More

    ರಾಜ್ಯಸಭೆ ಹಾಗೂ ರಾಜ್ಯಪಾಲರ ಹುದ್ದೆಗೆ 100 ಕೋಟಿ ರೂ. ಸುಳ್ಳು ಭರವಸೆ ನೀಡುತ್ತಿದ್ದ ಜಾಲ ಬೇಧಿಸಿದ ಸಿಬಿಐ: ನಾಲ್ವರ ಬಂಧನ

    ನವದೆಹಲಿ: ರಾಜ್ಯಸಭೆ ಸ್ಥಾನ ಹಾಗೂ ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಪಡೆಯಲು ಮುಂದಾಗಿದ್ದ ಜಾಲವನ್ನು ಬೇಧಿಸಿರುವ ಸಿಬಿಐ ಹಣ ಪಡೆಯುವ ಮುನ್ನವೇ ಆರೋಪಿಗಳನ್ನು ಬಂಧಿಸಿದೆ.

    ದೊಡ್ಡ ದೊಡ್ಡ ಹುದ್ದೆ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ 100ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಸಿಬಿಐ ಬಹು ರಾಜ್ಯಗಳ ವಂಚಕರ ಜಾಲವನ್ನು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಲಾಗಿದೆ.ಇದರಲ್ಲಿ ಓರ್ವ ಕರ್ನಾಟಕದ ಮೂಲದವನಾಗಿದ್ದಾನೆ.

    ಕಾರ್ಯಾಚರಣೆ ವೇಳೆ ಆರೋಪಿಯೊಬ್ಬ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆತನ ವಿರುದ್ಧ ಪ್ರತ್ಯೇಕ ದೂರು ದಾಖಲಿಸಲಾಗಿದೆ.

    ಸದ್ಯ ಈ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿರುವ ಮಹಾರಾಷ್ಟ್ರದ ಲಾತೂರ್​ನ ಕಮಲಾಕರ್ ಪ್ರೇಮ್​ಕುಮಾರ್​ ಬಂಡಗರ್​, ಕರ್ನಾಟಕದ ಬೆಳಗಾವಿಯ ರವೀಂದ್ರ ವಿಠಲ್​ ನಾಯಕ್ ಮತ್ತು ದೆಹಲಿಯ ಮಹೇಂದ್ರ ಪಾಲ್​ ಅರೋರಾ, ಅಭಿಷೇಕ್​ ಬೂರಾ ಮತ್ತು ಮೊಹಮ್ಮದ್​​ ಐಜಾಜ್​ ಖಾನ್​ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಂತಿಷ್ಟು ಹಣ ನೀಡಿದರೆ ರಾಜ್ಯಸಭೆಯ ಸ್ಥಾನ, ರಾಜ್ಯಪಾಲರ ಹುದ್ದೆ ಹಾಗೂ ಸರ್ಕಾರದ ಉನ್ನತ ಹುದ್ದೆಗಳನ್ನು ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಹಣ ಮಾಡುವ ಉದ್ದೇಶವನ್ನು ಈ ಆರೋಪಿಗಳು ಹೊಂದಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಗ್ರಾಮಸ್ಥರಿಗೆ ವಂಚಿಸಿ ಪೋಸ್ಟ್​ ಮಾಸ್ಟರ್ ಪರಾರಿ! ಅಂಚೆ ಕಚೇರಿಗೆಂದು ಹಣ ಕಟ್ಟಿದ್ದವರು ಈಗ ಬೀದಿ ಪಾಲು

    ರಾಜ್ಯದಲ್ಲಿ ಜು.27ರಿಂದ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts