More

    ‘UT 69’ ಟ್ರೈಲರ್ ಲಾಂಚ್‌ನಲ್ಲಿ ಭಾವುಕರಾದ ರಾಜ್ ಕುಂದ್ರಾ; ‘ದಯವಿಟ್ಟು ನನ್ನ ಕುಟುಂಬದ ಬಗ್ಗೆ ಮಾತನಾಡಬೇಡಿ’

    ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆ್ಯಪ್ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ರಾಜ್‌ ಕುಂದ್ರಾರನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ದಿನಗಳಿಂದಲೂ ಮುಂಬೈ ಪೊಲೀಸರಿಗೆ ಈ ಬಗ್ಗೆ ಅನುಮಾನವಿತ್ತು. ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ ನಂತರ ಅವರನ್ನು ಸೋಮವಾರ (ಜು.19) ಅವರನ್ನು ಬಂಧಿಸಲಾಗಿತ್ತು.


    ಘಟನೆಯ ನಂತರದಲ್ಲಿ ರಾಜ್​ ಕುಂದ್ರ ಸಾರ್ವಜನಿಕವಾಗಿ ಎಲ್ಲೂ ತಮ್ಮ ಮುಖ ತೋರಿಸದೆ ಮಾಸ್ಕ್​ ತೊಟ್ಟು ಓಡಾಡುತ್ತಿದ್ದರು. ಜತೆಗೆ ತಾವು ಜೈಲಿನಲ್ಲಿ ಕಳೆದ ಮತ್ತು ತಮ್ಮ ಮೇಲೆ ಸುಳ್ಳು ಆರೋಪವನ್ನೂ ಮಾಡಲಾಗಿತ್ತು. ಸತ್ಯ ಆದಷ್ಟು ಬೇಗೆ ಹೊರ ಬರಲಿದೆ ಎಂಬ ಹೇಳಿಕೆಯನ್ನೂ ರಾಜ್​ ಕುಂದ್ರ ನೀಡಿದ್ದರು.


    ಇದೀಗ ತಾವು ಕಳೆದ ಕೆಲ ಕಷ್ಟದ ದಿನ ಮತ್ತು ಜೈಲಿನಲ್ಲಿ ಅನುಭವಿಸಿದ ನೋವನ್ನ ರಾಜ್​​ ‘UT 69’ ಚಿತ್ರದ ಮೂಲಕ ಜನರಿಗೆ ತೋರಿಸಲು ಮುಂದಾಗಿದ್ದಾರೆ. ಇದು ರಾಜ್​​​ ಡೆಬ್ಯೂ ಚತ್ರವಾಗಿದ್ದು, ಅದರಲ್ಲಿ ರಾಜ್​ ಎದುರಿಸಿದ ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿದ ಪ್ರಕರಣದಲ್ಲಿ ಬಂಧನವಾಗಿದ್ದು ಹೇಗೆ ಯಾಕೆ ಎಂಬ ಮಾಹಿತಿಯನ್ನ ತೆರೆ ಮೇಲೆ ತರುವ ಪ್ರಯತ್ನವನ್ನ ಮಾಡಲಾಗಿದೆ.


    ಸದ್ಯ ಈ ಚಿತ್ರದ ಟ್ರೇಲ್ ಅ.18 ರಂದು ಬಿಡುಗಡೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ರಾಜ್​​ ವೇದಿಕೆ ಮೇಲೆಯೇ ಭಾವುಕರಾಗಿದ್ದಾರೆ. ನನಗೆ ಏನು ಬೇಕಾದರೂ ಹೇಳಿ. ಆದರೆ ನನ್ನ ಕುಟುಂಬವನ್ನು ಈ ವಿಚಾರದಲ್ಲಿ ಎಳೆಯಬೇಡಿ. ಆದಷ್ಟು ಬೇಗ ನಿಮಗೆ ಸತ್ಯಸತ್ಯಾತೆ ತಿಳಿದು ಬರುತ್ತೆ. ಇದರಲ್ಲಿ ನನ್ನ ಕುಟುಂಬದ ತಪ್ಪಿಲ್ಲ ಎಂದು ಭಾವಯಕ ಮಾತುಗಳನ್ನಾಡಿದ್ದಾರೆ.


    ‘ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ವಿವಿಧ ಆ್ಯಪ್ಗಳ ಮೂಲಕ ರಿಲೀಸ್ ಮಾಡುತ್ತಿದ್ದಾರೆ ಎಂದು ಫೆಬ್ರವರಿಯಲ್ಲೇ ಕ್ರೈಮ್ ಬ್ರ್ಯಾಂಚ್ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳ ನಿರ್ಮಾಣದ ಪ್ರಮುಖ ಆರೋಪಿ ರಾಜ್ ಕುಂದ್ರಾ ಅವರೇ ಆಗಿದ್ದಾರೆ. ಸದ್ಯ ಅವರನ್ನು ಬಂಧಿಸಿದ್ದೇವೆ’ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಈ ಹಿಂದೆ ಹೇಳಿದ್ದರು.


    45 ವರ್ಷದ ರಾಜ್‌ ಕುಂದ್ರಾ ನಟಿ ಶಿಲ್ಪಾ ಶೆಟ್ಟಿ ಅವರ ಜೊತೆ 2009ರಲ್ಲಿ ವಿವಾಹವಾಗಿದ್ದರು. ಇದು ಅವರಿಗೆ 2ನೇ ವಿವಾಹವಾಗಿತ್ತು. ಈ ದಂಪತಿಗೆ ವಿಹಾನ್ ರಾಜ್ ಎಂಬ 9 ವರ್ಷದ ಮಗನಿದ್ದಾನೆ. ವರ್ಷಗಳ ಹಿಂದೆ ಸರೋಗೆಸಿ ಮೂಲಕ ಸಮಿಷಾ ಎಂಬ ಹೆಣ್ಣು ಮಗುವನ್ನು ಈ ದಂಪತಿ ಪಡೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts