More

  IPL 2024: ಫಲಿಸದ ಪೂರನ್​ ಅಬ್ಬರ! ರಾಜಸ್ಥಾನಕ್ಕೆ ಭರ್ಜರಿ ಜಯ

  ಜೈಪುರ: ಇಂಡಿಯನ್​ ಪ್ರೀಮಿಯರ್​ ಲೀಗ್ 2024ರ ನಾಲ್ಕನೇ ಪಂದ್ಯದಲ್ಲಿ ಮುಖಾಮುಖಿಯಾದ ಕನ್ನಡಿಗ ಕೆ.ಎಲ್​. ರಾಹುಲ್​ ನಾಯಕತ್ವದ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಸಂಜು ಸ್ಯಾಮ್​ಸನ್​ ಕ್ಯಾಪ್ಟನ್ಸಿಯ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಆರ್​ಆರ್​ ಭರ್ಜರಿ ಗೆಲುವು ದಾಖಲಿಸಿತು.

  ಇದನ್ನೂ ಓದಿ: ಆದರ್ಶ ಸಮಾಜದ ಮೂಲ ಪ್ರೇರಣಾ ಶಕ್ತಿ ಮಹಿಳೆ, ಮಹಿಳಾ ಸ್ವಾವಲಬನೆಯ ಸವಾಲುಗಳು- ಸಂವೇದನೆ ಕಾರ್ಯಾಗಾರ ಉದ್ಘಾಟಿಸಿ ವಸಂತ ಕಾರಂದೂರು

  ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್​, 20 ಓವರ್​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 193 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಬೆನ್ನಟ್ಟಿದ ಲಕ್ನೋ ಪಡೆ ಆರಂಭದಲ್ಲೇ ಟ್ರೆಂಟ್ ಬೋಲ್ಟ್​​ ಬೋಲಿಂಗ್ ದಾಳಿಗೆ ಕ್ವಿಂಟನ್​ ಡಿಕಾಕ್ ಮತ್ತು ದೇವದತ್ತ ಪಡಿಕಲ್​​ ಅವರ ವಿಕೆಟ್​ ಕಳೆದುಕೊಂಡು ಭಾರೀ ಹಿನ್ನೆಡೆ ಅನುಭವಿಸಿತು.

  ತದನಂತರ ಕ್ರೀಸ್​ನಲ್ಲಿ ಬೇರೂರಿ ನಿಂತ ಕ್ಯಾಪ್ಟನ್ ಕೆ.ಎಲ್. ರಾಹುಲ್ 44 ಎಸೆತಗಳಲ್ಲಿ​ 58 ರನ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಇನ್ನು ಸಿಕ್ಸ್​, ಫೋರ್ಸ್​ಗಳನ್ನು ಬ್ಯಾಕ್ ಟು ಬ್ಯಾಕ್​ ಸಿಡಿಸಿದ ನಿಕೋಲಸ್​ ಪೂರನ್ ಬ್ಯಾಟಿಂಗ್ ಅಬ್ಬರದಿಂದ ಲಕ್ನೋ ಸೂಪರ್​ ಜೈಂಟ್ಸ್​ ತನ್ನ ಮೊದಲ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು. ಕೊನೆಯ ಓವರ್​ವರೆಗೂ ಭಾರೀ ಪೈಪೋಟಿ ಕೊಟ್ಟ ಪೂರನ್​ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಎಡವಿದರು.

  ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

  ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts