More

    ಮೋದಿ ಕೇಶದ ಹಿಂದೆ ರಾಮ ಮಂದಿರ ದೀಕ್ಷೆ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಬಿಟ್ಟಿರುವ ಕೇಶರಾಶಿ ಹಿಂದೆ ರಾಮಮಂದಿರ ನಿರ್ಮಾಣದ ದೀಕ್ಷೆ ಇರಬಹುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಕೃಷ್ಣ ಮಠದಲ್ಲಿ ಭಾನುವಾರ ಮಾತನಾಡಿ, ನಮ್ಮಲ್ಲಿ ದೇವಾಲಯ ಕಾರ್ಯದಲ್ಲಿ ಪಾಲ್ಗೊಂಡಾಗ ದೀಕ್ಷಾಬದ್ಧ ರಾಗುತ್ತಾರೆ. ಇದೀಗ ನಾವು ಗಮನಿಸಿದಂತೆ ಮೋದಿ ಅವರು ಇತ್ತೀಚೆಗೆ ರಾಮಮಂದಿರ ಶಿಲಾನ್ಯಾಸ ಮಾಡಿದ್ದಾರೆ. ನೈತಿಕ ಹಿನ್ನೆಲೆಯಲ್ಲಿ ಅವರು ದೇವಾಲಯ ನಿರ್ವಣದ ಸಂಪೂರ್ಣ ಜವಾಬ್ದಾರಿ ಹೊತ್ತಂತೆ. ಈ ವೇಳೆ ಕೇಶ ತೆಗೆಯುವುದಿಲ್ಲ. ಪ್ರಾಯಶಃ ಅವರು ಅನುಷ್ಠಾನ ಮಾಡಿರಬೇಕು ಎನ್ನಿಸುತ್ತಿದೆ ಎಂದರು. ರಾಮಮಂದಿರ ನಿರ್ಮಾಣ ಕಾರ್ಯ ಮೂರೂವರೆ ವರ್ಷದಲ್ಲಿ ಸಂಪೂರ್ಣ ಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೆ ಮಣ್ಣಿನ ಪರೀಕ್ಷೆ ಮಾಡಲಾಗಿದೆ. 200 ಅಡಿಗಳವರೆಗೂ ಧೂಳು ಮರಳು ಇರುವುದು ಗೊತ್ತಾಗಿದೆ. ಮುಂದೆ ಅದನ್ನು ಹೇಗೆ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಪರಿಶೀಲನೆ ಮಾಡುತ್ತಾರೆ. ಅಂದಾಜು 1500 ಕೋಟಿ ರೂ. ಬಜೆಟ್ ಹಾಕಿಕೊಳ್ಳಲಾಗಿದ್ದು, 500 ಕೋಟಿ ರೂ. ಮಂದಿರ ನಿರ್ವಣ, 1000 ಕೋಟಿ ರೂ.ಗಳನ್ನು ಯಾತ್ರಿನಿವಾಸ, ಮಾರ್ಗಗಳು ಸೇರಿ ಇತರ ಅಭಿವೃದ್ಧಿಗಾಗಿ ಬಳಸಲಾಗುತ್ತದೆ ಎಂದು ಹೇಳಿದರು.

    ರೈತ ಚಳವಳಿ ಮುಖವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಚಳವಳಿ ಬಗ್ಗೆ ಶ್ರೀಗಳು ಅನುಮಾನ ವ್ಯಕ್ತಪಡಿಸಿದರು. ತಮ್ಮ ಗಮನಕ್ಕೆ ಬಂದಂತೆ ಅಲ್ಲಿ ನಡೆಯುತ್ತಿರುವುದು ರೈತ ಚಳವಳಿಯಲ್ಲ. ರೈತರ ಚಳವಳಿ ಮುಖವಾಡದಲ್ಲಿ ಅಲ್ಲಿ ಇನ್ನೇನೋ ನಡೆಯುತ್ತಿದೆ. ಹಾಗಾಗಬಾರದು. ಪ್ರಧಾನಿ ಪ್ರತಿನಿತ್ಯ ಅವರನ್ನು ಮಾತುಕತೆಗೆ ಬನ್ನಿ, ಸಮಸ್ಯೆ ಪರಿಹರಿಸೋಣ ಎನ್ನುತ್ತಿದ್ದಾರೆ. ಮಾತುಕತೆಗೆ ಬರದೆ ಜೈಲಿನಲ್ಲಿ ಇರುವ ಅವರನ್ನು ಬಿಡುಗಡೆ ಮಾಡಿ, ಇವರನ್ನು ಬಿಡುಗಡೆ ಮಾಡಿ ಎನ್ನುತ್ತಿದ್ದಾರೆ. ಇದರಿಂದ ಟ್ರ್ಯಾಕ್ ತಪ್ಪಿ ಹೋಗುತ್ತಿದೆ. ಚಳವಳಿ ಕುರಿತು ತಮಗೆ ಪರಿಪೂರ್ಣ ಸಹಮತ ಇಲ್ಲ ಎಂದರು.

    ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts