More

    ಮೈಸೂರಿನಲ್ಲಿ ಚಿತ್ರನಗರಿಯ ಕೆಲಸ ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ

    ಬೆಂಗಳೂರು: ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಬೇಕೆಂದು ಚಿತ್ರರಂಗದ ಹಲವು ವಷರ್ಗಳ ಕೂಗು. ಈ ಮನವಿಯನ್ನು ಪುರಸ್ಕರಿಸಿ, ಮೈಸೂರಿನಲ್ಲಿ ಚಿತ್ರನಗರಿ ಮಾಡುವುದಾಗಿ ಸರ್ಕಾರವೇನೋ ಕೆಲವು ವರ್ಷಗಳ ಹಿಂದೆ ಅಧಿಕೃತವಾಗಿ ಘೋಷಿಸಿದೆ. ಆದರೆ, ಇದುವರೆಗೂ ಚಿತ್ರನಗರಿಯ ಕೆಲಸಗಳು ಶುರುವಾಗಿಲ್ಲ. ಈ ನಿಟ್ಟಿನಲ್ಲಿ ಕೆಲಸಗಳನ್ನು ಬೇಗ ಶುರು ಮಾಡಬೇಕು ಎಂದು ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ನೇತೃತ್ವದ ನಿಯೋಗವು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಇದನ್ನೂ ಓದಿ: ಕಬ್ಜ ಚಿತ್ರದಲ್ಲಿ ತಾನ್ಯಾ; ಉಪೇಂದ್ರ ಜತೆ ವಿಶೇಷ ಹಾಡಿನಲ್ಲಿ ಮಿಂಚಲಿರುವ ನಟಿ

    ಮೈಸೂರಿನಲ್ಲಿ ಹಲವು ಚಿತ್ರಗಳ ಚಿತ್ರೀಕರಣ ಮಾಡಲಾಗಿದೆ. ರಾಜ ಮಹರಾಜರ ಕಾಲದಿಂದಲೂ ಕಲೆ, ಸಂಗೀತ, ಸಾಹಿತ್ಯಸ್ಥ ವಿಶೇಷವಾದ ಪ್ರೋತ್ಸಾಹ ಕೂಟ್ಟು, ಕಲೆ ಮೈಸೂರಿನಲ್ಲಿ ತಾಂಡವವಾಡುತ್ತಿದೆ. ಮೈಸೂರಿನ ಅರಮನೆಗಳು, ನದಿತೀರ, ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳು, ಚಲನಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿದ್ದ ಪ್ರದೇಶಗಳಾಗಿವೆ. ಕೇವಲ ಮೈಸೂರಿನ 15 ಕಿಲೋಮೀಟರ್ ವೃತ್ತದಲ್ಲಿ ಸುಮಾರು 250 ತಾಣಗಳು ಚಿತ್ರೀಕರಣಕ್ಕ ಬಹಳ ಉಪಯೋಗವಾಗಿವೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳು ಇಲ್ಲಿ ನಿರ್ಮಾಣವಾಗಿ, ವಿಶ್ವದಲ್ಲೇ ಅತ್ಯುತ್ತಮ ಚಿತ್ರೀಕರಣ ತಾಣ ಎಂದು ಸಾಬೀತಾಗಿದೆ. ಅಲ್ಲಿ ಚಿತ್ರನಗರಿ ಪ್ರಾರಂಭವಾದರೆ, ಆ ಪ್ರದೇಶದ ಹಲವಾರು ಜನರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಚಿತ್ರನಗರಿಯ ಕೆಲಸವನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಮತ್ತು ಈ ನಿಟ್ಟಿನಲ್ಲಿ ಚಿತ್ರರಂಗದ ವತಿಯಿಂದ ಏನೇ ಸಹಕಾರ ಬೇಕಾದರೂ ಕೊಡಲು ಸಿದ್ಧರಿರುವುದಾಗಿ ಈ ಮನವಿಯಲ್ಲಿ ಹೇಳಲಾಗಿದೆ.

    ಕೆಲವು ದಿನಗಳ ಹಿಂದೆ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಕೃಷ್ಣೇಗೌಡ ಅವರನ್ನು ಒಳಗೊಂಡ ಸಮಿತಿ ಸದಸ್ಯರು ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹಲವು ವಿಷಯ ಚರ್ಚಿಸಿದ್ದರು. ಆಗ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣದ ವಿಷಯ ಕೂಡ ಪ್ರಸ್ತಾಪವಾಗಿತ್ತು. ಮುಖ್ಯಮಂತ್ರಿಗಳು ಈ ಕುರಿತು ವರದಿ ಸಿದ್ದ ಮಾಡಿಕೊಡುವಂತೆ ಹೇಳಿದ್ದರು. ಈ ಸಂಬಂಧ ಇಂದು ಬಾಬು ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.

    ಇದನ್ನೂ ಓದಿ: ಸ್ನೇಹಿತರೋ? ಪ್ರೇಮಿಗಳೋ? ಮಾಲ್ಡೀವ್ಸ್​ನಲ್ಲಿ ಪ್ರಭಾಸ್​-ಕೃತಿ ನಿಶ್ಚಿತಾರ್ಥ?

    ಮನವಿ ಪತ್ರಕ್ಕೆ ಶಿವರಾಜಕುಮಾರ್, ರಾಕ್​ಲೈನ್ ವೆಂಕಟೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ ಸೇರಿದಂತೆ ಇಪ್ತತ್ತಕ್ಕೂ ಅಧಿಕ ಗಣ್ಯರು ಸಹಿ ಮಾಡಿದ್ದಾರೆ. ಬಾಲಿವುಡ್​​ನ ಖ್ಯಾತ ನಟರಾದ ಧರ್ಮೇಂದ್ರ, ಹೇಮಮಾಲಿನಿ ಅವರು ಸಹ ಈ ಕುರಿತು ಸಹಿ‌ ಮಾಡಿ, ಲೆಟರ್ ಒಂದನ್ನು ಕಳುಹಿಸಿದ್ದಾರೆ‌. ಧರ್ಮೇಂದ್ರ ಅವರಿಗೂ ಮೈಸೂರು ಅಚ್ಚುಮೆಚ್ಚು. ಏಕೆಂದರೆ, ಅವರ ವೃತ್ತಿಜೀವನ ಆರಂಭವಾಗಿದ್ದೇ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

    ಗಂಡ ಅರೆಸ್ಟ್​ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts