More

    ಸ್ಟಾರ್ ನಟನಾಗಿ ಇಂಥಾ ಸಿನಿಮಾ ಮಾಡಲು ಎದೆಗಾರಿಕೆ ಬೇಕು: ವಿಆರ್​ ಚಿತ್ರ ಮೆಚ್ಚಿಕೊಂಡ ರಾಜಮೌಳಿ ​

    ಹೈದರಾಬಾದ್​: ಸ್ಟಾರ್​ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಮತ್ತು ಕನ್ನಡದ ಸೂಪರ್​ ಸ್ಟಾರ್​ ಸುದೀಪ್​ ನಡುವೆ ಇರುವ ಒಳ್ಳೆಯ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಟಾಲಿವುಡ್​ಗೆ ಸುದೀಪ್​ ಅವರನ್ನು ಪರಿಚಯಿಸಿದ್ದೇ ರಾಜಮೌಳಿ ಅವರು. ಈಗ ಚಿತ್ರದ ಬಳಿಕ ಸುದೀಪ್​ ಅವರಿಗೆ ವಿಶ್ವ ಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿತು. ಸುದೀಪ್​ ಅವರ ಸಿನಿ ಜೀವನದಲ್ಲಿ ಈಗ ಚಿತ್ರ ಒಂದು ಮೈಲಿಗಲ್ಲಾಗಿ ಇಂದಿಗೂ ಉಳಿದುಕೊಂಡಿದೆ. ಬಾಹುಬಲಿ ಮೊದಲ ಭಾಗದಲ್ಲಿ ಸುದೀಪ್​ ಅವರು ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

    ತಾಜಾ ವಿಚಾರ ಏನೆಂದರೆ, ಜುಲೈ 28ರಂದು ಬಿಡುಗಡೆಯಾದ ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾವನ್ನು ರಾಜಮೌಳಿ ಅವರು ಮೆಚ್ಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಆಂಧ್ರ ಮತ್ತು ತೆಲಂಗಾಣದಲ್ಲಿ ವಿಕ್ರಾಂತ್​ ರೋಣ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದೀಗ ವಿಆರ್​ ಸಿನಿಮಾ ನೋಡಿದ ರಾಜಮೌಳಿ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

    ಸುದೀಪ್​ ಅವರಿಗೆ ವಿಕ್ರಾಂತ್​ ರೋಣ ಸಿನಿಮಾ ಯಶಸ್ಸಿನ ಅಭಿನಂದನೆಗಳು. ಸ್ಟಾರ್​ ನಟನಾಗಿ ಇಂತಹ ಸಿನಿಮಾ ಮಾಡಲು ಮತ್ತು ಇಂತಹ ಸಿನಿಮಾಗೆ ಬಂಡವಾಳ ಹೂಡಲು ನಿಜಕ್ಕೂ ಎದೆಗಾರಿಕೆ ಬೇಕು. ನೀವು ಅದನ್ನು ಮಾಡಿದ್ದೀರಿ ಮತ್ತು ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆದಿದ್ದೀರಿ. ಚಿತ್ರದ ಹೃದಯವಾಗಿರುವ ಪ್ರೀ ಕ್ಲೈಮ್ಯಾಕ್ಸ್​ ಅದ್ಭುತವಾಗಿತ್ತು. ಗುಡ್ಡಿ ಫ್ರೆಂಡ್​ ಭಾಸ್ಕರ್​ಗೆ ವಿಶೇಷ ಗಮನ ಸೆಳೆಯುತ್ತಾರೆ ಎಂದು ರಾಜಮೌಳಿ ಟ್ವೀಟ್​ ಮಾಡಿದ್ದಾರೆ.

    ರಾಜಮೌಳಿ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್​, ಧನ್ಯವಾದಗಳು ರಾಜಮೌಳಿ ಸರ್​. ನಿಮ್ಮಿಂದ ಈ ಸಾಲುಗಳನ್ನು ಕೇಳಿದ್ದು, ಅತ್ಯಂತ ಗೌರವ. ಭಾಸ್ಕರನೂ ಸೇರಿದಂತೆ ನಮ್ಮ ತಂಡದಿಂದ ದೊಡ್ಡ ಧನ್ಯವಾದಗಳು ಎಂದಿದ್ದಾರೆ.

    ನಿರ್ದೇಶಕ ಅನೂಪ್​ ಭಂಡಾರಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಸಾಲುಗಳಿಂದ ನಾವೆಲ್ಲ ಭಾವಪರವಶವಾಗಿದ್ದೇವೆ. ವಿಶೇಷವಾಗಿ ಭಾಸ್ಕರನು ಕೂಡ. ನಿಮ್ಮ ಮುಂದಿನ ಸಿನಿಮಾದಲ್ಲಿ ಭಾಸ್ಕರ ಒಂದು ಅವಕಾಶ ಗಿಟ್ಟಿಸಿಕೊಳ್ಳುತ್ತಾನೆಂಬ ಭರವಸೆ ಇದೆ ಎಂದಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿದೆ. ಮೂರೇ ದಿನದಲ್ಲಿ 80 ಕೋಟಿ ರೂ.ಗೂ ಅಧಿಕ ಹಣ ಸಂಪಾದಿಸಿದ್ದು, ಭಾನವಾರದ ಕಲೆಕ್ಸನ್​ ವರದಿ ಸೇರಿದರೆ, ಒಟ್ಟಾರೆ 100 ಕೋಟಿ ರೂ. ದಾಟಲಿದೆ. (ಏಜೆನ್ಸೀಸ್​)

    ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ತಾಯಿಯನ್ನು ಹೆಲಿಕಾಪ್ಟರ್​ ಮೂಲಕ ಮನೆಗೆ ಕರೆತಂದ ಮಗ!

    ಒಂಟಿ ಮಹಿಳೆಯರನ್ನು ಗುರಿಯಾಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ವಿಕೃತಿ ಮೆರಿತಿದ್ದ ಗ್ಯಾಂಗ್ ಬಂಧನ​

    ಕಳ್ಳ-ಪೊಲೀಸ್​ ಆಡುತ್ತಾ ಗುಂಡು ಹಾರಿಸಿದ ಬಿಜೆಪಿ ಮುಖಂಡನ ಪುತ್ರ: ಪ್ರಾಣ ಬಿಟ್ಟ ನೆರೆಮನೆಯ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts