More

    ಶತ್ರುವನ್ನೂ ಪ್ರೀತಿಸುವ ಗುಣ ರಾಮನದು

    ಬೀರೂರು: ಬದುಕಿನ ಹಾದಿಯಲ್ಲಿ ಕೆಡುಕನ್ನು ಬಯಸುವವರಿಗೂ ಒಳಿತನ್ನು ಬಯಸಿದ್ದ ಆದರ್ಶ ಪುರುಷ ಶ್ರೀರಾಮ ಎಂದು ಯಗಟಿಯ ಪಂಡಿತರಾದ ಶಿವಲಿಂಗ ಸ್ವಾಮಿ ತಿಳಿಸಿದರು.

    ಅಯೋಧ್ಯೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ವಿವೇಕಾನಂದ ಯುವಕರ ಸಂಘದಿಂದ ಸೋಮವಾರ ಯಗಟಿಪುರ ಆಂಜನೇಯ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ದೀಪೋತ್ಸವ ಕಾರ್ಯಕ್ರಮ ಮಾತನಾಡಿದರು.
    ಶ್ರೀರಾಮನ ಜೀವನ ನಮ್ಮೆಲ್ಲರಿಗೂ ಆದರ್ಶಮಯ. ಶತ್ರುವನ್ನೂ ಪ್ರೀತಿಸುವ ಗುಣ, ಹಿರಿಯರಿಗೆ ನೀಡುವ ಗೌರವ, ಸಹಚರರೊಂದಿಗೆ ಅವರಿಗಿದ್ದ ನಡವಳಿಕೆ ಹಾಗೂ ಆತನ ಆದರ್ಶಗಳನ್ನು ಮಕ್ಕಳಿಗೆ ತಿಳಿಸಬೇಕು. ಶ್ರೀರಾಮ ಎಂದರೆ ಕೇವಲ ಹೆಸರಲ್ಲ, ಅದೊಂದು ಶಕ್ತಿ, ವಿಧಾನ, ವಿಚಾರ. ಕಣಕಣದಲ್ಲೂ ಶ್ರೀರಾಮನನ್ನು ಜಪಿಸಿ ಪ್ರತಿಯೊಬ್ಬರೂ ಆತನ ಹಾದಿಯಲ್ಲಿ ನಡೆದರೆ ಇಡೀ ದೇಶ ಕೆಲವೇ ದಿನಗಳಲ್ಲಿ ರಾಮರಾಜ್ಯ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
    ಆರ್‌ಎಸ್‌ಎಸ್ ಮುಖಂಡ ಹನೆಗೆರೆ ಉದಯ್‌ಕುಮಾರ್ ಮಾತನಾಡಿ, 500 ವರ್ಷಗಳ ಸುದೀರ್ಘ ಕಾಲದ ಹೋರಾಟದ ಲವಾಗಿ ಶ್ರೀರಾಮ ಮತ್ತೆ ಅವತರಿಸಿದ್ದಾನೆ. ಈ ಭವ್ಯ ದೇಗುಲವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ಹೋರಾಟದ ಹಿಂದೆ ಹಲವರ ತ್ಯಾಗ, ಬಲಿದಾನವಾಗಿದೆ. ಅಂದು ಮಡಿದವರೆಲ್ಲರಿಗೂ ಈಗ ಚಿರಶಾಂತಿ ಲಭಿಸಿದೆ ಎಂದು ತಿಳಿಸಿದರು.
    ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಪಿ.ವಿ.ಮನುಕುಮಾರ್, ವಕೀಲರಾದ ಮಲ್ಲಿಕಾರ್ಜುನ್, ಪವನ್‌ಕುಮಾರ್, ಮಲ್ಲಿಕಾರ್ಜುನ್ ಶಾಸಿ, ಪ್ರದೀಪ, ಹಾಲಪ್ಪ, ವಿಶ್ವನಾಥ್, ವಿಜಯ್‌ಕುಮಾರ್, ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts