More

    ಬಾಡಿಗಾರ್ಡ್ ಆಗಿದ್ದ ಯೂಕ್ರೇನ್ ಸೈನಿಕನಿಗೆ ಹಣ ಸಹಾಯ ಮಾಡಿದ RRR ನಟ ರಾಮ್ ಚರಣ್ ತೇಜ್!

    ಹೈದರಾಬಾದ್: ಕೇವಲ ತಮ್ಮ ಸಿನಿಮಾಗಳಿಗೆ ಅಲ್ಲದೇ ಜನರಿಗೆ ಸಹಾಯ ಮಾಡುವ ವ್ಯಕ್ತಿತ್ವದಿಂದಲೂ ತೆಲುಗಿನ ಖ್ಯಾತ ನಟ ಹಾಗೂ ನಟ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ್ ಹಲವು ಬಾರಿ ಜನಮನ ಗೆದ್ದಿದ್ದಾರೆ. ಇನ್ನು, ನಟ ರಾಮ್​ ಚರಣ್​ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಹೀಗಾಗಿ, ಸದ್ಯ ಒಂದು ಕಾರಣಕ್ಕೆ ನಟ ರಾಮ್​ ಚರಣ್ ತೇಜ್ ವಿಶ್ವಮಟ್ಟದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಹೌದು, ಯೂಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದ ಯೂಕ್ರೇನ್ ಜನ ಬೇಸತ್ತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಯೂಕ್ರೇನ್ ಸೈನಿಕನೊಬ್ಬನಿಗೆ ರಾಮ್ ಚರಣ್ ತೇಜ್ ಅವರು ಹಣದ ನೆರವು ನೀಡಿದ್ದು, ಸದ್ಯ ವಿಶ್ವಾದ್ಯಂತ ಎಲ್ಲರ ಗಮನ ಸೆಳೆದು ಜತೆಗೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಂದಹಾಗೆ, ರಾಮ್ ಚರಣ್ ಮತ್ತು ಅವರು ಸಹಾಯ ಮಾಡಿದ ಸೈನಿಕನಿಗೆ ಒಂದು ಸಂಬಂಧವಿದೆಯಂತೆ.
    ಯೂಕ್ರೇನ್ ಸೈನಿಕ? ದಕ್ಷಿಣ ಭಾರತದ ನಟ ರಾಮ್ ಚರಣ್? ಎಲ್ಲಿಂದ ಎಲ್ಲಿಗೆ ಸಂಬಂಧ ಎಂಬ ಕುತೂಹಲ ಹಲವರಲ್ಲಿ ಮೂಡುವುದು ಸಹಜ. ಆದರೆ, ರಾಮ್ ಚರಣ್ ತೇಜ್ ಅವರು ‘ಆರ್​ಆರ್​ಆರ್​’ ಸಿನಿಮಾ ಶೂಟಿಂಗ್ ಸಲುವಾಗಿ ಈ ಹಿಂದೆ ಯೂಕ್ರೇನ್​ಗೆ ತೆರಳಿದ್ದರು. ಆ ಸಂದರ್ಭದಲ್ಲಿ ರಸ್ಟಿ ಎಂಬ ವ್ಯಕ್ತಿ ರಾಮ್ ಚರಣ್​ ಅವರಿಗೆ ಬಾಡಿಗಾರ್ಡ್ ಆಗಿದ್ದರು ಎನ್ನಲಾಗಿದೆ. ಇನ್ನು, ಅಂದು ಬಾಡಿ ಗಾರ್ಡ್ ಆಗಿ ಕೆಲಸ ಮಾಡಿದ್ದ ರಸ್ಟಿ ಈಗ ಯೂಕ್ರೇನ್​ ಸೈನ್ಯ ಸೇರಿಕೊಂಡಿದ್ದಾರೆ. ಹೌದು, ಇದೀಗ ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಈ ಕಷ್ಟದ ಸಂದರ್ಭದಲ್ಲಿ ರಸ್ಟಿ ಅವರನ್ನು ನಟ ರಾಮ್ ಚರಣ್ ತೇಜ್ ನೆನಪು ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಹಣ ಸಹಾಯವನ್ನೂ ಮಾಡಿದ್ದಾರೆ. ನಟ ರಾಮ್ ಚರಣ್ ತೇಜ್, ನಟ ಜೂ. ಎನ್​ಟಿಆರ್ ಅವರು ಅಭಿನಯಿಸಿರುವ ‘ಆರ್​ಆರ್​ಆರ್​’ ಸಿನಿಮಾ ನಾಳೆ ಅಂದರೆ ಮಾ. 25 ರಂದು ತೆರೆಗಪ್ಪಳಿಸಲಿದೆ.
    ವಿಶ್ವಾದ್ಯಂತ ತೆರೆ ಕಾಣಲಿರುವ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ವಿದೇಶಗಳಲ್ಲಿ ಇರುವ ರಾಮ್ ಚರಣ್ ಅವರ ಕಟ್ಟಾಭಿಮಾನಿಗಳು ‘ಆರ್​ಆರ್​ಆರ್’ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗಿರುವಾಗ, ನಟನ ಈ ಒಳ್ಳೆಯ ಕೆಲಸ ಅವರ ಸಿನಿಮಾ ನೋಡವ ವಿದೇಶಿಗರ ಸಂಖ್ಯೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಬಹುದು. ಇನ್ನು, ನಟನಿಂದ ಸಹಾಯ ಪಡೆದಿರುವ ಯೂಕ್ರೇನ್ ಸೈನಿಕ ರಸ್ಟಿ ಅವರು ಒಂದು ವಿಡಿಯೋ ಮೂಲಕ ನಟನಿಗೆ ಧನ್ಯವಾದ ತಿಳಿಸಿದ್ದು, ಅವರ ವಿಡಿಯೋ ಟ್ವೀಟರ್​ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಈ ವಿಡಿಯೋ ನೋಡಿದ ನಟನ ಅಭಿಮಾನಿಗಳು ಎಲ್ಲರೂ ರಾಮ್ ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

    ಎದೆಹಾಲು ದಾನದ ಬಗ್ಗೆ ಮಾತಾಡಿದ ನಟಿ ರಾಧಿಕಾ ಪಂಡಿತ್ ವಿಡಿಯೋ ವೈರಲ್

    ಪತ್ನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಜಗ್ಗೇಶ್​ಗೆ ಇಂದು 38ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts