More

    30 ದಿನದಲ್ಲೇ ಪೌತಿ ಖಾತೆ ಬದಲು

    ಎನ್.ಆರ್.ಪುರ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಗೋಮಾಳ ಜಾಗವನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ರ್ಚಚಿಸುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಂದಾಯ ಇಲಾಖೆಯ ಪೌತಿ ಖಾತೆ ಆಂದೋಲನ, ಪಹಣಿ ತಿದ್ದುಪಡಿ, ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೆಲವು ಕುಟುಂಬಗಳಲ್ಲಿ ಎರಡು ತಲೆಮಾರು ಕಳೆದರೂ ಖಾತೆ ಬದಲಾಗಿಲ್ಲ. ಅಂಥವರು ಕಂದಾಯ ಇಲಾಖೆ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕು. ರೈತ ಮೃತಪಟ್ಟಾಗ ಅವರ ಜಮೀನೀನ ಖಾತೆ ಮಕ್ಕಳ ಹೆಸರಿಗೆ ಬೇಗ ಬದಲಾಗುತ್ತಿರಲಿಲ್ಲ. ಪೌತಿ ಖಾತೆ ಆಂದೋಲನದಲ್ಲಿ ಅರ್ಜಿ ನೀಡಿದ 30 ದಿನದಲ್ಲೇ ವಾರಸುದಾರರಿಗೆ ಖಾತೆ ಬದಲಾಗುತ್ತದೆ. ಫಾಮ್ರ್ 94ಸಿ ಮೂಲಕ ಹಕ್ಕುಪತ್ರ ಪಡೆದವರಿಗೆ ಕಂದಾಯ ಇಲಾಖೆ ಬೇಗ ಪಹಣಿ ಮಾಡಿಸಿಕೊಡಬೇಕು ಎಂದು ಸೂಚಿಸಿದರು.

    ತಹಸೀಲ್ದಾರ್ ರೇಣುಕಮ್ಮ ಮಾತನಾಡಿ, ಪೌತಿ ಖಾತೆ ಮಾಡಿಸಲು ಅರ್ಜಿ ನೀಡಿದರೆ 30 ದಿನದೊಳಗೆ ಪೌತಿ ರೈತರನ್ನು ಬಿಟ್ಟು ವಂಶವೃಕ್ಷದಂತೆ ಹೆಣ್ಣು ಮಕ್ಕಳನ್ನು ಸೇರಿಸಿ ಜಂಟಿ ಖಾತೆ ಮಾಡಿ ಪಹಣಿ ನೀಡಲಾಗುವುದು. ಆದರೆ 30 ದಿನದೊಳಗೆ ಯಾರಾದರೂ ತಕರಾರು ಹಾಕಿದರೆ ತಹಸೀಲ್ದಾರ್ ಕೋರ್ಟಿನಲ್ಲಿ ತೀರ್ವನವಾದ ನಂತರವೇ ಪಹಣಿ ನೀಡಲಾಗುವುದು. ಕೇಂದ್ರ ಸರ್ಕಾರದ ಭೂ ನಾಮಾಂಕ ಯೋಜನೆಯಡಿ ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎನ್.ಆರ್.ಪುರ ತಾಲೂಕು ಕೂಡ ಸೇರಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts