More

    ಆದರ್ಶ ಸಮಾಜದ ಮೂಲ ಪ್ರೇರಣಾ ಶಕ್ತಿ ಮಹಿಳೆ, ಮಹಿಳಾ ಸ್ವಾವಲಬನೆಯ ಸವಾಲುಗಳು- ಸಂವೇದನೆ ಕಾರ್ಯಾಗಾರ ಉದ್ಘಾಟಿಸಿ ವಸಂತ ಕಾರಂದೂರು

    ಮಂಗಳೂರು: ಮಾನಸಿಕವಾಗಿ ಪುರುಷರಿಗಿಂತ ಮಹಿಳೆ ಹೆಚ್ಚು ಬಲಶಾಲಿ. ಆದರ್ಶ ಸಮಾಜದ ಮೂಲ ಪ್ರೇರಣಾ ಶಕ್ತಿ ಮಹಿಳೆಯಾಘಿದ್ದು, ಪರಿಪೂರ್ಣ ಮನೆ, ಕುಟುಂಬ, ಸಮಾಜ, ನಾಡು ಮತ್ತು ದೇಶ ಕಟ್ಟುವಲ್ಲಿ ಮಹಿಳೆಯ ಪಾತ್ರ ಮುಖ್ಯ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಸಂತ ಕಾರಂದೂರು ಹೇಳಿದರು.
    ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಕಂಕನಾಡಿ ಘಟಕ, ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಬೆಂಗಳೂರು ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನಡೆದ ಮಹಿಳಾ ಸ್ವಾವಲಬನೆಯ ಸವಾಲುಗಳು- ಸಂವೇದನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಕಳೆದ ಕೆಲವು ವರ್ಷಗಳಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಸಾಧನೆಗಳನ್ನು ಪ್ರಶಂಶಿಸಿ ಪ್ರೋತ್ಸಾಹಿಸಬೇಕು. ಕುಟುಂಬಕ್ಕಾಗಿ ಸರ್ವಸ್ವವನ್ನು ಧಾರೆ ಎರೆದು ಪಾಲನೆ ಮಾಡುತ್ತಿರುವ ಮಹಿಳೆಯರಿಗೆ ಸಮಾಜದಲ್ಲಿ ಗೌರವ, ಸ್ಥಾನಮಾನ ಸಿಗಬೇಕು ಎಂದರು.
    ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷ ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ. ಮಹಿಳೆಯರು ಸ್ವಾವಲಂಬಿಗಳಾಗುವುದರ ಜತೆಯಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ನಮ್ಮ ಬದುಕಿನಲ್ಲಿ ಸಂಪಾದನೆ ಅತ್ಯಂತ ಮೌಲ್ಯಯುತವಾದದ್ದು. ಅದಿಲ್ಲದೆ ಬದುಕು ಸಾಗದು. ಪ್ರತಿ ವ್ಯಕ್ತಿಯ ಬದುಕಿನಲ್ಲಿ ಮೊದಲ ಗುರು ತಾಯಿ. ಹೆತ್ತ ತಾಯಿ ಹೊತ್ತ ನಾಡನ್ನು ಗೌರವಿಸುವ ಮೌಲ್ಯಗಳನ್ನು ಸಂಸ್ಕಾರದ ಪಾಠಗಳನ್ನು ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ತಾಯಿಯಿಂದಲೇ ಕಲಿತಿದ್ದೇವೆ ಎಂದರು.
    ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್ ಕೆ ಪೂಜಾರಿ, ಪ್ರೊೆಸರ್ ಆ್ ಪ್ಯಾಥೊಲೊಜಿ ಮಂಗಳೂರು ಮುಖ್ಯರ್ಸತೆ ಡಾ. ಸುಚಿತ್ರ ಸೊರಕೆ, ಜೆ.ಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ವಿಭಾಗೀಯ ಸಂಚಾಲಕ ಜಯನಂದ್ ಎಂ, ಪ್ರತಿಷ್ಠಾನದ ಪೂಷಕರಾದ ಕುಸುಮ ಅಜಯ್, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ.ಕೆ, ಮಹಿಳಾ ಸಂಘಟನಾ ನಿರ್ಧೇಶಕಿ ನಯನ ಸುರೇಶ್ ಉಪಸ್ಥಿತರಿದ್ದರು.
    ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಗೋಕರ್ಣನಾಥೇಶ್ವರ ಕಾಲೇಜುನ ಪ್ರಾಂಶುಪಾಲೆ ಡಾ. ಆಶಾಲತಾ, ಜನಮೆಚ್ಚಿದ ಶಿಕ್ಷಕಿ ರಮಣಿ ಉಮೇಶ್, ದೈಹಿಕ ಶಿಕ್ಷಕಿ ಯೋಗ ಗುರು ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.
    ಸಮಾರೋಪ ಸಮಾರಂಭದಲ್ಲಿ ಜೆ.ಪಿ ನಾರಾಯಣ ಪ್ರತಿಷ್ಠಾನದ ಗೌರವಾಧ್ಯಕ್ಷ ಶೈಲೇಂದ್ರ.ವೈ.ಸುವರ್ಣ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಚಂಚಲ ತೇಜೋಮಯ, ಯುವವಾಹಿನಿ ಕಂಕನಾಡಿ ಘಟಕದ ಕಾರ್ಯದರ್ಶಿ ಮಮತಾ.ತೇಜ್ ಪಾಲ್ ಸಹಿತ ಹಲವರು ಉಪಸ್ಥಿತರಿದ್ದರು.
    ನಯನ ಸುರೇಶ್ ಸ್ವಾಗತಿಸಿದರು. ಶ್ರೀವಾಸ ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪ್ರಜ್ಞ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ಚಂದ್ರ ಚಂದ್ರ ಡಿ.ಕೆ ವಂದಿಸಿದರು.


    ಇಂದು ಮಹಿಳೆಯರು ಆದರ್ಶದಾಯಕ ಬದುಕು ಸಾಗಿಸಲು ಶಕ್ತರಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ಮುನ್ನುಗ್ಗುತ್ತಿದ್ದಾಳೆ. ಮಹಿಳೆಗೆ ಸಮಾಜದ ಹಿತಕ್ಕೆ ಪೂರಕವಾದ ನಿರ್ದಿಷ್ಟವಾದ ಗುರಿ ಇರಬೇಕು. ಆ ಮೂಲಕ ಯಶಸ್ಸಿನ ದಾರಿ ಸುಗಮವಾಗಲಿದೆ. ಇದೇ ರೀತಿ ಮಹಿಳೆ ರಾಜಕೀಯ, ಶೈಕ್ಷಣಿಕ, ಆರ್ಥಿಕ ನೀತಿ, ಕ್ರೀಡೆ ಎಲ್ಲ ಕ್ಷೇತ್ರದಲ್ಲೂ ಬೆಳೆಯಲು ಅವಕಾಶ ಅಗತ್ಯ.
    ಲೋಕೇಶ್ ಅಮೀನ್, ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts