More

    ‘ಸಂಘಿ’ ಶಬ್ದ ಕೆಟ್ಟದ್ದು ಎಂದು ಐಶ್ವರ್ಯ ಹೇಳಿಲ್ಲ: ಸೂಪರ್ ಸ್ಟಾರ್​ ರಜನಿಕಾಂತ್!

    ಚೆನ್ನೈ: ನನ್ನ ಮಗಳು ಸಂಘಿ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ ಎಂದು ಸೂಪರ್​ ಸ್ಟಾರ್ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ:ಕೆಲಸ ಹುಡುಕುವವರಿಗೆ ಗಾಳ; ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ಪಡೆದ ಕಾಂಗ್ರೆಸ್​ ನಾಯಕಿ

    ರಜನಿಕಾಂತ್ ಅವರು ತಮ್ಮ ಮುಂಬರುವ ಚಿತ್ರ ʻಲಾಲ್ ಸಲಾಮ್‌ʼ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಗಳು ಐಶ್ವರ್ಯಾ ರಜನಿಕಾಂತ್ ಅವರ ಇತ್ತೀಚಿನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    'ಸಂಘಿ' ಶಬ್ದ ಕೆಟ್ಟದ್ದು ಎಂದು ಐಶ್ವರ್ಯ ಹೇಳಿಲ್ಲ: ಸೂಪರ್ ಸ್ಟಾರ್​ ರಜನಿಕಾಂತ್!

    ಸೋಮವಾರ, ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್ ಅವರು, ಆಡಿಯೋ ಲಾಂಚ್‌ ವೇಳೆ ಮಾತನಾಡಿದ ಐಶ್ವರ್ಯಾ ಅವರ ಹೇಳಿಕೆಯನ್ನು ರಜಿನಿಕಾಂತ್‌ ಸಮರ್ಥಿಸಿಕೊಂಡಿದ್ದಾರೆ. ‘ನನ್ನ ಮಗಳು ʻಸಂಘಿʼ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ ಎಂದಿದ್ದಾರೆ.

    ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಐಶ್ವರ್ಯ, ನಾನು ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಿಂದ ದೂರ ಇರುತ್ತೇನೆ. ಆದರೆ ನನ್ನ ತಂಡ ಹೊರಗಡೆ ಏನಾಗುತ್ತಿದೆ ಎಂದು ಅಪ್‌ಡೇಟ್‌ ಮಾಡುತ್ತಲೇ ಇರುತ್ತಾರೆ. ಕೆಲವು ಪೋಸ್ಟ್‌ಗಳನ್ನು ತೋರಿಸುತ್ತಲೇ ಇರುತ್ತಾರೆ. ಅವುಗಳನ್ನು ನೋಡಿ ನನಗೆ ಕೋಪ ಬರುತ್ತಿತ್ತು. ನಾವೂ ಮನುಷ್ಯರು. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ನನ್ನ ತಂದೆ ʻಸಂಘಿʼ ಎಂದು ಕರೆದಿದ್ದಾರೆ.

    'ಸಂಘಿ' ಶಬ್ದ ಕೆಟ್ಟದ್ದು ಎಂದು ಐಶ್ವರ್ಯ ಹೇಳಿಲ್ಲ: ಸೂಪರ್ ಸ್ಟಾರ್​ ರಜನಿಕಾಂತ್!
    ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ, ನಂತರ ನಾನು ʻಸಂಘಿʼ ಪದದ ಅರ್ಥ ತಿಳಿದಾಗ, ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವ ಜನರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ʻಸಂಘಿʼ ಆಗಿದ್ದರೆ ಲಾಲ್ ಸಲಾಂ ಅಂಥ ಸಿನಿಮಾ ಮಾಡುತ್ತಿರಲಿಲ್ಲ’ ಎಂದಿದ್ದರು. ಮಗಳ ಹೇಳಿಕೆ ಕೇಳಿ ರಜನಿಕಾಂತ್ ಅವರು ಕಣ್ಣೀರು ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

    ಲಾಲ್ ಸಲಾಮ್ ಬಗ್ಗೆ
    ಲಾಲ್ ಸಲಾಮ್ ಚಿತ್ರದಲ್ಲಿ ರಜನಿಕಾಂತ್ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅಲ್ಲಿ ಅವರ ಪಾತ್ರಕ್ಕೆ ಮೊಯ್ದೀನ್ ಭಾಯ್ ಎಂದು ಹೆಸರಿಡಲಾಗಿದೆ. ಲಾಲ್ ಸಲಾಮ್ ಅನ್ನು ಕ್ರಿಕೆಟ್ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಾಲ್ ಸಲಾಮ್‌ನೊಂದಿಗೆ ಐಶ್ವರ್ಯಾ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಐಶ್ವರ್ಯಾ ಅವರ ಕೊನೆಯ ನಿರ್ದೇಶನದ ಪ್ರಾಜೆಕ್ಟ್ ತಮಿಳು ಆಕ್ಷನ್-ಥ್ರಿಲ್ಲರ್ ವೈ ರಾಜ ವೈ,ಇದರಲ್ಲಿ ಅವರ ಮಾಜಿ ಪತಿ ಧನುಷ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
    ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ, ವಿಷ್ಣು ಮತ್ತು ವಿಕ್ರಾಂತ್ ಅವರ ಮೊದಲ ಸಹಯೋಗದಲ್ಲಿ ಎಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts