More

    ಅಮೆರಿಕವನ್ನೇ ಗೆಲ್ಲುತ್ತಿರುವ ಪೆಡಂಭೂತ ಚೀನಾ!: ಡಾ.ಕೆ.ಎಸ್.ನಾರಾಯಣಾಚಾರ್ಯರ ರಾಜಧರ್ಮ-ರಾಜನೀತಿ

    ಈಗಾಗಲೇ ಚೀನಾದ ವಾಣಿಜ್ಯ ಶಕ್ತಿ ಸಾಯುತ್ತಿದೆ, ಕಂಪನಿಗಳು ಹೊರಗೆ ನಡೆದಿವೆ. ‘ಕ್ಸಿ’ ಅವರ ಕುರ್ಚಿ ಅಲುಗಾಡುತ್ತಿದೆ. ಸೇನೆಯಲ್ಲಿ ಅಶಾಂತಿಯಿದ್ದು, ಚೀನಾ ಕಮ್ಯುನಿಸ್ಟ್ ಪಕ್ಷ ಸಿಡಿದೆದ್ದು, ಅಂತರ್ಯುದ್ಧ ಸಂಭವವಿದೆ. ರಷ್ಯಾದ ಸೋವಿಯತ್ ಪತನದಿಂದ ಚೀನಾ ಏನೂ ಕಲಿತಿಲ್ಲ!

    ಅಮೆರಿಕವನ್ನೇ ಗೆಲ್ಲುತ್ತಿರುವ ಪೆಡಂಭೂತ ಚೀನಾ!: ಡಾ.ಕೆ.ಎಸ್.ನಾರಾಯಣಾಚಾರ್ಯರ ರಾಜಧರ್ಮ-ರಾಜನೀತಿಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಸಂಗ (ಪ್ರಹಸನ)ವು ಸಮುದ್ರಮಥನ ಸಂದರ್ಭದಲ್ಲಿ ಕಳ್ಳತನದಲ್ಲಿ ಅಮೃತಪಾನ ಮಾಡಿ ತಲೆ ಕಡಿಸಿಕೊಂಡ ‘ಸ್ವರ್ಭಾನು’ವಿನ ಸ್ಥಿತಿಯನ್ನು ನೆನಪಿಸುತ್ತಿದೆ! ಇಲ್ಲಿ ರಾಹು-ಕೇತುಗಳಾಗುವವರಾರು? ಇಲ್ಲಿ ಮೋಹಿನೀ ಪಾತ್ರ ವಹಿಸುವ ದೇಶ ಯಾವುದು? ಅದು ಭಾರತದ ಅದೃಷ್ಟವೇ? ಚೀನಾ ಎಂಬ ಡ್ರಾ್ಯಗನ್, ಪೆಡಂಭೂತದ ಬಾಯಿ ಹರಿಯುವ ಅಘಾಸುರ ಸಂಹಾರೀ-ಶ್ರೀಕೃಷ್ಣ ಯಾರು? ಇನ್ನೆಷ್ಟು ದಿನ ಜಗತ್ತು ಚೀನಾದ ಮಾಯಾಯುದ್ಧದ ಮಜಲುಗಳ ಸಂಕಟವನ್ನು ಸಹಿಸಬೇಕು? ವಿಶ್ವ ರಾಜಕೀಯ ಅಮೃತಮಥನದ ಸಂದರ್ಭದ ಹಾಲಾಹಲವನ್ನು ನುಂಗಿ ಕಂಠದಲ್ಲಿ ಧರಿಸಬಲ್ಲ ವಿಷಕಂಠ, ನಂಜುಂಡ, ನೀಲಗ್ರೀವ ಯಾರು? ಎಂಬುದನ್ನೆಲ್ಲ ಇನ್ನು ಮೇಲೆ ನೋಡಲಿದ್ದೇವೆ. ಇದೆಲ್ಲ ಪುರಾಣ ಕಥೆಗಳ ಸಾಂಕೇತಿಕ ಪುನರಾವರ್ತನೆಯಲ್ಲದೆ ಬೇರೆಯಲ್ಲ. ವೈದಿಕನಾದ ನನಗೆ ಇದು ಕಣ್ಣಿಗೆ ಸ್ಪಷ್ಟ. ವೇದವಿರೋಧಿ ಧೃತರಾಷ್ಟ್ರ ದರ್ಶನದ ಸೆಕ್ಯುಲರಿಸ್ಟರಿಗೆ, ಢೋಂಗೀ ಸಮರಸತಾವಾದಿ ಭೀಷ್ಮ, ದ್ರೋಣರಂಥವರಿಗೆ ಮುಂದೆ ಬರುವ ಘೋರ ಕುರುಕ್ಷೇತ್ರದ ಸುಳಿವು ಸಿಗಲು ಸಾಧ್ಯವಿಲ್ಲ. ನಹುಷ, ಧೃತರಾಷ್ಟ್ರ, ಹಸ್ತಿ ಮೊದಲಾದವರು ಮಾಡಿದ ನಾಗಾಸ್ತ್ರೀಯರ ಮಾನಹರಣ ಪ್ರಸಂಗ, ಮುಂದೆ ಪರೀಕ್ಷಿತನನ್ನೂ ಆಹುತಿ ತೆಗೆದುಕೊಂಡು, ಸರ್ಪಯಾಗದ ಜನಾಂಗೀಯ ಹತ್ಯೆಯ ಘೋರತೆಗೆ ಎಡೆ ಮಾಡಿಕೊಡಲಿರುವುದನ್ನು ಅಂದಿನ ‘ಶಮಿಕ’ (ಗಾಂಧಿ)ಗಳು ಎದುರು ನೋಡಲಿಲ್ಲ! ಇಲ್ಲೆಲ್ಲ ಸಾಂಕೇತಿತಾರ್ಥ ವಿಜ್ಞಾನದ ಚಕ್ಷುಸ್ಸಿಗೆ ನೀವು ಅರ್ಪಿಸಿಕೊಂಡರೆ ಕಾಣಬಹುದಾದುದನ್ನು ವಿವರಿಸುತ್ತೇನೆ.

    ಇದೇ ಅಂಕಣದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ, ಅಮೆರಿಕದಲ್ಲಿ ವೋಟು ಹಕ್ಕು ಪಡೆದ ಭಾರತ ಮೂಲದ ಅಲ್ಲಿನ ನಾಗರಿಕರಿಗೆ ನಾನು ಬಿನ್ನವಿಸಿಕೊಂಡಿದ್ದೆ. ‘ಟ್ರಂಪರಿಗೇ ವೋಟು, ಏಕೆ ಎಂದರೆ?’! ಎಂಥ ದೀರ್ಘ ಲೇಖನ ಬರೆದಿದ್ದೆ. ನನ್ನ ಅಭಿಮಾನಿ ವೃದ್ಧರೊಬ್ಬರು, ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ, ಟ್ರಂಪ್​ರಿಗೇ ಕಳುಹಿದ್ದು, ಅವರು ಉತ್ತರ ಕೊಟ್ಟು ಅಭಿನಂದಿಸಿದ್ದನ್ನೂ ನನಗೆ ಒಂದು ಸಮಾರಂಭದಲ್ಲಿ ಈಚೆಗೆ ತಿಳಿಸಿದರು. ಈಗ ನಾನು ಬರೆದದ್ದೇ ನಿಜವಾಗಿದೆ. ಚೀನಾದ ಮೋಸ ಕೃತ್ಯ! ಕಳ್ಳ ವೋಟುಗಳನ್ನು ಚೀನಾ ಕಟಠಠಿಚ್ಝ ಚಿಚ್ಝ್ಝಠಿಠ ಆಗಿ ಮಾಡಿ, ಅದಕ್ಕೆ ಬೇಕಾದ ಮಾಹಿತಿಗಳನ್ನು ಟಿಕ್-ಟಾಕ್ ಮೂಲಕ ಕದ್ದು, ‘ಮಿಚಿಗನ್’ ಕ್ಷೇತ್ರ ಹಿಡಿದು, ಸುಮಾರು 1.30 ಲಕ್ಷ ವೋಟುಗಳು ರಾತ್ರೋರಾತ್ರಿ ಬಂದು ಸೇರಿ ವೋಟಿನ ಸಮತೋಲನವನ್ನೇ ಕೆಡಿಸಿದರು. ಟ್ರಂಪ್ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಬೇರೆ ಕಡೆಯೂ, ಸಾಧ್ಯವಿದ್ದಲ್ಲೆಲ್ಲ ಚೀನಾ ಅಮೆರಿಕದ ಚುನಾವಣೆಯ ಪ್ರಕ್ರಿಯೆಯಲ್ಲಿ ತಲೆ ತೂರಿಸುತ್ತದೆ. ಏಕೆ? ‘ಅಮೆರಿಕವನ್ನು ನುಂಗಬೇಕು’ ಎಂಬ ಆಶಯ! ಒಂದು ಉದಾಹರಣೆ. ‘ಸರ್ಪರೋಗ’ ಎಂಬುದಿದೆ. ಅದು ಚುಕ್ಕೆಯಾಗಿ ಒಂದು ಕಡೆ ಕಾಣಿಸಿಕೊಂಡರೆ, ಸುತ್ತ ಸುತ್ತುತ್ತ, ಹೊರಟ ಜಾಗಕ್ಕೇ ಬಂದು ಸೇರಿದರೆ ಸಾಮಾನ್ಯವಾಗಿ ರೋಗಿ ಸಾಯುತ್ತಾನೆ. ನನಗೆ ಇದು ಐದು ವರ್ಷಗಳ ಹಿಂದೆ ಹಣೆಯಲ್ಲಿ ಆರಂಭಿಸಿ, ಕಣ್ಣು, ಮೂಗು ಸುತ್ತಿ, ಕಿವಿಯ ತನಕ ಬರುವಲ್ಲಿ ಆರು ತಿಂಗಳಲ್ಲಿ ಚೇತರಿಸಿಕೊಂಡೆ. ಇಲ್ಲದಿದ್ದರೆ? ಬಿಡಿ.

    ಈ ಉದಾಹರಣೆಯ ಪ್ರಸ್ತುತತೆ ನೋಡಿ. ‘ಒನ್ ಬೆಲ್ಟ್ ಒನ್ ರೋಡ್’ (ಣ್ಟಟಚಿಠಿ) ಎಂಬ ‘ಸಹಾಯಹಸ್ತ’ದ ನೆಪವೊಡ್ಡಿ, ಚೀನಾ ಪಾಕನ್ನೂ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಮಲೇಷ್ಯಾ, ಬಾಂಗ್ಲಾ, ಇರಾನ್ ದೇಶಗಳನ್ನೂ, ಬಂದರು ಅಭಿವೃದ್ಧಿಯ ಮರೆಯಲ್ಲಿ ನಡೆಸಿ, ಅಪಾರ ಹಣ ಹೂಡಿ, ಅಪಾರ ಸಂಖ್ಯೆಯ ಚೀನೀ ಕಾರ್ಯಾಗಾರರನ್ನೂ, ತೂರಿಸಿ, ಸಾಲ ಕೊಟ್ಟು, ತೀರಿಸಲಾಗದ ಈ ದೇಶಗಳಿಂದ ಬಂದರು, ರಸ್ತೆಗಳನ್ನು ತನ್ನದಾಗಿಸಿಕೊಂಡಿತ್ತು. ಈಗ ಬಲೂಚಿಸ್ಥಾನ ಎಚ್ಚೆತ್ತಿದೆ. ಗ್ವಾದರ್ ಬಂದರು ಚೀನಾದ ಕೈಬಿಡುತ್ತಿದೆ. ‘ಹಂಬನ್​ತೋಟಾ’ ಶ್ರೀಲಂಕಾ ಕಣ್ಣು ಕಣ್ಣು ಬಿಡುತ್ತಿದೆ. ಮಲೇಷ್ಯಾ ಪೇಚಾಡುತ್ತಿದೆ. ದಕ್ಷಿಣ ಚೀನಾ ಸಮುದ್ರ ಹಾದಿ ಬಂದಾಗಿ, ಥೈಲ್ಯಾಂಡ್ ಮೂಲಕ, ರಸ್ತೆ ಹಿಡಿದು ಸಮುದ್ರ ಪ್ರವೇಶಿಸಲು ಯತ್ನಿಸಿ, ಥಾಯ್ ಸರ್ಕಾರ ಎಚ್ಚೆತ್ತು, ಈ ಯತ್ನಕ್ಕೆ ತಡೆ ಹಾಕಿದೆ. ಇರಾನ್ ಎಚ್ಚೆತ್ತಿಲ್ಲ. ಈ ತಂತ್ರ, ಮಾಯಾಜಾಲವನ್ನು ಮೊದಲು ಪತ್ತೆ ಹಚ್ಚಿ ಚೀನಾದ ಓಟಕ್ಕೆ ತಡೆ ಹಾಕಿದವರು ಮೋದಿ! ಅಷ್ಟರಲ್ಲಿ ಚೀನಾ ವಿಶ್ವಸಂಸ್ಥೆಯ ಒಂದು ವಿಭಾಗವಾದ ವಿಶ್ವ ಆರೋಗ್ಯ ಸಂಸ್ಥೆಯನ್ನು ತನ್ನ ಏಜೆಂಟರ ಮೂಲಕ ಹಿಡಿದು, ಕರೊನಾ ಬಗ್ಗೆ ಟ್ರಂಪ್​ರಿಗೆ ತಡವಾಗಿ, ‘ಉಡಾಫೆ’ಯ ಸಲಹೆ ಕೊಟ್ಟು, ಲಕ್ಷಾಂತರ ಅಮೆರಿಕನ್ನರು ಸತ್ತರು. ವೋಟುದಾರರನ್ನು ಟ್ರಂಪ್ ವಿರುದ್ಧ ಎತ್ತಿ ಕಟ್ಟುವ ಹುನ್ನಾರ ಇಲ್ಲಿದ್ದು ಇದು ಟ್ರಂಪರಿಗೆ ತಡವಾಗಿ ತಿಳಿದು, ವಿಶ್ವ ಆರೋಗ್ಯ ಸಂಸ್ಥೆಗೆ ತಮ್ಮ ಸಲ್ಲಿಕೆಯ ನಿಧಿಯನ್ನೇ ರದ್ದು ಮಾಡಿದರು. ‘ಒನ್ ಬೆಲ್ಟ್ ಒನ್ ರೋಡ್’ ಮೂಲ ಉದ್ದೇಶವೇ ಅಮೆರಿಕದ ನಾಶ, ಅದರ ಅಧಿಕಾರ ವಶ ಮಾಡಿಕೊಳ್ಳುವುದು, ವಾಣಿಜ್ಯದಲ್ಲಿ ಅದನ್ನು ಸೆಣೆಸಿ ಸಾಯಿಸುವುದು, ತನ್ನ ಪ್ರಧಾನ ಪ್ರತಿಸ್ಪರ್ಧಿಯನ್ನು ಮಣಿಸಿ, ಹಣ್ಣು ಮಾಡುವುದು ಇತ್ತು. ಮೋದಿ ನೇತೃತ್ವದಲ್ಲಿ ಇತ್ತ ಇನ್ನೊಂದು ‘ಸರ್ಪಹುಣ್ಣು’ ಏಛ್ಟಿಟಛಿಠ ಹೆಣೆಯಲಾಗಿದ್ದು, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ತೈವಾನ್ ಜತೆಗೆ ಐರೋಪ್ಯ ರಾಷ್ಟ್ರಗಳು ‘ಕಿಖಿಅಈ’ ಎಂಬ ಸುತ್ತನ್ನು, ವರ್ತಲ ರಚಿಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಅದರ ಹಡಗುಗಳು, ಆಮದು-ರಫ್ತು ನಿಲ್ಲುವಂತೆ ಮಾಡಿದ್ದು, ಚೀನಾ ಸಾಯುತ್ತಿದೆ! ಈ ಸಾವು ಖಚಿತವಾಗಲು, ನಿರ್ಣಾಯಕವಾಗಲು ಟ್ರಂಪ್ ಮತ್ತೊಂದು ಅವಧಿಗೆ ಆರಿಸಿ ಬರುವುದು, ವಿಶ್ವಶಾಂತಿ ಬಯಸುವ ಎಲ್ಲರಿಗೂ ಬೇಕಾಗಿತ್ತು.

    ಈಗಾಗಲೇ ಚೀನಾದ ವಾಣಿಜ್ಯ ಶಕ್ತಿ ಸಾಯುತ್ತಿದೆ, ಕಂಪನಿಗಳು ಹೊರಗೆ ನಡೆದಿವೆ. ‘ಕ್ಸಿ’ ಅವರ ಕುರ್ಚಿ ಅಲುಗಾಡುತ್ತಿದೆ. ಸೇನೆಯಲ್ಲಿ ಅಶಾಂತಿಯಿದ್ದು, ಇಇಕ-ಚೀನಾ ಕಮ್ಯುನಿಸ್ಟ್ ಪಕ್ಷ ಸಿಡಿದೆದ್ದು, ಅಂತರ್ಯುದ್ಧ ಸಂಭವವಿದೆ. ರಷ್ಯಾದ ಸೋವಿಯತ್ ಪತನದಿಂದ ಚೀನಾ ಏನೂ ಕಲಿತಿಲ್ಲ! ಚೀನಾದಲ್ಲಿ ತೈಲ ಕೊರತೆ ಇದ್ದು, ಇರಾನ್​ನಿಂದ ಕೊಳವೆ ಮೂಲಕ ತರಿಸಿಕೊಳ್ಳಲು, ಪಾಕ್ ಬಿಟ್ಟರೆ, ಇತರ ರಾಷ್ಟ್ರಗಳು ಅಡ್ಡಗಾಲು ಇಟ್ಟಿವೆ! ಚೀನಾದಲ್ಲೂ ಅಪಾರ ಸಂಖ್ಯೆಯ ಜನ ಸತ್ತಿದ್ದಾರೆ. ಜನರ ಲಕ್ಷ್ಯವನ್ನು ಬೇರೊಂದರತ್ತ ತಿರುಗಿಸಲು ನಮ್ಮ ಲಡಾಖ್​ನಲ್ಲಿ, ಡೋಕ್ಲಾಂನಲ್ಲಿ ಚೀನಾ ಗಡಿ ತಂಟೆ ತೆಗೆದು ಈಗ ಬಾಲ ಸುಟ್ಟ ಕೋತಿಯಂತಾಗಿದೆ. ಚೀನಾಕ್ಕೆ ಸವಾಲಾಗಿರುವುದು ಮೋದಿ-ಟ್ರಂಪ್​ರ ಸಖ್ಯ. ಈಗ ಈ ಹಿನ್ನೆಲೆಯಲ್ಲಿ ಚೀನಾ ಹೊಸ ಯುದ್ಧ ತಂತ್ರ ಹೂಡಿ, ಅಮೆರಿಕದ ಅಧ್ಯಕ್ಷಸ್ಥಾನಕ್ಕೆ ತನ್ನ ಕೈಗೊಂಬೆ ಬೈಡೆನ್ ಎಂಬ ಅವಿವೇಕಿಯನ್ನು ನಿಲ್ಲಿಸಿತ್ತು.

    ‘ಅವಿವೇಕಿ’ ಎಂದೆನೇಕೆ? ತಿಳಿಯಿರಿ! ವಿಶ್ವವೇ ಇಸ್ಲಾಮೀ ಭಯೋತ್ಪಾದಕತೆಯಿಂದ ಸಾಯುತ್ತ ಫ್ರಾನ್ಸ್, ಗ್ರೀಸ್, ಬ್ರಿಟನ್​ಗಳೂ ಭಾರತದ ಸಹಾಯ ಯಾಚಿಸುತ್ತಿರುವಾಗ, ಈ ಬೈಡೆನ್ ಮಹಾಶಯ ‘ನಾನು ಗೆದ್ದು ಬಂದರೆ ಅಮೆರಿಕದ ಉದ್ಯೋಗಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ ತರುತ್ತೇನೆ’ ಎಂದು ಘೋಷಿಸಿದ್ದಾರೆ! ವರ್ಲ್ಡ್ ಟ್ರೇಡ್ ಸೆಂಟರ್ ವಿಧ್ವಂಸನದಲ್ಲಿ ಅಮೆರಿಕಕ್ಕೆ ಏನಾಯ್ತು ಎಂಬುದನ್ನು ಅರಿತವರ ಮಾತು ಹೀಗಿರಬಾರದಲ್ಲ? ಅಷ್ಟೇ ಅಲ್ಲ, ಅಮೆರಿಕದಲ್ಲಿರುವ ಚೀನಿ ಮೂಲದ ತಂತ್ರಜ್ಞಾನಿಗಳೂ, ವ್ಯಾಪಾರಿಗಳೂ, ವೈದ್ಯರೂ, ಬೋಧಕರೂ, ನಾನಾ ಉದ್ದಿಮೆದಾರರೂ, ಒಳಮುಳ್ಳಿನ ಅಂಶಗಳೇ! ಚೀನಾ ಕಳ್ಳಮಾರ್ಗ ಹಿಡಿದು, ಕೃತಕ ವೋಟುಗಳನ್ನು ತೂರಿಸಿ, ಅಧ್ಯಕ್ಷರ ಗಾದಿ ಹಿಡಿಯಲು ಹವಣಿಸುತ್ತಿರುವುದು ಅಮರಿಕೆಯ ಪ್ರಜೆಗಳಿಗೆ ತಿಳಿದಿಲ್ಲವೆ? ಟ್ರಂಪ್ ಒಮ್ಮೆ ಅಜ್ಞಾನದ ಮಾತಾಡಿ ಕಪು್ಪವರ್ಣೀಯರನ್ನು ಎದುರು ಹಾಕಿಕೊಂಡಿದ್ದು ಆ ವೋಟುಗಳೂ ಅವರ ವಿರುದ್ಧವಾಗಿವೆ. ಚೀನಾ ಕಳ್ಳವೋಟು ದಾರಿ ಹಿಡಿದದ್ದು, ಇಂದಿರಾ ಗೆಲುವಿಗೆ ಅಂದಿನ ರಷ್ಯಾ, ಕಮ್ಯುನಿಸ್ಟ್ ನಾಯಕರು ಅನುಸರಿಸಿದ್ದ ದಾರಿಯಾಗಿ, ಇದು ಜಗತ್ತಿಗೆ ತಿಳಿಯುತ್ತಿದೆ. ತಮಾಷೆ ನೋಡಿ: ಅಮೆರಿಕದಲ್ಲಿ ಕೇಂದ್ರ ಚುನಾವಣಾ ಆಯೋಗ ಎಂಬುದೇ ಇಲ್ಲ! ಖ್ಞಿಜಿಠಿಛಿಛ ಖಠಿಚಠಿಛಿಠ ಎಂದಾಗ ಒಂದೊಂದು ಸಂಸ್ಥಾನಕ್ಕೂ ಬೇರೆ ಬೇರೆ ಚುನಾವಣಾ ನೀತಿಗಳಿವೆ. ‘ಅನೈಕ್ಯ’ ಎಂಬುದು ಇದೆ! ಜರಾಸಂಧನ ಕಾಲದ ಭಾರತದ ಹೋಲಿಕೆ! ಟ್ರಂಪ್​ರೇನೋ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಆದರೆ, ಅಯ್ಯಯ್ಯಪ್ಪ! ಅಲ್ಲಿನ ನ್ಯಾಯಾಧೀಶರು ಹಲವರು ಯಹೂದ್ಯರು! ಅಮೆರಿಕದಲ್ಲಿ ಜೀರ್ಣವಾಗದವರು. ್ಕಠಿಜಠ್ಚಜಜ್ಝಿಛ ಎಂಬ ಧನದಾಹೀ ಯಹೂದ್ಯ ಮೂಲದ ಜಾಲದ ಇವರು ಅಮೆರಿಕದ ವೈದ್ಯಕೀಯ ವಿಭಾಗ, ವ್ಯಾಪಾರ, ಶಸ್ತ್ರಾಸ್ತ್ರ ತಯಾರಿ, ಕೋರ್ಟ್ ಎಲ್ಲ ಕಡೆ ಇರುತ್ತ, ಜರ್ಮನಿಯ ಹಿಟ್ಲರನ ಕಾಲದ ಯಹೂದ್ಯರಂತೆ (?) ದೇಶಭಕ್ತಿಯಿಲ್ಲದ ಪ್ರಜೆಗಳಾಗಿದ್ದು, ಇದೂ ಚೀನಾಕ್ಕೆ ಅನುಕೂಲವಾಗಿದ್ದದ್ದೇ.

    ಸುಬ್ರಮಣಿಯನ್ ಸ್ವಾಮಿ ಸಲಹೆಯಂತೆ, ಟ್ರಂಪರು ತಮ್ಮ ಅಧಿಕೃತ ನಿವಾಸವನ್ನೂ, ಅಧಿಕಾರವನ್ನೂ ಬಿಟ್ಟು ಕೊಡದಿದ್ದರೆ, ಕಾಲಾವಧಿ ಮುಗಿಯುವ ಪ್ರಯುಕ್ತ, ಅಲ್ಲಿ ರಾಜ್ಯಾಂಗ ಗೊಂದಲ, ಇಜಿಠಜಿಠ, ಕಗ್ಗಂಟು ಪ್ರಥಮ ಬಾರಿಗೆ ತಯಾರಾಗುತ್ತೆ. ಅಮೆರಿಕದ ಸಂವಿಧಾನ ಈ ಬಗ್ಗೆ ಸ್ಪಷ್ಟವಿಲ್ಲ. ಇನ್ನು, ಕಮಲಾ ಹ್ಯಾರಿಸ್, ಪ್ರಕಟವಾಗಿಯೇ ಪಾಕ್ ಅಭಿಮಾನಿ! ಇವರ ಭಾಷಣಗಳೇ ಅದಕ್ಕೆ ನಿದರ್ಶನ. ಈ ಯುಗಳ ಅಧಿಕಾರಕ್ಕೆ ಬಂದರೆ, ಅಮೆರಿಕೆಯ ಪ್ರಭಾವ ಕುಗ್ಗಿದರೆ, ದಕ್ಷಿಣ ಚೀನಾ ಸಮುದ್ರ ದಿಗ್ಬಂಧನದಿಂದ ಪಾರಾಗಲು ಚೀನಾದ ಹುನ್ನಾರ! ಮೋದಿ ಜಾಣರು! ಅಮೆರಿಕಕ್ಕೆ ಭಾರತ ಋಷಿಮುನಿಗಳ ಆಶೀರ್ವಾದ ಬೇಕು. ಲಕ್ಷಾವಧಿ ಭಾರತೀಯರ ಭವಿಷ್ಯ ಅಲ್ಲಿದೆ. ಟ್ರಂಪರ ದೌರ್ಬಲ್ಯ, ತಪು್ಪ ಹೆಜ್ಜೆಗಳೇನೇ ಇರಲಿ, ಈಗ ಅವರು ಚೀನಾ ಸದೆಬಡಿಯಲು ನಮಗೆ ಬಲವಾದ ಸುತ್ತಿಗೆ. ಅದರ ಹ್ಯಾಂಡಲ್ ಮೋದಿ-ಏನಂತೀರಿ?

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts