More

    ಪೆಟ್ರೋಲ್ ಬೆಲೆ 54 ಪೈಸೆ, ಡೀಸೆಲ್​ ಬೆಲೆ 58 ಪೈಸೆ ಪ್ರತಿ ಲೀಟರ್​ಗೆ ಹೆಚ್ಚಳ

    ನವದೆಹಲಿ: ಲಾಕ್​ಡೌನ್​ನ 82 ದಿನಗಳ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಏರಿಕೆ ಮಾಡಿವೆ. ಇದುವರೆಗೂ ಸ್ಥಿರವಾಗಿದ್ದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಪರಿಷ್ಕರಣೆ ಮತ್ತೆ ಭಾನುವಾರದಿಂದ ಶುರುವಾಗಿದ್ದು, ಮಂಗಳವಾರ ಪೆಟ್ರೋಲ್​ ಬೆಲೆ 54 ಪೈಸೆ ಮತ್ತು ಡೀಸೆಲ್​ ಬೆಲೆ 58 ಪೈಸೆ ಪ್ರತಿ ಲೀಟರ್​ಗೆ ಹೆಚ್ಚಳವಾಗಿದೆ.

    ಇದರಂತೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 72.46 ಪೈಸೆ ಇದ್ದುದು ಮಂಗಳವಾರ 73 ರೂಪಾಯಿ ಆಗಿದೆ. ಇದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 70.59 ರೂಪಾಯಿ ಇದ್ದುದು 71.17 ರೂಪಾಯಿ ಆಗಿದೆ. ಭಾನುವಾರದಿಂದಲೇ ಬೆಲೆ ಪರಿಷ್ಕರಣೆ ಪ್ರಕ್ರಿಯೆ ಮತ್ತೆ ಶುರುವಾಗಿದೆ. ಇದು ಮೂರನೇ ದಿನ ಬೆಲೆ ಪರಿಷ್ಕೃತವಾಗಿ ಏರಿಕೆ ಕಾಣುತ್ತಿದೆ. ಭಾನುವಾರ ಮತ್ತು ಸೋಮವಾರ ಪ್ರತಿ ಲೀಟರ್​ ಮೇಲೆ 60 ಪೈಸೆ ಏರಿಕೆಯಾಗಿತ್ತು. ಇದರೊಂದಿಗೆ ಮೂರು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ ಮೇಲೆ 1.74 ರೂಪಾಯಿ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 1.78 ರೂಪಾಯಿ ಏರಿಕೆಯಾಗಿದೆ.

    ಇದನ್ನೂ ಓದಿ: 71 ಲಕ್ಷ ದಾಟಿತು ಕೋವಿಡ್ 19 ಕೇಸ್​: 4 ಲಕ್ಷ ದಾಟಿತು ಮರಣ ಪ್ರಮಾಣ..

    ಇಂಡಿಯನ್ ಆಯಿಲ್ ಕಾರ್ಪೊರೇಷನ್​, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್​ ಗಳು ನಿತ್ಯವೂ ಮಾಡುತ್ತಿದ್ದ ದರ ಪರಿಷ್ಕರಣೆಯನ್ನು ಮಾರ್ಚ್ 14 ರಂದು ನಿಲ್ಲಿಸಿದ್ದವು. ಇದೇ ಅವಧಿಯಲ್ಲಿ ಸರ್ಕಾರವೂ ಪ್ರತಿ ಲೀಟರ್ ಮೇಲಿನ ಅಬಕಾರಿ ಸುಂಕವನ್ನು 3 ರೂಪಾಯಿ ಏರಿಕೆ ಮಾಡಿತ್ತು.ಈ ಏರಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಇದಾಗಿ ಮೇ 6ರಂದು ಪೆಟ್ರೋಲ್ ಬೆಲೆ ಮೇಲಿನ ತೆರಿಗೆ 10 ರೂಪಾಯಿ ಮತ್ತು ಡೀಸೆಲ್ ದರದ ಮೇಲಿನ ತೆರಿಗೆ 13 ರೂಪಾಯಿ ಹೆಚ್ಚಳವಾಗಿತ್ತು.ಜಾಗತಿಕವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಯಾದ ಸಂದರ್ಭದಲ್ಲಿ ಈ ಕ್ರಮ ಅನುಸರಿಸಲಾಗಿತ್ತು. (ಏಜೆನ್ಸೀಸ್)

    ಭಾರತದಲ್ಲಿ ಸೋಂಕಿನ ಪ್ರಮಾಣ ಬಹಳ ಕಡಿಮೆ ಎಂದ ಡಬ್ಲ್ಯುಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts