More

    ರಾಜ್ಯೋತ್ಸವಕ್ಕೆ ತಾಲೂಕು ಆಡಳಿತ ಸಿದ್ಧತೆ

    ಮಸ್ಕಿ: ನ.1ರಂದು ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಪಟ್ಟಣದ ಪ್ರಮುಖ ರಸ್ತೆ ಬದಿಗಳಲ್ಲಿ ಹಾಗೂ ವಿವಿಧ ವೃತ್ತಗಳಲ್ಲಿ ಲೈಟಿಂಗ್ ಅಳವಡಿಸುವ ಕಾರ್ಯದಲ್ಲಿ ಪುರಸಭೆಯ ಸಿಬ್ಬಂದಿ ನಿರತರಾಗಿದ್ದಾರೆ.

    ಇದನ್ನೂ ಓದಿ: ಚಿಂಚೋಳಿ: ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ

    ಈಗಾಗಲೇ ತಹಸಿಲ್ದಾರ್ ಅರಮನೆ ಸುಧಾ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದೆ. ವಿವಿಧ ಇಲಾಖೆಯವರಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ. ಸ್ಥಳೀಯ ಪುರಸಭೆಯವರಿಗೆ ಸ್ವಚ್ಛತೆ ಲೈಟಿಂಗ್, ಭುವನೇಶ್ವರಿ ಭಾವ ಚಿತ್ರದ ಮೆರವಣಿಗೆ ವಾಹನದ ವ್ಯವಸ್ಥೆ ಸೇರಿ ಇತರೆ ಇಲಾಖೆಯ ಮುಖ್ಯಸ್ಥರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಧ್ವಜಾರೋಹಣ ಹಾಗೂ ಮೆರೆವಣಿಗೆ ಆಗಮಿಸುವವರಿಗೆ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

    ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಸಾವಿರಾರು ಕನ್ನಡ ಅಭಿಮಾನಿಗಳು ಪಾಲ್ಗೋಳ್ಳಲಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸ್ಥಳೀಯ ಪುರಸಭೆ ಹೆಚ್ಚಿನ ಆಸಕ್ತಿವಹಿಸಿಕೊಂಡು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.

    ಮಸ್ಕಿ ತಾಲೂಕು ಆಡಳಿತದಿಂದ ಈ ಬಾರಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಆದ್ದರಿಂದ ಎಲ್ಲ ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳೋಣ.
    ಅಶೋಕ ಮುರಾರಿ ಕರವೇ ತಾಲೂಕು ಅಧ್ಯಕ್ಷ ಮಸ್ಕಿ.

    ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು, ಲೈಟಿಂಗ್ ಹಾಗೂ ಕನ್ನಡ ಬಾವುಟಗಳನ್ನು ಪ್ರಮುಖ ಸ್ಥಳಗಳಲ್ಲಿ ಪುರಸಭೆಯಿಂದ ಕಟ್ಟಲಾಗಿದೆ. ಸಾರ್ವಜನಿಕರ ಸಹಕಾರದಂದ ಕನ್ನಡ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುವುದು
    ನರಸರಡ್ಡಿ. ಪುರಸಭೆ ಮುಖ್ಯಾಧಿಕಾರಿ ಮಸ್ಕಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts