More

    ರಾಮಮಂದಿರ ನಿರ್ಮಾಣಕ್ಕೆ ನಾಳೆ ಚಾಲನೆ- ಪೂರ್ಣಗೊಳ್ಳಲು 2 ವರ್ಷ ಬೇಕಾದೀತು: ಟ್ರಸ್ಟಿ ಸ್ವಾಮಿ ವಾಸುದೇವಾನಂದ ಸರಸ್ವತಿ

    ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಾಳೆಯಿಂದ ಶುರುವಾಗಲಿದ್ದು, ಪೂರ್ಣಗೊಳಿಸುವುದಕ್ಕೆ ಎರಡು ವರ್ಷ ಬೇಕಾಗಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಟ್ರಸ್ಟಿ ಸ್ವಾಮಿ ವಾಸುದೇವಾನಂದ ಸರಸ್ವತಿ ಅವರು ತಿಳಿಸಿದ್ದಾರೆ.

    ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆರಂಭಿಸುವುದಕ್ಕೆ ಬೇಕಾದ ಸಿದ್ಧತೆಗಳು ನಡೆದಿದೆ. ರುದ್ರ ಅಭಿಷೇಕ ಕಾರ್ಯಕ್ರಮಕ್ಕೆ ತಯಾರಿ ಆಗುತ್ತಿದೆ. ಈಗಾಗಲೇ ನಿರ್ಮಾಣಕ್ಕೆ ಬೇಕಾದ ಎಲ್ಲ ತಯಾರಿಗಳೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: 71 ಲಕ್ಷ ದಾಟಿತು ಕೋವಿಡ್ 19 ಕೇಸ್​: 4 ಲಕ್ಷ ದಾಟಿತು ಮರಣ ಪ್ರಮಾಣ..

    ಇದಕ್ಕೂ ಮುನ್ನ ಸೋಮವಾರ ಕುಬೇರ ತಿಲಾ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯ ಜನ ಪಾಲ್ಗೊಳ್ಳಲಿದ್ದಾರೆ. ಕರೊನಾ ವೈರಸ್ ಸೋಂಕಿನ ಕಾರಣಕ್ಕೆ ಸಂಖ್ಯೆ ಸೀಮಿತಗೊಳಿಸಲಾಗಿದೆ. ಅದೇ ರೀತಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನೂ ಸದ್ಯದ ಮಟ್ಟಿಗೆ ತಡೆಯಲಾಗಿದೆ ಎಂದು ಹೇಳಲಾಗಿತ್ತು.

    ಆದಾಗ್ಯೂ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ಅವರ ವಕ್ತಾರ ಮಹಾಂತ ಕಮಲ್ ನಯನ್ ದಾಸ್ ಈ ಬಗ್ಗೆ ಹೇಳಿಕೆ ನೀಡಿದ್ದು, ಜೂನ್ 10ರಂದು ರುದ್ರ ಅಭಿಷೇಕ ನಡೆಸುವ ಮೂಲಕ ದೇವಸ್ಥಾನದ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

    ಪೆಟ್ರೋಲ್ ಬೆಲೆ 54 ಪೈಸೆ, ಡೀಸೆಲ್​ ಬೆಲೆ 58 ಪೈಸೆ ಪ್ರತಿ ಲೀಟರ್​ಗೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts