ಕಳೆದ ಕೆಲವು ವರ್ಷಗಳಿಂದ ರಜನಿಕಾಂತ್ ಸಖತ್ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ‘ದರ್ಬಾರ್’ ಬಂತು. ಅದಕ್ಕೂ ಮುನ್ನ ‘ಪೆಟ್ಟಾ’, ‘2.0’, ‘ಕಾಲ’, ‘ಕಬಾಲಿ’ … ಹೀಗೆ 69ರ ವಯಸ್ಸಿನಲ್ಲೂ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಸದ್ಯ ‘ಅಣ್ಣಾತ್ತಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ಅವರ ಮುಂದಿನ ನಡೆ ಏನು ಗೊತ್ತಾ? ‘ಚಂದ್ರಮುಖಿ 2’.
ಹೌದು, ‘ಅಣ್ಣಾತ್ತಿ’ ಚಿತ್ರದ ನಂತರ ‘ಚಂದ್ರಮುಖಿ 2’ನಲ್ಲಿ ರಜನಿಕಾಂತ್ ಅವರು ನಟಿಸಿರುವುದು ಪಕ್ಕಾ ಆಗಿದೆ. ಈ ಬಗ್ಗೆ ಚಿತ್ರತಂಡದವರು ಅಧಿಕೃತ ಹೇಳಿಕೆ ನೀಡದಿದ್ದರೂ, ನಟ-ನಿರ್ದೇಶಕ ರಾಘವ ಲಾರೆನ್ಸ್ ಮಾಡಿರುವ ಒಂದು ಟ್ವೀಟ್‌ನಲ್ಲಿ, ರಜನಿಕಾಂತ್ ಅವರು ‘ಚಂದ್ರಮುಖಿ 2’ ಚಿತ್ರದಲ್ಲಿ ನಟಿಸುತ್ತಿರುವುದು ಸ್ಪಷ್ಟವಾಗಿದೆ.
ಈ ಹಿಂದೆ, ವಿಷ್ಣುವರ್ಧನ್ ಅಭಿನಯದ ‘ಅಪ್ತಮಿತ್ರ’ ಚಿತ್ರವು ತಮಿಳಿನಲ್ಲಿ ‘ಚಂದ್ರಮುಖಿ’ ಹೆಸರಿನಲ್ಲಿ ರೀಮೇಕ್ ಆಗಿತ್ತು ಮತ್ತು ವಿಷ್ಣುವರ್ಧನ್ ಅವರು ಮಾಡಿದ ಪಾತ್ರವನ್ನು ರಜನಿಕಾಂತ್ ಮಾಡಿದ್ದರು. ಚಿತ್ರ ಹಿಟ್ ಆಗಿದ್ದೇ ಆಗಿದ್ದು, ಅದರ ಮುಂದುವರೆದ ಭಾಗ ಬರುತ್ತದೆ ಎಂದು ಹೇಳಲಾಗಿತ್ತು. ಎರಡೂ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪಿ. ವಾಸು, ಸೀಕ್ವೆಲ್ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದುವರೆದಿರಲಿಲ್ಲ.
ಇದೀಗ ‘ಚಂದ್ರಮುಖಿ 2’ಗೆ ಸಮಯ ಕೂಡಿ ಬಂದಿದ್ದು, ಅವರೇ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಸನ್ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಅಣ್ಣತ್ತಿ’ ಇಷ್ಟರಲ್ಲಿ ಮುಗಿದು, ‘ಚಂದ್ರಮುಖಿ 2’ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ‘ಅಣ್ಣತ್ತಿ’ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ. ಆ ಚಿತ್ರ ಮುಗಿದ ನಂತರ, ಬಹುಶಃ ಈ ವರ್ಷದ ಕೊನೆಗೆ ‘ಚಂದ್ರಮುಖಿ 2’ ಪ್ರಾರಂಭವಾಗಲಿದೆ.
ಕುದುರೆ ಜತೆ ಸಲ್ಮಾನ್ ಖಾನ್ ಬ್ರೇಕ್ಫಾಸ್ಟ್! ಹಸಿ ಮೇವು ತಿಂದು ಬಾಯಿ ಚಪ್ಪರಿಸಿದ ನಟ! ವಿಡಿಯೋ ನೋಡಿ..