More

    ಜಪ್ತಿ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ 5 ಕೋಟಿ ರೂ. ದಂಡ ವಸೂಲಿ

    ಜೈಪುರ: ಲಾಕ್​ಡೌನ್​ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದ ರಾಜಸ್ಥಾನ ಪೊಲೀಸರು, ಅವುಗಳ ಮಾಲೀಕರಿಂದ ಇದುವರೆಗೆ 5 ಕೋಟಿ ರೂ. ಜುಲ್ಮಾನೆ ವಸೂಲಿ ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಜಾಜಸ್ಥಾನ ಪೊಲೀಸ್​ನ ಎಡಿಜಿಪಿ (ಅಪರಾಧ) ಬಿ.ಎಲ್​. ಸೋನಿ ಲಾಕ್​ಡೌನ್​ ಅವಧಿಯಲ್ಲಿ ಒಟ್ಟು 1.28 ಲಕ್ಷ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಮೋಟಾರು ವಾಹನ ಕಾಯ್ದೆಯಡಿ ಈ ವಾಹನಗಳ ಮಾಲೀಕರಿಂದ 5 ಕೋಟಿ ರೂ. ಜುಲ್ಮಾನೆ ವಸೂಲಿ ಮಾಡಲಾಯಿತು ಎಂದರು.

    ಇದನ್ನೂ ಓದಿ: ಗುಜರಾತ್​ಗೆ ಹೋಗಿ ಬಂದ 14 ತಬ್ಲಿಘಿ ಸೇರಿ 15 ಜನರಲ್ಲಿ ಸೋಂಕು, ಬೆಚ್ಚಿಬಿದ್ದ ಮುಧೋಳ

    ಇದೇ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸುತ್ತಾ ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ 14,400 ಜನರನ್ನು ಬಂಧಿಸಲಾಗಿದೆ. 5,600 ಜನರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ತಿಳಿಸಿದರು.

    ಕರೊನಾ ಸೇನಾನಿಗಳ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ 409 ಮಂದಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಹಲ್ಲೆಗೆ ಒಳಗಾದವರಲ್ಲಿ ವೈದ್ಯರು, ದಾದಿಯರು ಮತ್ತಿತರ ಅರೆವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎಂದು ವಿವರಿಸಿದರು.
    ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ 199 ಜನರ ವಿರುದ್ಧ ಹಾಗೂ 280 ಮಂದಿ ಸಮಾಜಘಾತುಕ ಶಕ್ತಿಗಳ ವಿರುದ್ಧವೂ ದೂರು ದಾಖಲಿಸಿಕೊಂಡಿರುವುದಾಗಿ ಹೇಳಿದರು.

    ಗುಜರಾತ್​ನಲ್ಲಿ ಬಿಜೆಪಿಗೆ ಭಾರಿ ಶಾಕ್​; ಸಚಿವನ ಆಯ್ಕೆಯನ್ನೇ ಅಸಿಂಧುಗೊಳಿಸಿದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts