More

    ಡ್ರಗ್​ ಕೇಸ್​; ದೆಹಲಿ ಹೈಕೋರ್ಟ್ ಮೊರೆ ಹೋದ ರಾಕುಲ್​ ಪ್ರೀತ್​ ಸಿಂಗ್

    ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಡ್ರಗ್ಸ್​ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನಟಿ ರಿಯಾ ಚಕ್ರವರ್ತಿ ಅವರನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಬಂಧಿಸಿದೆ. ಈ ಸಂದರ್ಭದಲ್ಲಿ ರಿಯಾ ಚಕ್ರವರ್ತಿ, ಬಾಲಿವುಡ್​ನ ಒಂದಿಷ್ಟು ಕಲಾವಿದರ ಹೆಸರನ್ನು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಪಟ್ಟಿಯಲ್ಲಿ ರಾಕುಲ್ ಪ್ರೀತ್​ ಸಿಂಗ್​, ಸಾರಾ ಅಲಿ ಖಾನ್​ ಮತ್ತು ಫ್ಯಾಶನ್ ಡಿಸೈನರ್​ ಸಿಮೋನ್​ ಖಂಬತ್ತಾ ಅವರ ಹೆಸರಿದೆ ಎಂದು ಎನ್​.ಸಿ.ಬಿ ಹೇಳಿತ್ತು. 

    ಇದನ್ನೂ ಓದಿ: ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತ ದಿವಾಕರ್​ ನೀಡಿದ್ರು ವಿಶೇಷ ಉಡುಗೊರೆ…

    ಇದೀಗ ಇದೆಲ್ಲದರಿಂದ ಬೇಸತ್ತು ನಟಿ ರಾಕುಲ್​ ಪ್ರೀತ್​ ಸಿಂಗ್​ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸುಖಾ ಸುಮ್ಮನೆ, ಡ್ರಗ್ ಮಾಫಿಯಾ ಮತ್ತು ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ತಳುಕು ಹಾಕಲಾಗುತ್ತಿದೆ ಎಂದು ಆರೋಪಿಸಿ, ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

    ತನಿಖೆ ನಡೆಸುತ್ತಿರುವ ಎನ್​ಸಿಬಿಗೂ ಮೊದಲೇ ಒಂದಷ್ಟು ಸುದ್ದಿ ವಾಹಿನಿಗಳಲ್ಲಿ ರಿಯಾ ಚಕ್ರವರ್ತಿಯೇ ರಾಕುಲ್​ ಪ್ರೀತ್​ ಹೆಸರು ಹೇಳಿದ್ದಾಳೆ ಎಂದು ಬಿಂಬಿಸಿದ್ದವು. ಅಷ್ಟೇ ಅಲ್ಲ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ರಾಕುಲ್​ ಪಾಲಿದೆ ಎಂದು ಹೇಳಲಾಗುತ್ತಿದೆ. ಆ ರೀತಿಯ ಸುದ್ದಿ ಪ್ರಸಾರ ಮಾಡಿದ ವಾಹಿನಿಗಳ ವಿರುದ್ಧ ಇದೀಗ ರಾಕುಲ್  ಕ್ರಮಕ್ಕೆ ಮುಂದಾಗಿದ್ದು, ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ಅಕ್ಷಯ್​ ಕುಮಾರ್ ‘ಲಕ್ಷ್ಮೀ ಬಾಂಬ್​’ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್​

    ರಾಕುಲ್​ ಪ್ರೀತ್​ ಪರ ವಕೀಲ ಈಗಾಗಲೇ ಆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಕೋರ್ಟ್​ಗೆ ಸಲ್ಲಿಸಿದ್ದು, ಶೀಘ್ರದಲ್ಲಿ ಈ ಸಂಬಂಧ ವಿಚಾರಣೆ ನಡೆಯಲಿದೆ. (ಏಜೆನ್ಸೀಸ್​)

    ಮಾಜಿ ಕ್ರಿಕೆಟಿಗ ಗಂಗೂಲಿ ಬಯೋಪಿಕ್​ನಲ್ಲಿ ಹೃತಿಕ್​?; ಈ ಬಗ್ಗೆ ಸೌರವ್​ ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts