More

    ಮೆಡಿಕಲ್​ ಶಾಪ್​ನಲ್ಲಿ ಆಲ್ಕೋಹಾಲ್​ ಸಿಗುತ್ತಾ? ಟ್ರೋಲ್​ ಮಾಡಿದವರಿಗೆ ರಾಕುಲ್​ ಉತ್ತರ

    ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​ ಅವರ ವಿಡಿಯೋವೊಂದು ಹರಿದಾಡಿತ್ತು. ಲಾಕ್​ಡೌನ್​ ಸಡಿಲ ಆಗಿದ್ದೇ ತಡ ರಾಕುಲ್​ ಪ್ರೀತ್​, ವೈನ್​ ಶಾಪ್​ಗೆ ಹೋಗಿ ಆಲ್ಕೋಹಾಲ್​ ಖರೀದಿಸಿದ್ದಾರೆ ಎಂಬೆಲ್ಲ ವದಂತಿಗಳು ಹಬ್ಬಿದ್ದವು. ಇದೀಗ ಹರಿದಾಡಿದ ಆ ವದಂತಿಗಳಿಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ.
    ಹೌದು, ಮೊದ ಮೊದಲು ವೈನ್​ಶಾಪ್​ನಿಂದ ಆಲ್ಕೋಹಾಲ್​ ತರುತ್ತಿದ್ದಾರೆಯೇ ಎಂಬ ಸುದ್ದಿ ಸದ್ದು ಮಾಡುತ್ತಿದ್ದಂತೆ, ಅದಾದ ಬಳಿಕ ಅದು ಮೆಡಿಕಲ್​ ಶಾಪ್​ ಎಂದು ಕೆಲವರು ಕಮೆಂಟ್​ ಮಾಡಿದ್ದರು. ಕೊನೆಗೆ ಆ ವಿಡಿಯೋ ರಾಕುಲ್ ಅವರನ್ನೂ ತಲುಪಿತು. ಅದನ್ನು ನೋಡುತ್ತಲೇ ಖಡಕ್​ ಆಗಿಯೇ ಉತ್ತರಿಸಿದ್ದಾರೆ ರಾಕುಲ್.

    ಇದನ್ನೂ ಓದಿ: ಇವರಲ್ಲಿ ನಿಜವಾದ ಮಾಧುರಿ ದೀಕ್ಷಿತ್​ ಯಾರು ಎಂದು ಹೇಳಬಲ್ಲಿರಾ?

    ‘ಛೇ ನನಗೆ ಗೊತ್ತೇ ಇರಲಿಲ್ಲ, ಮೆಡಿಕಲ್​ ಶಾಪ್​ನಲ್ಲಿ ಆಲ್ಕೋಹಾಲ್​ ಮಾರಾಟ ಮಾಡುತ್ತಾರೆಂದು!’ ಎಂದು ಇಲ್ಲ ಸಲ್ಲದ ಕಮೆಂಟ್​ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ. ರಾಕುಲ್​ ಈ ರೀತಿ ಉತ್ತರ ಕೊಡುತ್ತಿದ್ದಂತೆ, ಆ ವಿಡಿಯೋ ಪೋಸ್ಟ್ ಮಾಡಿದವನಿಗೆ ಒಂದಷ್ಟು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ರಾಕುಲ್​ ಆಲ್ಕೋಹಾಲ್​ ಖರೀದಿಸಲಿ ನಿನಗೇನು ನಷ್ಟ? ನೀನೇನಾದರೂ ಅದರ ಮೊತ್ತವನ್ನು ನೀಡುತ್ತೀಯಾ? ಎಂದು ಪ್ರಶ್ನೆ ಎಸೆದಿದ್ದಾರೆ.

    ಇದನ್ನೂ ಓದಿಸತೀಶ್ ನೀನಾಸಂಗೆ ಏನಾಯ್ತು? ಮುಖ ಮುಚ್ಕೊಂಡು ವಿದೇಶಿಗರ ಜತೆ ಕುಂತವ್ರೇ..‘

    ಸದ್ಯ ತೆಲುಗು, ತಮಿಳಿನ ಹಲವು ಪ್ರಾಜೆಕ್ಟ್​ಗಳಲ್ಲಿ ರಾಕುಲ್​ ತೊಡಗಿಸಿಕೊಂಡಿದ್ದು, ಬಾಲಿವುಡ್​ ಸಿನಿಮಾಗಳೂ ಅವರ ಬತ್ತಳಿಕೆಯಲ್ಲಿವೆ. ಲಾಕ್​ಡೌನ್​ ನಡುವೆ ಕುಟುಂಬದೊಟ್ಟಿಗೆ ಸೇರಿ ಗುರ್​ಗಾಂವ್​ ಸುತ್ತಮುತ್ತಲಿನ ಕೊಳಗೇರಿ ಪ್ರದೇಶಗಳಲ್ಲಿನ ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು ರಾಕುಲ್​. (ಏಜೆನ್ಸೀಸ್​)

    ಒಂದು ಸಣ್ಣ ತಪ್ಪಿಗೆ ಇನ್ನೂ ಅದೆಷ್ಟು ಆಡ್ಕೋತೀರಪ್ಪಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts