More

    ಸ್ವಾರ್ಥಿ ರಾಜಮೌಳಿಗೆ ರಿಲೀಸ್​ ಹೊತ್ತಲ್ಲಿ ಕರ್ನಾಟಕ ಬೇಕು; ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತರಾಟೆ!

    ಬೆಂಗಳೂರು: ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಟಾಲಿವುಡ್​ನ ಖ್ಯಾತ ನಿರ್ದೇಶಕ ರಾಜಮೌಳಿ ಬಗ್ಗೆ ಕಿಡಿಕಾರಿದ್ದಾರೆ. ಅವರೊಬ್ಬ ಸ್ವಾರ್ಥಿ ಎಂದು ತಮ್ಮೊಳಗಿನ ಸಿಟ್ಟನ್ನು ಫೇಸ್​ಬುಕ್​ ಮೂಲಕ ಹೊರಹಾಕಿದ್ದಾರೆ.
    ಹೌದು, ರಾಜಮೌಳಿ ಬಗ್ಗೆ ಹೀಗೆ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಕಾರಣವಿದೆ. ಕಳೆದ ಮೂರು ತಿಂಗಳಿನಿಂದ ಕರೊನಾ ಹಿನ್ನೆಲೆಯಲ್ಲಿ ಸಿನಿಮಾರಂಗ ಸ್ಥಗಿತವಾಗಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ಮಂದಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆದರೆ, ಕರ್ನಾಟಕದಿಂದ ತಮ್ಮ ಸಿನಿಮಾಗಳಿಂದ ಆದಾಯ ನಿರೀಕ್ಷಿಸುವ ರಾಜಮೌಳಿ, ಕರೊನಾ ವೇಳೆ ಕರ್ನಾಟಕದ ಜನರಿಗೆ ಏನೂ ಸಹಾಯ ಮಾಡಲಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ ಅವಧಿಯೇ ಚಿರು ಸಾವಿಗೆ ಮುಳುವಾಯ್ತಾ?; ಅದಕ್ಕೆ ಇಲ್ಲಿದೆ ಕಾರಣ …

    ‘ತಮ್ಮ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆಗುವ ವೇಳೆ ಮಾತ್ರ, ನಾನು ಕರ್ನಾಟಕದವನು, ನನ್ನದು ರಾಯಚೂರು, ನಾನು ಕನ್ನಡಿಗ ಎಂದೆಲ್ಲ ಪೋಸ್​ ಕೊಡುವ ರಾಜಮೌಳಿ, ಒಬ್ಬ ಸ್ವಾರ್ಥಿ. ಕನ್ನಡದ ಡಾ. ರಾಜ್​ಕುಮಾರ್ ಅವರ ಎಷ್ಟೋ ಸಿನಿಮಾಗಳ ಕಥೆಗಳನ್ನು, ಕನ್ನಡದ ಕಾದಂಬರಿಗಳ ಕಥೆಗಳನ್ನು ಕದ್ದು, ತನ್ನದೇ ಕಥೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಹಾಲು- ತುಪ್ಪ ಕಾರ್ಯದಲ್ಲಿ ನಿಲ್ಲದ ಮೇಘನಾ ಕಣ್ಣೀರು..

    ಈ ಬಗ್ಗೆ ಮಾತನಾಡುವ ರಾಜೇಂದ್ರ ಸಿಂಗ್​ ಬಾಬು, ‘ರಾಜಮೌಳಿ ವಿರುದ್ಧ ಹೇಳಿಕೆ ನೀಡಿಲ್ಲ. ಬದಲಿಗೆ ಸತ್ಯಾಂಶ ಏನಿದೆ ಎಂಬುದನ್ನು ಹೇಳಿದ್ದೇನೆ. ಅಷ್ಟಕ್ಕೂ ನಾನು ಹಾಗೇ ಹೇಳಿಕೊಂಡಿದ್ದಕ್ಕೂ ನನ್ನ ಬಳಿ ಉತ್ತರ ಇದೆ. ಸಿನಿಮಾ ಬಿಡುಗಡೆ ಹೊತ್ತಲ್ಲಿ ಮಾತ್ರ ಕನ್ನಡ ಮಾತನಾಡುತ್ತಾರೆ. ನೆರೆಹಾವಳಿ ಬಂದಾಗ ಯಾರಿಗೂ ಸಹಾಯ ಮಾಡಲಿಲ್ಲ. ಕರೊನಾ ಬಂದಾಗ ಯಾರಿಗೂ ಒಂದು ಮೂಟೆ ಅಕ್ಕಿ ಕೊಡಲಿಲ್ಲ. ಈಗ ದೊಡ್ಡದಾಗಿ, ನಾವು ಕನ್ನಡದವರು ಎಂದು ಬೋರ್ಡ್​ ಹಾಕಿಕೊಳ್ಳುತ್ತಾರೆ. ನಮ್ಮಲ್ಲಿಯ ಸಿನಿಮಾಳನ್ನೇ ಕದ್ದು, ಇಲ್ಲಿನ ಕಾದಂಬರಿಗಳನ್ನೇ ಎರವಲು ಪಡೆದು ಸಿನಿಮಾ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಬಾಬು.

    ಕುಜ ದೋಷದ ಬಗ್ಗೆ ಗೊತ್ತಿದ್ದರೂ, ಬೇಕಂತಲೇ ನಿರ್ಲಕ್ಷ್ಯ ಮಾಡಿದ್ರಾ ಚಿರು!?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts