More

    ನಾಯಕತ್ವ ಬದಲಾದರೂ ಸನ್‌ರೈಸರ್ಸ್‌ಗೆ ಕೈಹಿಡಿಯದ ಅದೃಷ್ಟ ; ರಾಜಸ್ಥಾನ ರಾಯಲ್ಸ್ ಎದುರು ಸೋಲು

    ನವದೆಹಲಿ: ಸತತ ವೈಫಲ್ಯದಿಂದಾಗಿ ನಾಯಕತ್ವನ್ನೇ ಬದಲಿಸಿದರೂ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಅದೃಷ್ಟ ಮಾತ್ರ ಬದಲಾದಂತಿಲ್ಲ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (124ರನ್, 64 ಎಸೆತ, 11 ಬೌಂಡರಿ, 8 ಸಿಕ್ಸರ್) ಭರ್ಜರಿ ಶತಕದಾಟ ಹಾಗೂ ಮುಸ್ತಾಫಿಜರ್ ರೆಹಮಾನ್ (20ಕ್ಕೆ 3), ಕ್ರಿಸ್ ಮಾರಿಸ್ (28ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ಸನ್‌ರೈಸರ್ಸ್‌ ತಂಡ ಐಪಿಎಲ್-14ರ ತನ್ನ 7ನೇ ಪಂದ್ಯದಲ್ಲಿ 55 ರನ್‌ಗಳಿಂದ ಶರಣಾಯಿತು. ಲೀಗ್‌ನಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 2ನೇ ಬಾರಿಗೆ ಹ್ಯಾಟ್ರಿಕ್ ಸೋಲಿನ ರುಚಿ ಕಂಡಿತು.

    ಅರುಣ್ ಜೇಟ್ಲಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ, ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ (48ರನ್, 33 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 3 ವಿಕೆಟ್‌ಗೆ 220 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್‌ ತಂಡ 8 ವಿಕೆಟ್‌ಗೆ 165 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

    ರಾಜಸ್ಥಾನ ರಾಯಲ್ಸ್: 3 ವಿಕೆಟ್‌ಗೆ 220 (ಜೋಸ್ ಬಟ್ಲರ್ 124, ಸಂಜ್ಯ ಸ್ಯಾಮ್ಸನ್ 48, ಸಂದೀಪ್ ಶರ್ಮ 50ಕ್ಕೆ 1, ರಶೀದ್ ಖಾನ್ 24ಕ್ಕೆ 1, ವಿಜಯ್ ಶಂಕರ್ 42ಕ್ಕೆ 1), ಸನ್‌ರೈಸರ್ಸ್‌ ಹೈದರಾಬಾದ್: 8 ವಿಕೆಟ್‌ಗೆ 165 (ಮನೀಷ್ ಪಾಂಡೆ 31, ಜಾನಿ ಬೇರ್‌ಸ್ಟೋ 30, ಕೇನ್ ವಿಲಿಯಮ್ಸನ್ 20, ಮುಸ್ತಾಫಿಜರ್ ರೆಹಮಾನ್ 20ಕ್ಕೆ 3, ಕ್ರಿಸ್ ಮಾರಿಸ್ 29ಕ್ಕೆ 3, ರಾಹುಲ್ ತೆವಾಟಿಯಾ 45ಕ್ಕೆ 1, ಕಾರ್ತಿಕ್ ತ್ಯಾಗಿ 32ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts