬಿಟಿ. ಈ ನಂಬರ್​ಗೆ ರಾಮ ಮಂದಿರಕ್ಕಾಗಿ ಹಣ ಕಳುಹಿಸಿ ಎಂದು. ಜನ ಹಣ ಹಾಕ್ತಾರೆ. ಜನಸಾಮಾನ್ಯರ ನಂಬಿಕೆಗೆ ದ್ರೋಹ ಆಗಬಾರದು. ಜನ್ ಧನ್ ಹೆಸರಲ್ಲಿ ಅಕೌಂಟ್ ತೆರೆಯಲಾಗಿದೆ. ಆನ್ ಲೈನ್‌ನಲ್ಲಿ ಹಣ ಸಂಗ್ರಹ ಮಾಡಿಕೊಳ್ಳಿ ಎಂದು ಎಚ್​ಡಿಕೆ ಸಲಹೆ ನೀಡಿದರು.

    ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ರಾಮ ಮಂದಿರಕ್ಕೆ ಹಣ ಕೊಡದವರ ಮನೆ ಗುರುತು: ಎಚ್.​ಡಿ. ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ವಿಎಚ್​ಪಿ

    ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

    ಮೊನ್ನೆ ನಾಯಿ ಮೇಲೆ ಅತ್ಯಾಚಾರ, ನಿನ್ನೆ ಭಿಕ್ಷುಕಿ ಮೇಲೆ ಕಾಮುಕರ ಅಟ್ಟಹಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts