More

    ಚಪ್ಪಲಿಯಲ್ಲಿ ಬ್ಲ್ಯೂಟೂತ್ ಅಳವಡಿಸಿ ಪರೀಕ್ಷೆ ಬರೆಯುತ್ತಿದ್ದ ಐವರು ಶಿಕ್ಷಕರು ಅರೆಸ್ಟ್​: ಬೆಲೆ ಕೇಳಿದ್ರೆ ಬೆರಗಾಗ್ತೀರಾ!​

    ಜೈಪುರ: ಬ್ಲ್ಯೂಟೂತ್​ ಸಾಧನ ಅಳವಡಿಸಿದ್ದ ಹೈಟೆಕ್ ಚಪ್ಪಲಿ ಧರಿಸಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಾಪಿ ಚಿಟ್ ನಡೆಸುವ ಮೂಲಕ ಪರೀಕ್ಷಾ ವಂಚನೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರಿಂದ ವಶಕ್ಕೆ ಪಡೆಯಲಾದ ಚಪ್ಪಲಿ ಮೌಲ್ಯ ಬರೋಬ್ಬರಿ 6 ಲಕ್ಷ ರೂಪಾಯಿ. ಇತ್ತೀಚೆಗಷ್ಟೇ ಗ್ಯಾಂಗ್​ ಒಂದು ತಲಾ 6 ಲಕ್ಷ ರೂ.ನಂತೆ 25 ಮಂದಿಗೆ ಚಪ್ಪಲಿಗಳನ್ನು ಮಾರಾಟ ಮಾಡಿತ್ತು. ಬ್ಲ್ಯೂಟೂತ್​ ಇರುವ ಚಪ್ಪಲಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರ ಹುಬ್ಬೇರಿಸಿದೆ.

    ಶಿಕ್ಷಕರ ಅರ್ಹತಾ ಪರೀಕ್ಷೆ ಎದುರಿಸಿದ್ದ ಕೆಲ ಅಭ್ಯರ್ಥಿಗಳ ಚಪ್ಪಲಿ ಮತ್ತು ಕಿವಿಯಲ್ಲಿ ಬ್ಲ್ಯೂಟೂತ್​ ಸಾಧನ ಇರುವುದು ಪತ್ತೆಯಾದ ಬಳಿಕ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಜ್ಮೇರ್​ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

    ಬಂಧಿತ ಐವರಲ್ಲಿ ಓರ್ವ ಮಹಿಳೆಯು ಸೇರಿದ್ದಾರೆ. ಮಾರಾಟ ಮಾಡುತ್ತಿದ್ದವರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ನೂರಕ್ಕೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

    ಕೇಶ ವಿನ್ಯಾಸ ಮತ್ತು ಗಡ್ಡ ಶೇವಿಂಗ್​ಗೆ ಬ್ರೇಕ್​ ಹಾಕಿದ ತಾಲಿಬಾನಿಗಳು: ಸಲೂನ್​ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ

    ದುಲ್ಖರ್ ಚಿತ್ರದಲ್ಲಿ ರಶ್ಮಿಕಾ ಅತಿಥಿ; ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts