More

    ರಾಮಮಂದಿರ ನಿರ್ಮಾಣ: ಬುನಾದಿ ಸ್ಥಳದಲ್ಲಿ ಸರಯೂ ನದಿ ನೀರಿನ ಸೆಲೆ

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುನಾದಿ ಹಾಕುವುದಕ್ಕೆ ನಿಗದಿ ಪಡಿಸಿದ ಸ್ಥಳದಲ್ಲಿ ಸರಯೂ ನದಿ ನೀರಿನ ಸೆಲೆ ಕಾಣಿಸಿಕೊಂಡಿದೆ. ಆದ್ದರಿಂದ ಅಲ್ಲಿಗೆ ಸೂಕ್ತ ಅತ್ಯುತ್ತಮ ಬುನಾದಿ ಮಾದರಿಗಾಗಿ ರಾಮಮಂದಿರ ಟ್ರಸ್ಟ್ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಗಳ ನೆರವು ಕೋರಿದೆ.

    ಮೂಲಗಳ ಪ್ರಕಾರ, ಪ್ರಧಾನಿಯವರ ಮಾಜಿ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಮುಖ್ಯಸ್ಥರಾಗಿರುವ ಮಂದಿರ ನಿರ್ಮಾಣ ಸಮಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಕ್ರಮವನ್ನು ಅನ್ವೇಷಿಸಿದೆ. ಸದ್ಯ ಹಾಕಿಕೊಂಡಿರುವ ಯೋಜನೆ ಪ್ರಕಾರ ಬುನಾದಿ ನಿರ್ಮಿಸಿದರೆ ಅದಕ್ಕೆ ಸರಯೂ ನದಿ ನೀರಿನ ಸೆಲೆಯ ಒತ್ತಡವನ್ನು ತಾಳಿಕೊಳ್ಳಲಾಗದು ಎಂಬುದು ಸಭೆಯಲ್ಲಿ ನಡೆದ ಮಾತುಕತೆ ವೇಳೆ ಎಲ್ಲರಿಗೂ ಮನವರಿಕೆಯಾಗಿದೆ.

    ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಕಾರ್ಯಾಲಯ ಉದ್ಘಾಟನೆ

    ನಿರ್ಮಾಣ ಸಮಿತಿಯ ಎದುರು ಸದ್ಯ ಎರಡು ಆಯ್ಕೆಗಳಿದ್ದು, ಒಂದು ವಿಬ್ರೋ ಸ್ಟೋನ್​ ಸ್ತಂಭ (ಹುಡಿಮಾಡಿದ ಕರ್ಗಲುಗಳ ಸ್ತಂಭ)ವನ್ನು ನಿರ್ಮಿಸಿ ಬುನಾದಿಗೆ ಬೆಂಬಲ ಒದಗಿಸುವುದು. ಇನ್ನೊಂದು ಎಂಜಿನಿಯರಿಂಗ್ ಪರಿಹಾರದ ಮೂಲಕ ಆ ಮಣ್ಣಿನ ಗುಣಮಟ್ಟ ಮತ್ತು ಸುದೃಢತೆಯನ್ನು ಹೆಚ್ಚಿಸುವುದು. ಇವುಗಳ ಪರಿಶೀಲನೆಯೂ ನಡೆಯುತ್ತಿದೆ.

    ಇದನ್ನೂ ಓದಿ: ಮೋದಿ ಕೇಶದ ಹಿಂದೆ ರಾಮ ಮಂದಿರ ದೀಕ್ಷೆ

    ಹೆಚ್ಚುವರಿ ಪರಿಹಾರವೇನಾದರೂ ಸಿಗಬಹುದೆಂಬ ಆಶಯದೊಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇಥ್ರ ಟ್ರಸ್ಟ್​, ರಾಮ ಮಂದಿರ ನಿರ್ಮಾಣಕ್ಕೆ ಸೂಕ್ತವಾದ ಸುಭದ್ರ ಬುನಾದಿಗೆ ಸರಿಯಾದ ಮಾದರಿಗಳನ್ನು ಸೂಚಿಸುವಂತೆ ಐಐಟಿಗಳ ಮೊರೆ ಹೋಗಿದೆ. ಸದ್ಯದ ಯೋಜನೆ ಪ್ರಕಾರ ರಾಮ ಮಂದಿರ ನಿರ್ಮಾಣಕಾರ್ಯ 2023ರ ವೇಳೆಗೆ ಪೂರ್ಣಗೊಳ್ಳಬೇಕಾಗಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬ್ರ್ಯಾಂಡ್​ ಪ್ರೊಮೋಷನ್​ಗೆ ಮೋದಿ, ಯೋಗಿ ಫೋಟೋ ಬಳಕೆ: ಸಚಿವರ ಸಹೋದರನಾದ್ರೂ ಬಿತ್ತು ಎಫ್​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts