More

    ಆರ್‌ಎಂ ಅಂದರೆ ರಕ್ಷಿತ ಮಂಜುಳ!? ಹೊಸ ಚಿತ್ರದ ವಿಭಿನ್ನ ಟೈಟಲ್ ಬಿಡುಗಡೆ!

    `ಎ’, `ಝಡ್’, `#೧೨೩’, ಸ್ವಸ್ತಿಕ್, `ಎಂಎAಸಿಎಚ್’… ಈಗ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ `ಯೂಐ’. ಹೀಗೆ ಇನಿಶಿಯಲ್‌ಗಳು, ಸಂಖ್ಯೆಗಳು ಹಾಗೂ ಚಿಹ್ನೆಗಳಿರುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಆಗಾಗ ಬರುತ್ತಿರುತ್ತವೆ. ಈ ಚಿತ್ರಗಳ ವಿಶೇಷತೆ ಅಂದರೆ ಟೈಟಲ್ ಘೋಷಣೆಯಾಗುವ ದಿನದಿಂದಲೇ ಕುತೂಹಲ ಮೂಡಿಸುತ್ತಿರುತ್ತವೆ. ಈಗ ಇದೇ ಸಾಲಿಗೆ ಹೊಸ ಸೇರ್ಪಡೆ `ಆರ್‌ಎಂ’. ರಕ್ಷಿತ ಮಂಜುಳ, ದಿ ರಿಯಲ್ ಸ್ಟೋರಿ ಚಿತ್ರದ ಟ್ಯಾಗ್‌ಲೈನ್!

    ಇದನ್ನೂ ಓದಿ :ಕಿಚ್ಚನ ಕಾಫಿ-ಬನ್ಸ್; ಹೋಟೆಲ್ ಉದ್ಯಮದತ್ತ ಸುದೀಪ್ ಚಿತ್ತ..

    ಇಬ್ಬರು ಯುವತಿಯರು ಹಾಗೂ ಯುವಕನೊಬ್ಬನ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡು ನಿರ್ದೇಶಕ ದೇವು ಒಂದು ವಿಭಿನ್ನ ಪ್ರೇಮಕಥೆಯನ್ನು ಹೇಳಲು ಮುಂದಾಗಿದ್ದಾರೆ. ಪ್ರೇಮಕಥೆಯ ಜತೆಗೆ ಥ್ರಿಲ್ಲರ್ ಕಂಟೆAಟ್ ಇರುವ ಚಿತ್ರ ಇದಾಗಿದ್ದು, ದೇವು ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಓವಿಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಭರತ್ ಕುಮಾರ್ ಹಾಗೂ ಚಂದ್ರಶೇಖರ್ ಹೂಗಾರ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಇದನ್ನೂ ಓದಿ :ಹಾರರ್ ಥ್ರಿಲ್ಲರ್ `ಕೆಂಪುಸೀರೆ’. ಅಘೋರಿ ಪಾತ್ರದಲ್ಲಿ ಕೆಜಿಎಫ್ ವಾನರಂ, ಅಯ್ಯಪ್ಪ ಶರ್ಮಾ!

    ಟೈಟಲ್ ರಿಲೀಸ್ ಮಾಡಿದ ಬಳಿಕ ಮಾತನಾಡಿದ ಅವರು, `ಚಿತ್ರದ ಟೈಟಲ್ ಯಾವುದೇ ಇರಲಿ, ಕಥೆಯ ಮೇಲೆ ಹಿಡಿತವಿದ್ದರೆ ಆ ಸಿನಿಮಾವನ್ನು ಗೆಲ್ಲಿಸಬಹುದು. ನಿರ್ದೇಶಕರು ಇಬ್ಬರು ಹೆಣ್ಣುಮಕ್ಕಳ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಂಚಾಲಕ ರಾಜು ಖಾನಪ್ಪನವರ್, ಸುಂದರೇಶ್ ನರಗಲ್ ಕೂಡ ಉಪಸ್ಥಿತರಿದ್ದರು. ಆಗಸ್ಟ್ ಕೊನೆಯಲ್ಲಿ ಈ ಚಿತ್ರದ ಮುಹೂರ್ತವನ್ನು ಗದುಗಿನ ಶ್ರೀ ಪಂಡಿತ್ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ನಡೆಸಲು ಚಿತ್ರತಂಡ ಆಲೋಚನೆ ಮಾಡಿಕೊಂಡಿದೆ. ಬಳಿಕ ಬೆಂಗಳೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಗದಗ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. `ಆರ್‌ಎಂ’ (ರಕ್ಷಿತಾ, ಮಂಜುಳ) ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಸದ್ಯ ಚಿತ್ರದ ತಾಂತ್ರಿಕವರ್ಗ ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

    ಕನ್ನಡ ಹಬ್ಬದ ಜತೆ ಅಪ್ಪು ಹಬ್ಬ; ಪುನೀತ್ ಸರ್ ನೆನಪು ಖುಷಿ ಮೂಡಿಸಬೇಕು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts